ಯಾವುದೇ ವೇದಿಕೆ ಇರ್ಲಿ, ಅಂತಾರಾಷ್ಟ್ರೀಯ ವೇದಿಕೆ ಇರಲಿ ಮೋದಿ ಹಿಂದಿಯಲ್ಲೇ ಮಾತನಾಡುತ್ತಾರೆ. ಆದರೆ ಉಗ್ರರಿಗೆ ಎಚ್ಚರಿಕೆ ನೀಡುವಾಗ ಪ್ರಧಾನಿ ಮೋದಿ ತಮ್ಮ ಮಾತನ್ನು ಇಂಗ್ಲಿಷ್‌ಗೆ ಬದಲಾಯಿಸಿದ್ದರೆ. ಈ ಮೂಲಕ ಎಚ್ಚರಿಕೆಯನ್ನು ಜಗತ್ತಿಗೆ ತಿಳಿಯುವಂತೆ ಹೇಳಿದ್ದರೆ.
ನವದೆಹಲಿ(ಏ.24) ಪೆಹಲ್ಗಾಮ್ ದಾಳಿ ನಡೆದ 48 ಗಂಟೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಘಟನೆಗೆ ಪ್ರತೀಕಾರ ಕುರಿತು ಮಾತನಾಡಿದ್ದಾರೆ. ಬಿಹಾರದ ಮಧುಬಾನಿಯಲ್ಲಿ ಆಯೋಜಿಸಿದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಉಗ್ರರಿಗೆ ನೀಡಿದ ಸಂದೇಶವನ್ನು ಇಂಗ್ಲಿಷ್‌ನಲ್ಲಿ ನೀಡಿದ್ದಾರೆ. ಬಿಹಾರದ ಮಣ್ಣಿನಲ್ಲಿ ನಿಂತು ಹೇಳುತ್ತಿದ್ದೇನೆ, ಭಾರತ ಪ್ರತಿಯೊಬ್ಬ ಉಗ್ರನಿಗೆ ತಕ್ಕ ಶಿಕ್ಷೆ ನೀಡುತ್ತೆ. ಉಗ್ರರಿಗೆ, ಉಗ್ರರಿಗೆ ಬೆಂಬಲ ನೀಡಿದವರಿಗೆ ಊಹೆಗೂ ನಿಲುಕದ ಶಿಕ್ಷೆ ನೀಡುವುದಾಗಿ ಮೋದಿ ಹೇಳಿದ್ದಾರೆ. ಈ ಮಾತನ್ನು ಮೋದಿ ಇಂಗ್ಲಿಷ್‌ನಲ್ಲಿ ಹೇಳಿದ್ದಾರೆ.
ಹಿಂದಿಯಿಂದ ಇಂಗ್ಲೀಷ್‌ನಲ್ಲಿ ಎಚ್ಚರಿಕೆ
ಪ್ರಧಾನಿ ಮೋದಿ ವೇದಿಕೆ ಯಾವುದೇ ಇರಲಿ, ಎದುರಿಗೆ ಅಮರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಬಿಲ್ ಗೇಟ್ಸ್, ಎಲಾನ್ ಮಸ್ಕ್ ಸೇರಿದಂತೆ ಯಾರೇ ಆಗಲಿ ಹಿಂದಿಯಲ್ಲೇ ಮಾತನಾಡುತ್ತಾರೆ. ಅವರು ಭಾಷಾಂತಕಾರರನ್ನು ಇಟ್ಟುಕೊಂಡು ಉತ್ತರಿಸುತ್ತಾರೆ. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಹಿಂದಿ ಭಾಷಣದ ನಡುವೆ ಇಂಗ್ಲಿಷ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಬಿಹಾರದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪೆಹಲ್ಗಾಮ್ ಘಟನೆ ಕುರಿತು ಮಾತನಾಡಿದ್ದಾರೆ. ಭಾರತದ ಸ್ಪೂರ್ತಿ, ಏಕತೆ, ಐಕ್ಯತೆಯನ್ನು ಈ ದಾಳಿ ಮೂಲಕ ಹಿಮ್ಮೆಟ್ಟಿಸಲು ಸಾಧ್ಯವಿಲ್ಲ. ದಾಳಿ ಮಾಡಿದ ಉಗ್ರರಿಗೆ ಭಾರತ ಶಿಕ್ಷೆ ನೀಡದೆ ಮುಂದೆ ಹೋಗಲ್ಲ. ಭಾರತ ಒಗ್ಗಟ್ಟಾಗಿದೆ. ಈ ದಾಳಿಗೆ ಆಕ್ರೋಶ ಹೆಚ್ಚಾಗಿದೆ. ಉಗ್ರರಿಗೆ ಯಾರೂ ಊಹಿಸದ ಶಿಕ್ಷೆ ಕೊಡುತ್ತೇವೆ ಎಂದು ಮೋದಿ ಎಚ್ಚರಿಸಿದ್ದಾರೆ.
ಪೆಹಲ್ಗಾಮ್ ಸೇಡು, ಭಾರತದ ಸಂಭಾವ್ಯ ದಾಳಿಗೆ ಹೆದರಿ ಪಾಕಿಸ್ತಾನದಿಂದ ಮಿಲಿಟರಿ ತಾಲೀಮು ಶುರು
ಪಾಕಿಸ್ತಾನದ ಮಿಲಿಟರಿ ತಾಲೀಮು
ಪ್ರಧಾನಿ ನರೇಂದ್ರ ಮೋದಿ ಘಟನೆ ಕುರಿತು ಎಚ್ಚರಿಕೆ ನೀಡಿದ್ದಾರೆ. ಇದೀಗ ಉಗ್ರರಿಗೆ ಮಾತ್ರವಲ್ಲ ಪಾಕಿಸ್ತಾನಕ್ಕೂ ಆತಂಕ ಹೆಚ್ಚಾಗಿದೆ. ಕಾರಣ ಇದರ ಪ್ರತಿಕಾರಕ್ಕೆ ಭಾರತ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಸಂಘಟನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಪಾಕಿಸ್ತಾನ ಸರ್ಕಾರ ಈಗಾಗಲೇ ಮಿಲಿಟರಿ ತಾಲೀಮು ಆರಂಭಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ 42ಕ್ಕೂ ಹೆಚ್ಚು ಉಗ್ರರ ಕ್ಯಾಂಪ್‌ನ್ನು ಭಾರತೀಯ ಸೇನೆ ಗುರುತಿಸಿದೆ. ಇದೀಗ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಕುರಿತು ಪಾಕಿಸ್ತಾನ ಆತಂಕ ಹೆಚ್ಚಾಗಿದೆ.
ಪೆಹಲ್ಗಾಮ್ ಭಯೋತ್ಪಾದಕ ದಾಳಿ
ಜಮ್ಮು ಮತ್ತು ಕಾಶ್ಮೀರದ ಪ್ರವಾಸಿಗ ಸ್ವರ್ಗ ಎಂದೇ ಖ್ಯಾತಿಗೊಂಡಿರುವ ಪೆಹಲ್ಗಾಮ್ ಬಳಿ ಭಯೋತ್ಪಾದಕ ದಾಳಿ ನಡೆದಿದೆ. ಭಾರತದ ಹಲವು ರಾಜ್ಯಗಳಿಂದ ಪ್ರವಾಸಕ್ಕೆ ತೆರಳಿದ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಪ್ರಮುಖವಾಗಿ ಹಿಂದೂಗಳನ್ನು ಗುರಿಯಾಗಿಸಿ ನಡೆಸಿದ ದಾಳಿ ಇದಾಗಿತ್ತು. ಉಗ್ರರು ಹಿಂದೂ ಅನ್ನೋದು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದರು.
