Asianet Suvarna News Asianet Suvarna News

'ನನ್ನ ತಂದೆ ಹಿಂದು..ತಾಯಿ ಮುಸ್ಲಿಂ... ಸಮೀರ್ ವಾಂಖೆಡೆ ತಿರುಗೇಟು!

* ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ
* ಎನ್ ಸಿಬಿ ಅಧಿಕಾರಿ ವಿರುದ್ಧವೇ ಲಂಚದ ಆರೋಪ
* ಸೋಶಿಯಲ್ ಮೀಡಿಯಾದಲ್ಲಿ ವೈಯಕ್ತಿಕ ವಿಚಾರ 
* ಮಾನನಷ್ಟ ಮೊಕದ್ದಮೆಗೆ ಕಾರಣವಾಗುವ ಸಂಗತಿ

Publishing my personal documents on Twitter is defamatory NCB zonal director Sameer Wankhede mah
Author
Bengaluru, First Published Oct 26, 2021, 1:44 AM IST

ಮುಂಬೈ(ಅ.26)  ಮುಂಬೈ ನ (Mumbai) ಕ್ರೂಸ್ ಡ್ರಗ್ಸ್ (Drugs) ಪ್ರಕರಣದಲ್ಲಿ ಶಾರುಖ್ ಪುತ್ರ  ಆರ್ಯನ್ ಖಾನ್ (Aryan Khan) ಬಂಧನವಾದ ನಂತರ  ಒಂದೊಂದೆ ಅಂಶಗಳು ತೆರೆದುಕೊಂಡಿವೆ.  

ನಾರ್ಕೊಟಿಕ್ಸ್ ನಿಯಂತ್ರಕ ಬ್ಯೂರೋ (NCB)  ವಿಭಾಗೀಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede)ವಿರುದ್ಧ ಕ್ರೂಸ್ ಡ್ರಗ್ಸ್ ಪ್ರಕರಣದ ಮುಖ್ಯ ಸಾಕ್ಷಿಯಿಂದ ಈ ಸುಲಿಗೆ ಆರೋಪವೂ  ಕೇಳಿಬಂದಿತ್ತು.

ಈ ನಡುವೆ ಎನ್ ಸಿಪಿ (NCP)ನಾಯಕ ನವಾಬ್ ಮಲ್ಲಿಕ್ ಸೋಶಿಯಲ್ ಮೀಡಿಯಾ ಬಳಸಿಕೊಂಡು ಆರೋಪವೊಂದನ್ನು ಮಾಡಿದ್ದರು.  ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಮೀರ್ ವಾಂಖೆಡೆ , ನಾನು ಬಹು ಧರ್ಮೀಯ ಸಂಸ್ಕೃತಿಗೆ ಸೇರಿದವನು ಎಂಬುವುದನ್ನು ಹೇಳಲು ಬಯಸುತ್ತೇನೆ. ನನ್ನ ತಂದೆ ಹಿಂದು (Hindu) ಆದರೆ ನನ್ನ ತಾಯಿ ಮುಸ್ಲಿಂ (Muslim) ಸಮುದಾಯಕ್ಕೆ ಸೇರಿದವರು.  ಸೋಶಿಯಲ್ ಮೀಡಿಯಾದಲ್ಲಿ(Social Media) ನನ್ನ ವೈಯಕ್ತಿಕ ವಿಚಾರ ಹಂಚುವುದು ಮಾನನಷ್ಟವಾಗುತ್ತದೆ ನೆನಪಿರಲಿ ಎಂದು ತಿರುಗೇಟು  ಕೊಟ್ಟಿದ್ದಾರೆ.

ಆರ್ಯನ್ ಖಾನ್ ಗೆ ಗಾಂಜಾ ಪೂರೈಸಿದ್ದೇ ಅನನ್ಯಾ ಪಾಂಡೆ!

ಎನ್ ಸಿಪಿ ನಾಯಕ ನವಾಬ್ ಮಲ್ಲಿಕ್ ಅವರ ಮಾತುಗಳಿಂದ ಕೆಂಡಾಮಂಡಲವಾದ ಸಮೀರ್ ಇಂಥದ್ದೊಂದು ಹೇಳಿಕೆ ನೀಡುವುದರ ಜತೆಗೆ ಎಚ್ಚಿರಿಕೆ ನೀಡಿದ್ದಾರೆ   ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಒಂದೆಲ್ಲ ಒಂದು ಕಾರಣಕ್ಕೆ ಡ್ರಗ್ಸ್ ಸುದ್ದಿಯಾಗುತ್ತಲೇ ಇದೆ.   ನಟಿ ರಿಯಾ ಚಕ್ರವರ್ತಿಯಿಂದ ಹಿಡಿದು ಇತ್ತೀಚೆಗೆ ಅನನ್ಯಾ  ಪಾಂಡೆ ವರೆಗೆ ವಿಚಾರಣೆ ನಡೆದಿದೆ. 

ಆರ್ಯನ್ ಖಾನ್ ಜಾಮೀನಿಗಾಗಿ ಒಂದು ಕಡೆ ಕಾನೂನು ಹೋರಾಟ ಮಾಡುತ್ತಿದ್ದರೆ ಎನ್ ಸಿಬಿ ತನ್ನ ತನಿಖೆಯನ್ನು ಮುಂದುವರಿಸಿದೆ. ಬಾಲುವುಡ್ ಸಹ ಒಂದರ್ಥದಲ್ಲಿ ಆರ್ಯನ್ ಖಾನ್ ಪರ ನಿಲ್ಲುವ ಕೆಲಸವನ್ನೇ ಮಾಡಿಕೊಂಡು ಬಂದಿದೆ. 

Follow Us:
Download App:
  • android
  • ios