ಕೆಸರು ಹಾರಿಸಿಕೊಂಡು ಹೋದ ಕಾರು ಚಾಲಕನಿಗೆ ಬೈದಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ: ದಂಪತಿಯ ಬಂಧನ

ಸ್ಕೂಟಿಯಲ್ಲಿ ಹೋಗುತ್ತಿದ್ದ ತಮ್ಮ ಮೇಲೆ ಕೆಸರು ಹಾರಿಸಿಕೊಂಡು ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ನಿವೃತ್ತ ಎಂಜಿನಿಯರ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

pune retired engineer and his wife arrested for Fatal assault on woman for scolding car driver who splashed mud on her akb

ಮುಂಬೈ: ಸ್ಕೂಟಿಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಸ್ಕೂಟಿಯಲ್ಲಿ ಸಾಗುತ್ತಿದ್ದವರ ಮೇಲೆ ಕೆಸರು ರಟ್ಟಿಸಿಕೊಂಡು ಹೋಗಿದ್ದು, ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ಕೂಟಿಯನ್ನು ಅಡ್ಡಹಾಕಿ ಮಹಿಳೆ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ನಿನ್ನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ನಿವೃತ್ತ ಇಂಜಿನಿಯರ್ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಸ್ಕೂಟಿಯಲ್ಲಿ ಇದ್ದವರ ಮೇಲೆ ಕೆಸರು ಹಾರಿಸಿದ್ದಲ್ಲದೇ ಓವರ್‌ ಟೇಕ್ ಮಾಡುವುದಕ್ಕೆ ಬಿಡಲಿಲ್ಲ ಎಂದು ಕೋಪಗೊಂಡ ಸ್ವಪ್ನಿಲ್ ಕೆಕ್ರೆ ಎಂಬಾತ ನಂತರ ಸ್ಕೂಟಿಯನ್ನು ಅಡ್ಡಹಾಕಿ ಮಕ್ಕಳನ್ನು ಕರೆದೊಯ್ಯುತ್ತಿದ್ದ 27 ವರ್ಷದ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳೆಯ ಕೂದಲು ಹಿಡಿದು ಎಳೆದಾಡಿ  ಮೂಗಿನ ಮೇಲೆ ಪಂಚ್ ಮಾಡಿದ್ದು, ಇದರ ಪರಿಣಾಮ ಮಹಿಳೆಯ ಮೂಗಿನಿಂದ ರಕ್ತ ಸೋರಲು ಆರಂಭವಾಗಿದೆ. ಈ  ಬಗ್ಗೆ ಮಹಿಳೆ ಜೆರ್ಲಿನ್ ಡಿಸಿಲ್ವಾ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದ ತಮ್ಮ ಕಷ್ಟ ಹೇಳಿಕೊಂಡಿದ್ದರು. ಜೊತೆಗೆ ಪೊಲೀಸರಿಗೂ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ವಪ್ನಿಲ್ ಕೆಕ್ರೆ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ. 

ವಿವಾದಿತ ಐಎಎಸ್ ಅಧಿಕಾರಿ ಪೂಜಾ ನೇಮಕಾತಿ ರದ್ದು ಸಾಧ್ಯತೆ; ಇತ್ತ ತಾಯಿಯ ಕಂಪನಿಗೆ ಬಿತ್ತು ಬೀಗ

ಪುಣೆಯ ಬನೇರ್ ಪಶನ್ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನದ ನಂತರ ಈ  ಘಟನೆ ನಡೆದಿತ್ತು. ಶೆರ್ಟನ್ ಗ್ರ್ಯಾಂಡ್ ಪುಣೆಯಲ್ಲಿ ಕಮ್ಯುನಿಕೇಷನ್ ಮ್ಯಾನೇಜರ್ ಆಗಿರುವ ಜೆರ್ಲಿನ್ ಡಿಸಿಲ್ವಾ ಅವರು ತಮ್ಮ ಇಬ್ಬರು ಮಕ್ಕಳ ಜೊತೆ ಸ್ಕೂಟಿ ಚಾಲನೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಚಾಲಕ ಸ್ವಪ್ನಿಲ್ ಕೆಕ್ರೆಇವರ ಮೇಲೆ ಕೆಸರು ಹಾರಿಸಿಕೊಂಡು ಸಾಗಿದ್ದಾನೆ.  ಇದರಿಂದ ಸಿಟ್ಟಾದ ಜೆರ್ಲಿನ್ ಕಾರು ಚಾಲಕನಿಗೆ ಸರಿಯಾಗಿ ನೋಡಿಕೊಂಡು ಚಾಲನೆ ಮಾಡುಂತೆ ಹೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಕಾರು ಚಾಲಕ ಜೆರ್ಲಿನ್‌ ಅವರನ್ನು 2 ಕಿಲೋ ಮೀಟರ್ ವರೆಗೆ ಫಾಲೋ ಮಾಡಿ, ಆಕೆಯ ಸ್ಕೂಟಿಯನ್ನು ಅಡ್ಡಗಟ್ಟಿದ್ದಾನೆ. ಅಲ್ಲದೇ ಜೆರ್ಲಿನ್ ಕೂದಲನ್ನು ಎಳೆದು ಮುಖದ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಕಾರಿನಲ್ಲಿದ್ದ ಸ್ವಪ್ನಿಲ್ ಕೆಕ್ರೆಯ ಹೆಂಡತಿ ಜಗಳ ಬಿಡಿಸುವ ಬದಲು  ಹಲ್ಲೆ ಮಾಡುವಂತೆ ಗಂಡನಿಗೆ ಪ್ರೋತ್ಸಾಹಿಸಿದ್ದಾಳೆ. ಇದರಿಂದ  ಜೆರ್ಲಿನ್ ಡಿಸಿಲ್ವಾ ಗಂಭೀರ ಗಾಯಗಳಾಗಿವೆ. ಅಲ್ಲದೇ ತಮಗಾದ ಅನ್ಯಾಯವನ್ನು ಅವರು ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದು, ಪುಣೆ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಈ ವೀಡಿಯೋ ವೈರಲ್ ಆಗಿದೆ. 

ಕೇಸಿಂದ ಮಗನ ಬಚಾವ್‌ ಮಾಡಲು ತನ್ನ ರಕ್ತವನ್ನೇ ನೀಡಿದ್ದ ಪುಣೆ ಬಾಲಕನ ತಾಯಿ!

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭಾರತೀಯ ದಂಡ ಸಂಹಿತೆಯ ಮೋಟಾರ್ ವಾಹನ ಕಾಯ್ದೆಯಡಿ ಬರುವ ಸೆಕ್ಷನ್ 118(1), 74, 115(2), 352, ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚತುರ್‌ಶ್ರುಂಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. 

 

Latest Videos
Follow Us:
Download App:
  • android
  • ios