ಭಾರತ ಜೊತೆ ಸಂಘರ್ಷ: ಮಡಿದ ಸೈನಿಕರಿಗೆ ಚೀನಾ ಪತ್ರಿಕೆ ಕಂಬನಿ!
ಮುಷ್ಟಿಯುದ್ಧದಲ್ಲಿ ಮಡಿದ ಚೀನಾ ಯೋಧರಿಗೆ ಮುಖವಾಣಿ ಕಂಬನಿ| ಸೂಕ್ತ ಸಮಯದಲ್ಲಿ ಚೀನಾ ಯೋಧರ ಸಾವು ಬಹಿರಂಗ| ಚೀನಾ ಮುಖವಾಣಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ಸಂಪಾದಕೀಯ| ಮೃತ ಯೋಧರ ಕುಟುಂಬಕ್ಕೆ ಸಾಂತ್ವನ ತಿಳಿಸಿದ ಪತ್ರಿಕೆ| ನಮ್ಮ ತಂಟೆಗೆ ಬಂದ್ರ ಹುಷಾರ್: ಭಾರತಕ್ಕೆ ಎಚ್ಚರಿಕೆ
ನವದೆಹಲಿ/ಬೀಜಿಂಗ್(ಜೂ.27): ಭಾರತದ ಜತೆಗಿನ ‘ಮುಷ್ಟಿಯುದ್ಧ’ದಲ್ಲಿ ತನ್ನ ಯೋಧರು ಮೃತರಾಗಿದ್ದನ್ನು ಚೀನಾ ಈವರೆಗೆ ಒಪ್ಪದೇ ಇದ್ದರೂ, ಅವರ ಕುಟುಂಬಗಳಿಗೆ ತನ್ನ ಮುಖವಾಣಿ ಪತ್ರಿಕೆಯ ಮೂಲಕ ಸಾಂತ್ವನ ಹೇಳಿದೆ. ಈ ಕುರಿತು ಚೀನಾ ಸರ್ಕಾರದ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಸಂಪಾದಕೀಯ ಬರೆಯಲಾಗಿದೆ. ಅದರಲ್ಲಿ ‘ಮೃತ ಯೋಧರನ್ನು ಸೇನೆಯಲ್ಲಿ ಗೌರವದಿಂದ ನೋಡಿಕೊಳ್ಳಲಾಗಿದೆ. ಅವರ ಸಾವಿನ ಬಗ್ಗೆ ಸೂಕ್ತ ಸಮಯದಲ್ಲಿ ಸಮಾಜಕ್ಕೆ ತಿಳಿಸಲಾಗುತ್ತದೆ. ಇದರಿಂದ ಈ ಹೀರೋಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಹಾಗೂ ಸದಾ ಸ್ಮರಿಸಿದಂತಾಗುತ್ತದೆ’ ಎಂದು ಸಂಪಾದಕ ಹು ಕ್ಸಿನ್ ಅವರು ಸಂಪಾದಕೀಯದಲ್ಲಿ ತಿಳಿಸಿದ್ದಾರೆ.
ಚೀನಿಯರಿಂದ ಮತ್ತೆ ರಾಡ್ ರೌಡಿಸಂ: ಒಪ್ಪಂದದ ಉಲ್ಲಂಘನೆ ಸ್ಪಷ್ಟ!
ಇದೇ ವೇಳೆ ‘ಚೀನಾದ ಭದ್ರತೆ ಯೋಧರ ಮೇಲೇ ಅವಲಂಬಿತವಾಗಿದೆ. ಈವರೆಗೂ ಚೀನಾ ಸೇನೆ ಯಾವುದೇ ಸಾವು-ನೋವಿನ ಅಂಕಿ-ಅಂಶ ನೀಡಿಲ್ಲ. ಚೀನಾದ ಒಳಿತಿಗಾಗಿ ಈ ಮಾಹಿತಿ ನೀಡಲಾಗಿಲ್ಲ ಎಂದು ಒಬ್ಬ ನಿವೃತ್ತ ಯೋಧನಾಗಿ ಹಾಗೂ ಪತ್ರಕರ್ತನಾಗಿ ನಾನು ಭಾವಿಸಿದ್ದೇನೆ’ ಎಂದಿದ್ದಾರೆ. ಚೀನಾದ 40 ಯೋಧರು ಸಾವನ್ನಪ್ಪಿದ್ದಾರೆ. 16 ಶವಗಳನ್ನು ಭಾರತದ ಸೇನೆ ಹಸ್ತಾಂತರಿಸಿದೆ’ ಎಂಬ ಭಾರತದ ಮಾಧ್ಯಮದ ವರದಿಗಳು ‘ಊಹಾಪೋಹಗಳು’ ಎಂದು ಸಂಪಾದಕರು ಕರೆದಿದ್ದಾರೆ.
ಕೇಂದ್ರದ ಬಂಪರ್, ಮೂರು ಪಟ್ಟು ವೇತನ ಹೆಚ್ಚಳ, ಯಾರಿಗೆ ಸಿಗುತ್ತೆ?
‘ಚೀನಾ ಯೋಧರನ್ನು ಭಾರತ ತಪ್ಪಾಗಿ ತಿಳಿದಿತ್ತು. ಅದಕ್ಕೇ ಈಗ ಚೀನಾ ಯೋಧರು ಭಾರತಕ್ಕೆ ಪಾಠ ಕಲಿಸಿದ್ದಾರೆ. ಚೀನಾ ಸೇನೆ ತನ್ನ ಶಕ್ತಿ ಪ್ರದರ್ಶಿಸಿದೆ. ಅಗತ್ಯ ಸಂದರ್ಭದಲ್ಲಿ ಬಲಪ್ರಯೋಗಕ್ಕೆ ಸಿದ್ಧ ಎಂದು ಸಾಬೀತುಪಡಿಸಿದೆ. ಗಡಿಯಲ್ಲಿ ಮೇಲುಗೈ ಸಾಧಿಸಿದೆ. ಅಂತಾರಾಷ್ಟ್ರೀಯ ಪರಿಸ್ಥಿತಿಯ ಲಾಭ ಪಡೆದು ಚೀನಾ ಜತೆ ಜಗಳಕ್ಕೆ ಬರಬೇಡಿ. ನಮ್ಮ ತಂಟೆಗೆ ಬಂದರೆ ತಿರುಗೇಟು ನೀಡಲು ಶಕ್ತಿಶಾಲಿ ಪಡೆಗಳು ಸಿದ್ಧವಿವೆ ಎಂದಿದ್ದಾರೆ.