Asianet Suvarna News Asianet Suvarna News

ಲಿಂಗ ಸಮಾನತೆ: ಕಾಲೇಜ್‌ ಡೇಗೆ ಸೀರೆಯುಟ್ಟು ಬಂದ ಯುವಕರು!

ಲಿಂಗ ಸಮಾನತೆ ಸಾರಲು ಕಾಲೇಜ್‌ ಡೇಗೆ ಸೀರೆಯುಟ್ಟು ಬಂದ ಮೂವರು ವಿದ್ಯಾರ್ಥಿಗಳು| ಹೆಣ್ಮಕ್ಕಳು ಮಾತ್ರ ಸೀರೆ ಉಡಬೇಕೆಂಬ ನಿಯಮವಿಲ್ಲ ಅಂದ್ರ ಬಾಯ್ಸ್| ಅಧ್ಯಾಪಕರಿಂದಲೂ ಮೆಚ್ಚುಗೆ

Pune college boys dress up in sarees on traditional day to send message on gender equality
Author
Bangalore, First Published Jan 4, 2020, 5:00 PM IST
  • Facebook
  • Twitter
  • Whatsapp

ಪುಣೆ[ಜ.04]: ಧರಿಸಿದ ಬಟ್ಟೆಯಿಂದಲೇ ಲಿಂಗ, ಜಾತಿ ನಿರ್ಧರಿಸುವ ಇಂದಿನ ದಿನಗಳಲ್ಲಿ ಪುಣೆಯ ವಿದ್ಯಾರ್ಥಿಗಳು ವಿಭಿನ್ನ ಉದಾಹರಣೆ ಪ್ರಸ್ತುತಪಡಿಸಿದ್ದಾರೆ. ಲೈಂಗಿಕ ಸಮಾನತೆ ಸಂಬಂಧ ಸಮಾಜಕ್ಕೆ ಸಂದೇಶ ರವಾನಿಸಲು ಫಗ್ರ್ಯೂಸನ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ವಿಭಿನ್ನ ಹಾಗೂ ಇಂಟರೆಸ್ಟಿಂಗ್ ಹಾದಿ ಸನುಸರಿಸಿದ್ದಾರೆ. ಈ ಮೂವರು ಯುವಕರು ವಾರ್ಷಿಕೋತ್ಸವದಂದು ಸೀರೆಯುಟ್ಟು ಕಾಲೇಜಿಗೆ ಎಂಟ್ರಿ ನೀಡಿದ್ದಾರೆ.

ಉಳಿದೆಲ್ಲಾ ವಿದ್ಯಾರ್ಥಿಗಳು ಸಾಮಾನ್ಯ ಉಡುಪು ಧರಿಸಿದ್ರು

ಗುರುವಾರದಂದು ಆಯೋಜಿಸಲಾಗಿದ್ದ ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಉಳಿದೆಲ್ಲಾ ವಿದ್ಯಾರ್ಥಿಗಳು ಸಾಮಾನ್ಯ ಬಟ್ಟೆಯಲ್ಲಿ ಬರುವಾಗ, ಈ ಮೂವರು ವಿದ್ಯಾರ್ಥಿಗಳು ಆಕಾಶ್ ಪವಾರ್, ಸುಮಿತ್ ಹೋನ್ವಾಡ್ಕರ್ ಹಾಗೂ ರಿಷಿಕೇಶ್ ಸನಪ್ ಸೀರೆಯುಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿದ್ದು ಮೆಚ್ಚುವಂತದ್ದೇ. 

ವಿಶ್ವಸಂಸ್ಥೆ: ಸಹಾಯಕ ಮಹಾ ಕಾರ್ಯದರ್ಶಿಯಾಗಿ ಅನಿತಾ ಭಾಟಿಯಾ ನೇಮಕ!

ತಾವು ಸೀರೆಯುಟ್ಟ ಕುರಿತು ಪ್ರತಿಕ್ರಿಯಿಸಿದ ಈ ವಿದ್ಯಾರ್ಥಿಗಳು 'ಹುಡುಗರು ಪ್ಯಾಂಟ್, ಶರ್ಟ್ ಧರಿಸಬೇಕು ಮತ್ತು ಹುಡುಗಿಯರು ಯಾವತ್ತೂ ಸೀರೆ, ಚೂಡಿದಾರ, ಲಂಗ ಧರಿಸಬೇಕೆಂಬ ನಿಯಮವಿಲ್ಲ. ಹೀಗಾಗಿ ನಾವು ಸೀರೆ ಉಡಲು ನಿರ್ಧರಿಸಿದೆವು' ಎಂದಿದ್ದಾರೆ.

ಸೀರೆಯುಡಲು ಸಹಪಾಠಿ ಶ್ರದ್ಧಾಳ ಸಹಾಯ

ಕಾಲೇಜಿನ ಇತರ ವಿದ್ಯಾರ್ಥಿಗಳು ಏನು ಹೇಳುತ್ತಾರೆ, ಅವರ ಅನಿಸಿಕೆ ಏನಿರಬಹುದೆಂದು ಚಿಂತಿಸದ ಈ ಮೂವರು ತಮ್ಮ ಸಹಪಾಠಿ, ಗೆಳತಿ ಶ್ರದ್ಧಾಳ ಸಹಾಯ ಪಡೆದು ಸೀರೆಯುಟ್ಟುಕೊಂಡಿದ್ದಾರೆ. ತಮ್ಮ ಅನುಭವದ ಕುರಿತು ತಿಳಿಸಿದ ಅವರು 'ಸೀರೆಯುಟ್ಟು ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ಹೆಣ್ಮಕ್ಕಳು ಈ ಸೀರೆಯುಟ್ಟು ಎಷ್ಟು ಕಷ್ಟ ಅನುಭವಿಸುತ್ತಾಋಎಂಬುವುದು ತಿಳಿಯಿತು' ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಭೇಷ್ ಎಂದ ಉಪಾಧ್ಯಾಯರು

ಮೂವರು ವಿದ್ಯಾರ್ಥಿಗಳ ಈ ಧೈರ್ಯಕ್ಕೆ ಅಧ್ಯಾಪಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತರ ವಿದ್ಯಾರ್ಥಿಗಳೂ ಬೆಂಬಲಿಸಿದ್ದು, ಈ ಮೂವರೊಂದಿಗೆ ಸೆ೪ಲ್ಫೀ ತೆಗೆಸಿಕೊಂಡಿದ್ದಾರೆ.

'ನನ್ನ ಸಾವಿನ ಬಳಿಕ ಅಭಿಷೇಕ್ ಮತ್ತು ಶ್ವೇತಾಗೆ ಸಮಾನ ಪಾಲು'

Follow Us:
Download App:
  • android
  • ios