Punjab New CM ಪಂಜಾಬ್ ಸರ್ಕಾರ ರಚನೆ ತಯಾರಿ ಬೆನ್ನಲ್ಲೇ ಎಂಪಿ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ!

  • ಮಾ.16ಕ್ಕೆ ಪಂಜಾಬ್‍ನಲ್ಲಿ ಹೊಸ ಸರ್ಕಾರ ರಚನೆ
  • ಎಂಪಿ ಸ್ಥಾನಕ್ಕೆ ಭಗವಂತ್ ಸಿಂಗ್ ಮಾನ್ ರಾಜೀನಾಮೆ
  • ಪಂಜಾಬ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಪ್
Punjab CM designate Bhagwant Mann tenders resignation from membership of Lok Sabha Sangrur constituency ckm

ಚಂಡಿಗಢ(ಮಾ.14): ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಹೊಸ ಸರ್ಕಾರ ರಚನೆ ತಯಾರಿಯಲ್ಲಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಆಪ್ ಹೊಸ ಆಡಳಿತದ ಭರವಸೆ ನೀಡಿದೆ. ಸರ್ಕಾರ ರಚನೆ ತಯಾರಿ ನಡುವೆ ಮಾರ್ಚ್ 16 ರಂದು ಪಂಜಾಬ್ ನೂತನ ಮುಖ್ಯಮಂತ್ರಿಯಾಗಲಿರುವ ಭಗವಂತ್ ಸಿಂಗ್ ಮಾನ್ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಎಂಪಿಯಾಗಿರುವ ಭಗವಂತ್ ಸಿಂಗ್ ಮಾನ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾಗೆ ಸಲ್ಲಿಸಿದ್ದಾರೆ. ಸಂಗ್ರೂರ್ ಜನ ನನ್ನ ಮೇಲಿಟ್ಟಿರುವ ಪ್ರೀತಿಗೆ ಆಭಾರಿಯಾಗಿದ್ದೇನೆ. ಇದೀಗ ಸಂಪೂರ್ಣ ಪಂಜಾಬ್ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದೇನೆ. ಸಂಗ್ರೂರ್ ಜನರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಿದ್ದೇನೆ ಎಂದು ಭಗವಂತ್ ಸಿಂಗ್ ಮಾನ್ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಸಂಗ್ರೂರ್ ಜನರ ಧ್ವನಿ ಲೋಕಸಭೆಯಲ್ಲಿ ಪ್ರತಿಧ್ವನಿಸಲಿದೆ. ಪಂಜಾಬ್‌ನಲ್ಲಿ ಸ್ವಚ್ಚ ಹಾಗೂ ಹೊಸ ಆಡಳಿತವನ್ನು ನೀಡುತ್ತೇನೆ. ಸಂಗ್ರೂರ್ ಸೇರಿದಂತೆ ಸಂಪೂರ್ಣ ಪಂಜಾಬ್ ಅಭಿವೃದ್ಧಿಯೇ ನಮ್ಮ ಗುರಿ ಎಂದು ಭಗವಂತ್ ಮಾನ್ ಸಂಗ್ರೂರ್ ಜನರಿಗೆ ಭರವಸೆ ನೀಡಿದ್ದಾರೆ.

ಭಗವಂತ್ ಮಾನ್ ಸಿಎಂ ಆಗುವ ಮೊದಲೇ ಭಾರಿ ಸಂಚಲನ, ಸಿಧು ಪತ್ನಿ ಸೇರಿ 122 ನಾಯಕರ ಭದ್ರತೆ ವಾಪಸ್!

ರೋಡ್‌ ಶೋ ಮೂಲಕ ಜನತೆಗೆ ಆಪ್‌ ಧನ್ಯವಾದ
ಪಂಜಾಬ್‌ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಆಮ್‌ ಆದ್ಮಿ ಪಕ್ಷದ ನಾಯಕರು ಅಮೃತಸರದಲ್ಲಿ ಭರ್ಜರಿ ರೋಡ್‌ ಶೋ ನಡೆಸುವ ಮೂಲಕ ಪಂಜಾಬ್‌ನ ಜನರಿಗೆ ಧನ್ಯವಾದ ಅರ್ಪಿಸಿದರು. ಈ ರಾರ‍ಯಲಿಯಲ್ಲಿ ಆಪ್‌ನ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಪಂಜಾಬ್‌ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ ಮಾನ್‌ ಸೇರಿದಂತೆ ಜಯಗಳಿಸಿದ ಎಲ್ಲಾ ಹೊಸ ಶಾಸಕರು ಭಾಗವಹಿಸಿದ್ದರು. ಪಂಜಾಬ್‌ನ 117 ಕ್ಷೇತ್ರಗಳಲ್ಲಿ 92ರಲ್ಲಿ ಆಪ್‌ ಜಯಗಳಿಸಿತ್ತು.

ಅಮೃತಸರದ ಕಚೇರಿ ಚೌಕದಿಂದ ಆರಂಭವಾದ ರೋಡ್‌ಶೋನಲ್ಲಿ ತೆರೆದ ವಾಹನದಲ್ಲಿದ್ದ ಕೇಜ್ರಿವಾಲ್‌ ಮತ್ತು ಮಾನ್‌ ಅವರಿಗೆ ಕಾರ್ಯಕರ್ತರು ಹೂವಿನ ಮಳೆಗರೆದರು. ತ್ರಿವರ್ಣಧ್ವಜ ಮತ್ತು ಪಕ್ಷದ ಧ್ವಜಗಳನ್ನು ಹಿಡಿದಿದ್ದ ಸಾವಿರಾರು ಕಾರ್ಯಕರ್ತರು ರಾರ‍ಯಲಿಯಲ್ಲಿ ಭಾಗವಹಿಸಿದ್ದರು. ರೋಡ್‌ ಶೋಗು ಮೊದಲು ಸ್ವರ್ಣಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಭಗತ್‌ಸಿಂಗ್‌ ಹುಟ್ಟೂರಿನಲ್ಲಿ ಮಾನ್‌ ಪ್ರಮಾಣ
ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಜಯಗಳಿಸುತ್ತಿದ್ದಂತೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದ್ದ ಭಗವಂತ ಮಾನ್‌ ಅವರು ಭಗತ್‌ ಸಿಂಗ್‌ ಅವರ ಹುಟ್ಟೂರಾದ ಖಟ್ಕಾರ್‌ಕಾಲನ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಘೋಷಿಸಿದ್ದಾರೆ. ‘ಪ್ರಮಾಣ ವಚನ ಸ್ವೀಕಾರ ಸಮಾರಂಭ ರಾಜಭವನದ ಬದಲು ಖಟ್ಕಾರ್‌ಕಾಲನ್‌ನಲ್ಲಿ ನಡೆಯಲಿದೆ. ಈ ದಿನಾಂಕವನ್ನು ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಮಾನ್‌ ಹೇಳಿದ್ದಾರೆ. ಇದರೊಂದಿಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಮುಖ್ಯಮಂತ್ರಿಯ ಫೋಟೋವನ್ನು ಅಳವಡಿಸಲಾಗುವುದಿಲ್ಲ. ಎಲ್ಲಾ ಕಚೇರಿಗಳಲ್ಲಿ ಭಗತ್‌ ಸಿಂಗ್‌ ಮತ್ತು ಡಾ.ಅಂಬೇಡ್ಕರ್‌ ಅವರ ಫೋಟೋಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಮ್ಮ ಮುಂದಿನ ಗುರಿ ಹಿ.ಪ್ರದೇಶ: ಆಮ್‌ಆದ್ಮಿ 
ಆಮ್‌ ಆದ್ಮಿ ಪಕ್ಷ (ಎಎಪಿ) ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿರುವ ಬೆನ್ನಲ್ಲೇ, ಹಿಮಾಚಲ ಪ್ರದೇಶದ ಮೇಲೆ ಕಣ್ಣಿಟ್ಟು ಶುಕ್ರವಾರ ಭರ್ಜರಿ ರೋಡ್‌ ಶೋ ನಡೆಸಿದೆ. ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ನೇತೃತ್ವದಲ್ಲಿ ಆಪ್‌ ನಾಯಕರು ರೋಡ್‌ ಶೋ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಜೈನ್‌, ‘ಹಿಮಾಚಲ ಪ್ರದೇಶದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಆಪ್‌ ಸರ್ಕಾರ ರಚನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ತಿಂಗಳು ಶಿಮ್ಲಾದಲ್ಲಿ ನಡೆಯಲಿರುವ ಸ್ಥಳೀಯ ಚುನಾವಣೆಯಲ್ಲಿಯೂ ಸ್ಪರ್ಧಿಸಲಿದೆ ಎಂದು ಜೈನ್‌ ತಿಳಿಸಿದರು. ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ರಾಜ್ಯದ ಎಲ್ಲಾ 68 ಕ್ಷೇತ್ರಗಳಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಆಪ್‌ ನಿರ್ಧರಿಸಿದೆ.

Latest Videos
Follow Us:
Download App:
  • android
  • ios