ವಿಶ್ವಸಂಸ್ಥೆ: ಸಹಾಯಕ ಮಹಾ ಕಾರ್ಯದರ್ಶಿಯಾಗಿ ಅನಿತಾ ಭಾಟಿಯಾ ನೇಮಕ!

ವಿಶ್ವ ವೇದಿಕೆಯಲ್ಲಿ ಗಟ್ಟಿಯಾಗುತ್ತಿದೆ ಭಾರತದ ಧ್ವನಿ| ಭಾರತಕ್ಕೆ ವಿಶ್ವ ವೇದಿಕೆಯಲ್ಲಿ ಹೆಚ್ಚಿನ ಗೌರವ| ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ ನಿರ್ದೇಶಕಿಯಾಗಿ ಭಾರತದ ಅನಿತಾ ಭಾಟಿಯಾ ನೇಮಕ| ಅನಿತಾ ಭಾಟಿಯಾ ನೇಮಕ ಪ್ರಕಟಿಸಿದ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೆನಿಯೋ ಗುಟೆರ್ರಸ್| 

Indian-Origin Anita Bhatia Appointed UN Women Deputy Executive Director

ವಿಶ್ವಸಂಸ್ಥೆ(ಮೇ.31): ವಿಶ್ವ ವೇದಿಕೆಯಲ್ಲಿ ಭಾರತದ ಧ್ವನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ವಿಶ್ವದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಭಾರತದ ಕೊಡುಗೆಯ ಮಹತ್ವ ಇದೀಗ ಅರಿವಾಗತೊಡಗಿದೆ. ಇದೇ ಕಾರಣಕ್ಕೆ ವಿಶ್ವ ವೇದಿಕೆಯಲ್ಲಿ ಭಾರತಕ್ಕೆ ಹೆಚ್ಚಿನ ಗೌರವ ನೀಡುವ ಮೂಲಕ ಜಗತ್ತು ಭಾರತವನ್ನು ಸತ್ಕರಿಸುತ್ತಿದೆ. 

ವಿಶ್ವಸಂಸ್ಥೆಯ ಸಂಪನ್ಮೂಲ ನಿರ್ವಹಣೆ, ಸುಸ್ಥಿರತೆ ಮತ್ತು ಸಹಭಾಗಿತ್ವದ ಸಹಾಯಕ ಮಹಾ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆಯ ಮಹಿಳಾ ಉಪ ಕಾರ್ಯಕಾರಿ ನಿರ್ದೇಶಕಿಯಾಗಿ ಭಾರತದ ಅನಿತಾ ಭಾಟಿಯಾ ನೇಮಕಗೊಂಡಿದ್ದಾರೆ.

ಈ ಮಹತ್ವದ ಹುದ್ದೆಗೆ ಅನಿತಾ ಭಾಟಿಯಾ ಅವರನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೆನಿಯೋ ಗುಟೆರ್ರಸ್ ನೇಮಿಸಿ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಸೋಮಾಲಿಯಾಕ್ಕೆ ತಮ್ಮ ವಿಶೇಷ ಪ್ರತಿನಿಧಿಯಾಗಿ ಹಾಗೂ ಸೋಮಾಲಿಯಾದಲ್ಲಿ ವಿಶ್ವಸಂಸ್ಥೆಯ ಸಹಾಯಕ ಮಿಷನ್‌ನ ಹೊಸ ಮುಖ್ಯಸ್ಥರಾಗಿ ಅಮೆರಿಕದ ಜೇಮ್ಸ್ ಸ್ವಾನ್ ಅವರನ್ನು ಗುಟೆರ್ರೆಸ್ ನೇಮಿಸಿದ್ದಾರೆ.

ಅದರಂತೆ ಮಕ್ಕಳ ವಿರುದ್ಧದ ಹಿಂಸಾಚಾರ ಕುರಿತ ಹೊಸ ವಿಶೇಷ ಪ್ರತಿನಿಧಿಯಾಗಿ ಮೊರಕ್ಕೋದ ನಜತ್ ಮಾಲ್ಲಾ ಮಾಜಿದ್ ಅವರನ್ನು ನೇಮಕ ಮಾಡಲಾಗಿದೆ.

Latest Videos
Follow Us:
Download App:
  • android
  • ios