ಪಂಚರಾಜ್ಯ ಫಲಿತಾಂಶ/ ಪುದುಚೇರಿಯ ರಿಸಲ್ಟ್ ಮರೆಯುವ  ಹಾಗಿಲ್ಲ/ ಸರಳ ಬಹುಮತ ಪಡೆದುಕೊಂಡ ಎನ್‌ಡಿಎ/ ಕೇಂದ್ರಾಡಳಿತ ಪ್ರದೇಶದಲ್ಲಿಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ

ಪುದುಚೇರಿ (ಮೇ 02)ಪುದುಚೇರಿಯಲ್ಲಿ ಮೊದಲ ಬಾರಿಗೆ ಎನ್‌ಡಿಎ ಅಧಿಕಾರ ಗದ್ದುಗೆಗೆ ಸನಿಹದಲ್ಲಿದೆ. 30 ಕ್ಷೇತ್ರಗಳಿರುವ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆಯಲ್ಲಿತ್ತು.

ಪುದುಚೇರಿಯಲ್ಲಿ ಬಿಜೆಪಿಯು ಸ್ಥಳೀಯ ಪಕ್ಷ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಜೊತೆಗೆ ಎಐಎಡಿಎಂಕೆ ಪಕ್ಷವೂ ಮೈತ್ರಿಯಲ್ಲಿದೆ.

ಸ್ಥಳೀಯ ಪಕ್ಷ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್‌(ಎನ್ ಡಿಎ) 10 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 5 ರಲ್ಲಿ ಗೆದ್ದು ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಅಲ್ಲಿಗೆ ಎನ್ ಡಿಎ ಬಲ 16 ಆಗಲಿದ್ದು ಸರಳ ಬಹುಮತ ಸುಲಭ

ಪೋಟೋ ಫಿನಿಶ್ ನಲ್ಲಿ ಗೆದ್ದ ಸುವೇಂದು.. ಮಮತಾಗೆ ಸೋಲು

ಇನ್ನು ಡಿಎಂಕೆ 5 ರಲ್ಲಿ ಗೆದ್ದು ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಸ್ವತಂತ್ರರು 6 ಸ್ಥಾನದಲ್ಲಿ ಜಯ ಸಾಧಿಸಿದ್ದರೆ ಕಾಂಗ್ರೆಸ್ ಗೆ ಸಿಕ್ಕಿರುವುದು 2 ಸೀಟು. ಪಂಚರಾಜ್ಯ ಫಲಿತಾಂಶ ಹೊರಬಂದಿದ್ದು ಬಂಗಾಳದಲ್ಲಿ ಮಮತಾ, ತಮಿಳುನಾಡಲ್ಲಿ ಡಿಎಂಕೆ, ಕೇರಳದಲ್ಲಿ ಪಿಣರಾಯಿ ಅಧಿಕಾರದ ಮತ ಪಡೆದುಕೊಂಡಿದ್ದಾರೆ.