Security Withdrawn ಭಗವಂತ್ ಮಾನ್ ಸಿಎಂ ಆಗುವ ಮೊದಲೇ ಭಾರಿ ಸಂಚಲನ, ಸಿಧು ಪತ್ನಿ ಸೇರಿ 122 ನಾಯಕರ ಭದ್ರತೆ ವಾಪಸ್!

  • ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೆ ಅಧಿಕಾರ ಚಲಾವಣೆ
  • ಪಂಜಾಬ್ ಡಿಜಿಪಿ ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ ಭಗವಂತ್ ಮಾನ್
  • ಚರ್ಚೆ ಬೆನ್ನಲ್ಲೇ 122 ನಾಯಕರ ಭದ್ರತೆ ಪಾಪಸ್
Bhagwant Mann withdraws security of Punjab 122 politicians including former Congress ministers before swearing ckm

ಚಂಡಿಗಢ(ಮಾ.12): ಪಂಜಾಬ್‌  ವಿಧಾನಸಭಾ ಚುನಾವಣೆಯಲ್ಲಿ(Punjab Assembly Election 2022) ಆಮ್ ಆದ್ಮಿ ಪಾರ್ಟಿ 92 ಸ್ಥಾನಗಳನ್ನು ಗೆದ್ದು ಇದೀಗ ಸರ್ಕಾರ ರಚಿಸಲು ತಯಾರಿ ಆರಂಭಿಸಿದೆ. ನೂತನ ಮುಖ್ಯಮಂತ್ರಿಯಾಗಿ ಭಗವಂತ್ ಸಿಂಗ್ ಮಾನ್(Bhagwant Singh Mann) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಭಗವಂತ್ ಮಾನ್ ಅಧಿಕಾರಕ್ಕೇರುವ ಮೊದಲೇ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪತ್ನಿ ಸೇರಿದಂತೆ 122 ಮಾಜಿ ಶಾಸಕರ ಭದ್ರತೆಯನ್ನು(Security) ವಾಪಸ್ ಪಡೆದುಕೊಂಡಿದ್ದಾರೆ.

ಮಾರ್ಚ್ 16 ರಂದು ಭಗವಂತ್ ಮಾನ್ ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನವೆ ಪಂಜಾಬ್ ಅಡೀಶನಲ್ ಡೈರೆಕ್ಟರ್ ಜನರಲ್ ವಿಕೆ ಭವಾರ ಭೇಟಿಯಾದ ಭಗಂವತ್ ಮಾನ್ ಮಹತ್ವದ ಸಭೆ ನಡೆಸಿದ್ದಾರೆ. ಈ ಸಭೆ ಬಳಿ ಪಂಜಾಬ್ ಮಾಜಿ ಶಾಸಕರ ಭದ್ರತೆಯನ್ನು ವಾಪಸ್ ಪಡೆದುಕೊಂಡಿದ್ದಾರೆ. 122 ರಾಜಕೀಯ ನಾಯಕರ ಭದ್ರತೆಯನ್ನು ವಾಪಸ್ ಪಡೆಯಲಾಗಿದೆ. ಇದರಲ್ಲಿ ಬಹುತೇಕ ಕಾಂಗ್ರೆಸ್ ನಾಯಕರೇ ಇದ್ದಾರೆ.

Punjab CM ಪಂಜಾಬ್ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್!

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು, ಮಾಜಿ ಸಂಪುಟ ಸಚಿವ, ಮಾಜಿ ಅಸೆಂಬ್ಲಿ ಸ್ಪೀಕರ್ ಸೇರಿದಂತೆ ಹಲವರ ಪೊಲೀಸ್ ಭದ್ರತೆಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್, ರಾಜ್ ಕುಮಾರ್ ವರ್ಕಾ, ಭರತ್ ಭೂಷಣ್ ಆಶು, ರಣದೀಪ್ ಸಿಂಗ್ ನಾಭಾ, ವಿಧಾನಸಭಾ ಮಾಜಿ ಉಪ ಸ್ಪೀಕರ್ ಅಜೈಬ್ ಸಿಂಗ್ ಭಟ್ಟಿ, ವಿಧಾನಸಭಾ ಮಾಜಿ ಸ್ಪೀಕರ್ ರಾಣಾ ಕೆಪಿ ಸಿಂಗ್, ರಜಿಯಾ ಸುಲ್ತಾನಾ, ಪರ್ಗತ್ ಸಿಂಗ್, ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸೇರಿದಂತೆ ಹಲವು ನಾಯಕರ ಭದ್ರತೆ ವಾಪಸ್ ಪಡೆಯಲಾಗಿದೆ. 

ಮಾ.16ಕ್ಕೆ ಮುಖ್ಯಮಂತ್ರಿಯಾಗಿ ಮಾನ್‌ ಪ್ರಮಾಣ
ಪಂಜಾಬ್‌ನಲ್ಲಿ ಭರ್ಜರಿ ಜಯದೊಂದಿಗೆ ಸಿಎಂ ಪಟ್ಟಏರಲು ಸಜ್ಜಾಗಿರುವ ಭಗವಂತ್‌ ಸಿಂಗ್‌ ಮಾನ್‌, ಮಾ.16ರಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿಗೆ ಶುಕ್ರವಾರ ಇಲ್ಲಿ ಆಮ್‌ಅದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಯ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಮಾನ್‌ ಈ ವಿಷಯ ತಿಳಿಸಿದರು. ಕೇಜ್ರಿವಾಲ್‌ ಎದುರಾದ ಕೂಡಲೇ ಅವರ ಕಾಲಿಗೆ ಎರಗಿದರು. ಇದೇ ವೇಳೆ ಕೇಜ್ರಿವಾಲ್‌ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಜೊತೆಗೆ ಮಾ.13ರಂದು ಅಮೃತಸರದಲ್ಲಿ ಬೃಹತ್‌ ರೋಡ್‌ ಶೋ ಹಮ್ಮಿಕೊಂಡಿರುವುದಾಗಿ ಕೂಡಾ ಮಾನ್‌ ತಿಳಿಸಿದರು.

Election Result 2022 ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಪಂಜಾಬ್‌ನ 117 ಸ್ಥಾನಗಳ ಪೈಕಿ ಆಪ್‌ 92 ಸ್ಥಾನ ಗೆದ್ದುಕೊಂಡಿದ್ದು, ಧುರಿ ಕ್ಷೇತ್ರದಲ್ಲಿ ಮಾನ್‌ ಅವರು 58206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಂಜಾಬ್‌ನ ಸತೋಜ್‌ನಲ್ಲಿ 1973ರಲ್ಲಿ ಜನಿಸಿದ ಮಾನ್‌ ಸುನಾಮ್‌ನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿದರು. 2011ರಲ್ಲಿ ಪೀಪಲ್ಸ್‌ ಪಾರ್ಟಿ ಆಫ್‌ ಪಂಜಾಬ್‌ ಸೇರಿದ ಇವರು 2012ರಲ್ಲಿ ಲೆಹ್ರಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನನುಭವಿಸಿದರು. ನಂತರ 2014ರಲ್ಲಿ ಆಮ್‌ ಆದ್ಮಿ ಪಕ್ಷದಿಂದ ಸಂಗ್ರೂರ್‌ನಿಂದ ಲೋಕಸಭೆಗೆ ಸ್ಪರ್ಧಿಸಿ ಜಯಗಳಿಸಿದರು. 2017ರಲ್ಲಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನನುಭವಿಸಿದರು. 2017ರಲ್ಲಿ ಮತ್ತೊಮ್ಮೆ ಸಂಗ್ರೂರ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಗೆದ್ದರು. 2022ರ ಚುನಾವಣೆಯಲ್ಲಿ ಪಕ್ಷ ಇವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು.

Latest Videos
Follow Us:
Download App:
  • android
  • ios