ಸಮ್ಮತಿ ಲೈಂಗಿಕ ಸಂಭೋಗದ ವಯಸ್ಸೆಷ್ಟು? ಏರಿಕೆಯಾಗಿರುವುದು ಹಲವರಿಗೆ ತಿಳಿದಿಲ್ಲ ಎಂದ ಸುಪ್ರೀಂ ಕೋರ್ಟ್!

ಒಪ್ಪಿಗೆ ಲೈಂಗಿಕ ಸಂಭೋಗದ ವಯಸ್ಸು 16 ಅಲ್ಲ 18ಕ್ಕೆ ಏರಿಸಲಾಗಿದೆ ಅನ್ನೋ ಮಾಹಿತಿ ಹಲವರಿಗೆ ತಿಳಿದೇ ಇಲ್ಲ. ಈ ಕುರಿತು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
 

Public unaware that Consent sex with girl raised from 16 years to 18 says Supreme Court ckm

ನವದೆಹಲಿ(ಜು.09) ಸಮ್ಮತಿ ಲೈಂಗಿಕತೆ ವಯಸ್ಸು ಎಷ್ಟು? ಭಾರತದಲ್ಲಿ 2012ರ ವರೆಗೆ 16 ಆಗಿದ್ದರೆ ಬಳಿಕ 18ಕ್ಕೆ ಏರಿಸಲಾಗಿದೆ. ಆದರೆ ಈ ಕುರಿತು ಹಲವರಿಗೆ ಮಾಹಿತಿ ತಿಳಿದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಮ್ಮತಿ ಮೇರೆಗೆ ಹುಡುಗಿ ಜೊತೆ ಲೈಂಗಿಕ ಸಂಭೋಗ ನಡೆಸಲು ಕನಿಷ್ಠ 18 ತುಂಬಿರಬೇಕು. ವಯಸ್ಸಿನ ಮಿತಿಯನ್ನು ಏರಿಸಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ಇಲ್ಲದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

ಪೋಕ್ಸೋ ಪ್ರಕರಣದ ಕುರಿತು ವಿಚಾರಣೆ ವೇಳೆ ಜಸ್ಟೀಸ್ ಸಂಜೀವ್ ಖನ್ನ, ಸಂಯ್ ಕರೋಲ್, ಪಿವಿ ಸಂಯ್ ಕುಮಾರ್ ನೇತೃತ್ವದ ಪೀಠ ಈ ವಿಚಾರ ಮುನ್ನಲೆಗೆ ತಂದಿದೆ. ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಖುಲಾಸೆಗೊಳಿಸುವುದರ ವಿರುದ್ದ ಮಧ್ಯಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ತಿದ್ದುಪಡಿ ಕುರಿತು ಬೆಳಕು ಚೆಲ್ಲಿದೆ.

ಮುಟ್ಟಿನ ರಜೆ ಆದೇಶ ನೀಡೋಲ್ಲ: ಸುಪ್ರೀಂಕೋರ್ಟ್

ಸಾಕಷ್ಟು ಪ್ರಕರಣಗಳಲ್ಲಿ ಮಾಹಿತಿ ಕೊರತೆ ಕಾಣುತ್ತಿದೆ. ಸಮ್ಮತಿ ಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಹೆಚ್ಚಿಸಿರುವ ಕುರಿತು ಮಾಹಿತಿ ಇಲ್ಲದ ಕಾರಣ ಸಮಸ್ಯೆಗಳು ಎದುರಾಗುತ್ತಿದೆ.  ಇಲ್ಲದಿದ್ದರೆ ಕುಟುಂಬಗಳು ಮಧ್ಯಪ್ರವೇಶಿಸಬಹುದು ಎಂದು ಜಸ್ಟೀಸ್ ಸಂಜೀವ್ ಖನ್ನಾ ಹೇಳಿದ್ದಾರೆ. ಪೋಕ್ಸೋ ಕಾಯ್ದೆ ಜಾರಿ ಹಾಗೂ ದಂಡ ಸಂಹಿತೆ ತಿದ್ದುಪಡಿಯಲ್ಲಿ ಈ ಮಹತ್ವದ ಅಂಶ ಉಲ್ಲೇಖಿಸಲಾಗಿದೆ. ಸಮ್ಮತಿ ಸಂಭೋಗದ ವಯಸ್ಸನ್ನು 16ರಿಂದ 18ಕ್ಕೆ ಏರಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ಸಮ್ಮತಿ ಮೇರೆಗೆ ನಡೆಸುವ ಸಂಭೋಗ ಪ್ರಕರಣಗಳಲ್ಲಿ ಪುರುಷನ ವಿರುದ್ದ ಕಾನೂನು ಕ್ರಮಕ್ಕೆ ಕಾರಣವಾಗುತ್ತಿದೆ. ಪ್ರಮುಖವಾಗಿ ಪೋಕ್ಸೋ ಪ್ರಕರಣಗಳಲ್ಲಿ ಒಪ್ಪಿಗೆ ಪಡೆದ ಬಳಿಕದ ಲೈಂಗಿಕ ಪ್ರಕರಣಗಳ ವಿಚಾರಣೆಗಳಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ಹಲವು ನ್ಯಾಯಾಧೀಶರು ಸೂಚಿಸಿದ್ದಾರೆ. ವಯಸ್ಸಿನ ಏರಿಕೆ ಕುರಿತು ಮಾಹಿತಿ ಕೊರತೆ, ಸ್ಪಷ್ಟತೆಗಳು ಇಲ್ಲದ ಕಾರಣ ಗೊಂದಲಗಳು ನಿರ್ಮಾಣವಾಗುತ್ತಿದೆ ಎಂದು ಕೋರ್ಟ್ ಹೇಳಿದೆ. 

2022ರಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಮೂರ್ತಿ ಡಿವೈ ಚಂದ್ರಚೂಡ್ ಈ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಸಮ್ಮತಿ ಸಂಭೋಗ ವಯಸ್ಸಿನ ಕಾರಣದಿಂದ ಈ ಪ್ರಕರಣಗಳ ವಿಚಾರಣೆಯಲ್ಲಿ ನ್ಯಾಯಾಧೀಶರಿಗೆ ಹಲವು ಸವಾಲುಗಳು ಎದುರಾಗುತ್ತದೆ.  ಈ ಕಾಳಜಿಯನ್ನು ಶಾಸಕಾಂಗ ಪರಿಗಣಿಸಬೇಕಾಗಿದೆ ಎಂದಿದ್ದರು.  

ನೀಟ್‌ ಯುಜಿ ಪರೀಕ್ಷೆ ರದ್ದಿಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್‌

Latest Videos
Follow Us:
Download App:
  • android
  • ios