ಆಸ್ತಿಯಲ್ಲಿ ಹೆಸರು ಬದಲಾವಣೆ ಮಾಡಬೇಕಿತ್ತು. ವಕೀಲರ ಬಳಿ ಕೇಳಿದರೆ 1.4 ಲಕ್ಷ ರೂಪಾಯಿ ಫೀಸ್ ಕೇಳಿದ್ದಾರೆ. ದುಬಾರಿ ಶುಲ್ಕದಿಂದ ಶಾಕ್ ಆದ ಟೆಕ್ಕಿ, ಚಾಟ್ಜಿಪಿಟಿ ಹಾಗೂ ಜೆಮಿನಿ ಎಐ ಮೂಲಕ ಕೇವಲ 2432 ರೂಪಾಯಿಯಲ್ಲಿ ಕೆಲಸ ಮುಗಿಸಿದ್ದಾರೆ.
ಪುಣೆ (ಅ.29) ಪತಿ ನಿಧನದಿಂದ ಆಸ್ತಿ ಹೆಸರು ಬದಲಾವಣೆ, ಖಾತೆ ವರ್ಗಾವಣೆ ಮಾಡಬೇಕಿತ್ತು. ಮಹಿಳಾ ಟೆಕ್ಕಿ ವಕೀಲರ ಸಂಪರ್ಕಿಸಿದ್ದಾಳೆ. ಆದರೆ ಲಾಯರ್ ಬರೋಬ್ಬರಿ 1.5 ಲಕ್ಷ ರೂಪಾಯಿ ಶುಲ್ಕ ಕೇಳಿದ್ದಾರೆ. ವಕೀಲರ ಫೀಸ್ ಕೇಳಿ ಶಾಕ್ ಆದ ಮಹಿಳಾ ಟೆಕ್ಕಿ, ಚಾಟ್ಜಿಪಿಟಿ ಹಾಗೂ ಜೆಮಿನಿ ಎಐ ಮೂಲಕ ಕೇವಲ 2432 ರೂಪಾಯಿಯಲ್ಲಿ ಕೆಲಸ ಮುಗಿಸಿದ ಘಟನೆ ನಡೆದಿದೆ. ಪುಣೆ ಮಹಿಳಾ ಟೆಕ್ಕಿ ಈ ಘಟನೆಯನ್ನು ವಿವರಿಸಿದ್ದಾರೆ.
ಆಸ್ತಿಯ ಹೆಸರು ಬದಲಾವಣೆ, ಖಾತಾ ವರ್ಗಾವಣೆ ಸೇರಿದಂತೆ ಆಸ್ತಿ ಕುರಿತು ಹಲವು ಕೆಲಸಗಳಿಗೆ ವಕೀಲರು, ಮಧ್ಯವರ್ತಿಗಳು ಬೇಕೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲ ಪ್ರತಿ ದಿನ ಇದರ ಹಿಂದೆ ಅಲೆದಾಡಬೇಕು. ಪುಣೆಯ ಮಹಿಳಾ ಟೆಕ್ಕಿ ಪತಿ ಅಕಾಲಿಕ ನಿಧನರಾಗಿದ್ದರು. ಪತಿಯ ಕಾರ್ಯಗಳನ್ನು ಮುಗಿಸಿ ಕೆಲ ತಿಂಗಳ ಬಳಿಕ ಆಸ್ತಿ ಹೆಸರು ಬದಲಾವಣೆ, ಖಾತೆ ವರ್ಗಾವಣೆ ಮಾಡಬೇಕಿತ್ತು. ಈ ಪ್ರಕ್ರಿಯೆ ಹೇಗೆ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಇದಕ್ಕೆ ಟೆಕ್ಕಿ ಕೂಡ ಹೊರತಾಗಿರಲಿಲ್ಲ. ಹೀಗಾಗಿ ವಕೀಲರ ಸಂಪರ್ಕಿಸಿದ್ದಾರೆ. ಈ ಸಣ್ಣ ಕೆಲಸಕ್ಕಾಗಿ ಬರೋಬ್ಬರಿ ₹1.5 ಲಕ್ಷ ವಕೀಲರ ಶುಲ್ಕ (Legal Fee) ನೀಡುವಂತೆ ಬೇಡಿಕೆ ಇಟ್ಟಿದ್ದರು.
ಎಐ ನೆರವು ಪಡೆದ ಮಹಿಳಾ ಟೆಕ್ಕಿ
ವಕೀಲರು ಕೇಳಿದ ಭಾರಿ ಮೊತ್ತಕ್ಕೆ ಕಂಗಾಲಾಗದ ಈ ಸಾಫ್ಟ್ವೇರ್ ಇಂಜಿನಿಯರ್, ಎಐ ತಂತ್ರಜ್ಞಾನದ ನೆರವು ಪಡೆಯಲು ನಿರ್ಧರಿಸಿದ್ದಾರೆ. ಕೃತಕ ಬುದ್ಧಿಮತ್ತೆ (AI) ಚಾಟ್ಬಾಟ್ಗಳ ಸಹಾಯದಿಂದ ಆಸ್ತಿ ಹಸ್ತಾಂತರ, ಅರ್ಜಿಯ ನಮೂನೆ, ಅಗತ್ಯ ದಾಖಲೆಗಳ ಪಟ್ಟಿ ಮತ್ತು ಕಾನೂನು ಕರಡುಗಳನ್ನು (Legal Draft) ತಾವೇ ರೆಡಿ ಮಾಡಿದ್ದಾರೆ. AI ನೀಡಿದ ಮಾರ್ಗದರ್ಶನದಂತೆಯೇ ಎಲ್ಲಾ ಸರ್ಕಾರಿ ಪತ್ರಗಳನ್ನು ತಾವೇ ಸಿದ್ಧಪಡಿಸಿ ಸಲ್ಲಿಕೆ ಮಾಡಿದ್ದಾರೆ.
2,,432 ರೂಪಾಯಿಗೆ ಎಲ್ಲಾ ಕೆಲಸ ಕ್ಲಿಯರ್
ಅಂತಿಮವಾಗಿ ಮಹಾನಗರ ಪಾಲಿಕೆಗೆ ಪಾವತಿಸಬೇಕಾದ ಅಧಿಕೃತ ಸರ್ಕಾರಿ ನೋಂದಣಿ ಶುಲ್ಕ ₹2,432 ಮಾತ್ರ ಪಾವತಿಸಿ, ಯಶಸ್ವಿಯಾಗಿ ಆಸ್ತಿಯಲ್ಲಿ ಹೆಸರು ಬದಲಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಇದರಿಂದ ವಕೀಲರಿಗೆ ನೀಡಬೇಕಾಗಿದ್ದ ₹1,50,000 ಹಣ ಉಳಿತಾಯವಾಗಿದ್ದು, ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಸಮಯ ಮತ್ತು ಹಣ ಎರಡನ್ನೂ ಹೇಗೆ ಉಳಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
ಈ ಘಚನೆಯನ್ನು ಪುಣೆಯ ಮಹಿಳಾ ಟೆಕ್ಕಿ ಹಂಚಿಕೊಂಡ ಬಳಿಕ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾನ್ಯ ನಾಗರಿಕರಿಗೆ ಕಾನೂನು ಮತ್ತು ಸರ್ಕಾರಿ ಪ್ರಕ್ರಿಯೆಗಳು ಸಂಕೀರ್ಣ ಎನಿಸುವುದರಿಂದ ಮಧ್ಯವರ್ತಿಗಳು ಅತಿಯಾದ ಹಣ ವಸೂಲಿ ಮಾಡುತ್ತಾರೆ, ಆದರೆ AI ಯಂತಹ ಆಧುನಿಕ ಉಪಕರಣಗಳನ್ನು ಸರಿಯಾಗಿ ಬಳಸಿಕೊಂಡರೆ ಮಧ್ಯವರ್ತಿಗಳಿಲ್ಲದೆ ಸ್ವತಃ ಕೆಲಸ ಮುಗಿಸಿಕೊಳ್ಳಬಹುದು ಎಂದು ಅನೇಕ ಟೆಕಿಗಳು ಕಮೆಂಟ್ ಮಾಡಿದ್ದಾರೆ.






