* ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಎರಡನೇ ಬಾರಿಗೆ ವಿವಾಹ* 2015ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದ 48 ವರ್ಷದ ಮಾನ್* ಡಾ ಗುರುಪ್ರೀತ್ ಕೌರ್ ಅವರನ್ನು ಮದುವೆಯಾಗಲಿದ್ದಾರೆ ಪಂಜಾಬ್ ಸಿಎಂ
ಚಂಡೀಗಢ(ಜು.07): ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಎರಡನೇ ಬಾರಿಗೆ ವಿವಾಹವಾಗಲಿದ್ದಾರೆ. 48 ವರ್ಷದ ಮಾನ್ 2015ರಲ್ಲಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ಮುಖ್ಯಮಂತ್ರಿಗೆ ಇಬ್ಬರು ಮಕ್ಕಳಿದ್ದಾರೆ. ಇಂದು ಅವರು ಡಾ ಗುರುಪ್ರೀತ್ ಕೌರ್ ಅವರನ್ನು ಮದುವೆಯಾಗಲಿದ್ದಾರೆ. ಮಾನ್ ಅವರ ತಾಯಿ, ಸಹೋದರಿ, ಸಂಬಂಧಿಕರು ಮತ್ತು ಇತರ ಕೆಲವು ಅತಿಥಿಗಳು ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇಂದು ನಡೆಯಲಿರುವ ಭಗವಂತ ಮಾನ್ ಅವರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ರದ್ದಾಗಿವೆ. ಆಮ್ ಆದ್ಮಿ ಪಕ್ಷದ ಮೂಲಗಳ ಪ್ರಕಾರ, ಮದುವೆಯ ಎಲ್ಲಾ ಖರ್ಚುಗಳನ್ನು ಭಗವಂತ್ ಮಾನ್ ಭರಿಸುತ್ತಾರೆ. ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಬುಧವಾರ ಸಂಜೆಯವರೆಗೂ ಯಾವುದೇ ಶಾಸಕರಿಗೆ ಆಹ್ವಾನ ಬಂದಿಲ್ಲ. ಇದರಲ್ಲಿ ಸಿಎಂ ಕಚೇರಿಯ ಕೆಲ ಅಧಿಕಾರಿಗಳು ಭಾಗಿಯಾಗಲಿದ್ದಾರೆ. 80 ಅತಿಥಿಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
2ನೇ ಬಾರಿ ಹಸೆಮಣೆ ಏರಲು ಸಜ್ಜಾದ ಪಂಜಾಬ್ ಸಿಎಂ, ನಾಳೆಯೇ ಮದುವೆ!
ಗುರುಪ್ರೀತ್ ಕೌರ್ ಯಾರು?
32 ವರ್ಷದ ಗುರುಪ್ರೀತ್ ಕೌರ್ ವೈದ್ಯೆ. ಅವರು ಮಹರ್ಷಿ ಮಾರ್ಕಂಡೇಶ್ವರ ವಿಶ್ವವಿದ್ಯಾನಿಲಯ, ಮುಲ್ಲಾನಾ, ಅಂಬಾಲಾದಲ್ಲಿ MBBS ಅಧ್ಯಯನ ಮಾಡಿದ್ದಾರೆ. ಅವರು ಮೂವರು ಸಹೋದರಿಯರಲ್ಲಿ ಕಿರಿಯವರಾಗಿದ್ದಾರೆ. ಇಬ್ಬರು ಸಹೋದರಿಯರು ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಇದು ಅರೇಂಜ್ಡ್ ಮ್ಯಾರೇಜ್ ಎಂದು ಹೇಳಲಾಗಿದೆ. ತಾಯಿ ಹರ್ಪಾಲ್ ಕೌರ್ ಅವರಿಗೆ ಗುರುಪ್ರೀತ್ ಕುಟುಂಬ ತಿಳಿದಿದೆ ಎಂದು ಹೇಳಲಾಗುತ್ತಿದೆ.
ಹಳ್ಳಿಯ ಜನರಲ್ಲಿ ಖುಷಿ
ಇಂಗ್ಲಿಷ್ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಗುರ್‌ಪ್ರೀತ್‌ನ ಹಳ್ಳಿ ಪೆಹೋವಾ. ನೆರೆಹೊರೆಯವರು, 'ಐದು ದಿನಗಳ ಹಿಂದೆ ಕುಟುಂಬವು ಚಂಡೀಗಢಕ್ಕೆ ತೆರಳಿತ್ತು, ಆದರೆ ಗುರ್‌ಪ್ರೀತ್ ಪಂಜಾಬ್ ಸಿಎಂ ಅವರನ್ನು ಮದುವೆಯಾಗುತ್ತಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ. ಪಂಜಾಬ್ ಸಿಎಂ ನಮ್ಮ ಅಳಿಯನಾಗುತ್ತಿರುವುದು ನಮಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ.
ಮದುವೆಗಾಗಿ ಮಾನ್‌ಗೆ ತಾಯಿ ಒತ್ತಡ
ಮಾನ್ ಅವರ ತಾಯಿ ಹರ್ಪಾಲ್ ತಮ್ಮ ಸ್ವಗ್ರಾಮ ಸತೋಜ್‌ನಿಂದ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಎಎಪಿಯ ಮುಖ್ಯ ವಕ್ತಾರ ಮಲ್ವಿಂದರ್ ಸಿಂಗ್ ಕಾಂಗ್ ಅವರು ಹರ್ಪಾಲ್ ಮತ್ತು ಮನ್ ಅವರ ಸಹೋದರಿ ಮನ್‌ಪ್ರೀತ್ ಅವರಿಗೆ ಗುರ್‌ಪ್ರೀತ್ ಕೌರ್ ಅವರ ಪರಿಚಯವಿದೆ ಎಂದು ಹೇಳಿದ್ದಾರೆ. ಅವರು, 'ಕುಟುಂಬ ದೂರದ ಬಂಧುಗಳು, ವಧುವಿನ ಮನೆಯವರು ಕೆಲವು ವರ್ಷಗಳಿಂದ ತಾಯಿಯೊಂದಿಗೆ ಸಂಪರ್ಕದಲ್ಲಿದ್ದರು. ಮರು ಮದುವೆಯಾಗುವಂತೆ ಸಿಎಂ ತಾಯಿ ಒತ್ತಡ ಹೇರುತ್ತಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
2 ವರ್ಷದ ಮದುವೆ ಮಾತುಕತೆ, ಚುನಾವಣಾ ಪ್ರಚಾರದಲ್ಲೂ ಸಾಥ್: ಸಿಎಂ ಮಾನ್ ಪತ್ನಿ ಡಾ. ಗುರುಪ್ರೀತ್ ಕೌರ್ ಮಾತುಕತೆ!
ಮಾನ್ ಅವರ ಎರಡನೇ ಮದುವೆ
ಮಾನ್ ಎರಡನೇ ವಿವಾಹವಾಗಲಿದ್ದಾರೆ. ಅವರು ಮೊದಲು ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗಳು ಸೀರತ್ ಕೌರ್ ಮಾನ್, 21, ಮತ್ತು ಮಗ ದಿಲ್ಶನ್ ಮಾನ್, 17, ಈ ವರ್ಷ ಮಾರ್ಚ್ 16 ರಂದು ಮಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ಯುಎಸ್‌ನಿಂದ ಬಂದಿದ್ದರು.
