ನೀಟ್ ಯುಜಿ ಪರೀಕ್ಷೆ ರದ್ದಿಲ್ಲ: ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅಫಿಡವಿಟ್
ನೀಟ್-ಯುಜಿ ಪರೀಕ್ಷೆಯಲ್ಲಿ ದೇಶಾದ್ಯಂತ ಅಕ್ರಮ ನಡೆದಿಲ್ಲ. ಕೆಲವೇ ಕಡೆ ನಡೆದ ಆರೋಪ ಇದೆ. ಹೀಗಾಗಿ ಇಡೀ ಪರೀಕ್ಷೆಯನ್ನೇ ರದ್ದು ಮಾಡುವುದು ತರ್ಕಬದ್ಧವಲ್ಲ ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ.
ನವದೆಹಲಿ: ನೀಟ್-ಯುಜಿ ಪರೀಕ್ಷೆಯಲ್ಲಿ ದೇಶಾದ್ಯಂತ ಅಕ್ರಮ ನಡೆದಿಲ್ಲ. ಕೆಲವೇ ಕಡೆ ನಡೆದ ಆರೋಪ ಇದೆ. ಹೀಗಾಗಿ ಇಡೀ ಪರೀಕ್ಷೆಯನ್ನೇ ರದ್ದು ಮಾಡುವುದು ತರ್ಕಬದ್ಧವಲ್ಲ. ರದ್ದು ಮಾಡಿದರೆ ಪ್ರಮಾಣಿಕವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ’ ಎಂದು ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳಿದೆ.
ಶುಕ್ರವಾರ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಶಿಕ್ಷಣ ಸಚಿವಾಲಯ ‘571 ನಗರಗಳ 4,750 ಕೇಂದ್ರಗಳಲ್ಲಿ 23 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ದೇಶಾದ್ಯಂತ ಪರೀಕ್ಷೆಯ ಗೌಪ್ಯತೆಗೆ ಧಕ್ಕೆಯಾಗಿದೆ ಎನ್ನುವುದಕ್ಕೆ ಸಾಕ್ಷ್ಯಗಳಿಲ್ಲ. ಈಗಾಗಲೇ ಫಲಿತಾಂಶ ಪ್ರಕಟವಾಗಿರುವುದರಿಂದ ಪರೀಕ್ಷೆಯ ರದ್ದತಿ ತರ್ಕಬದ್ಧವಲ್ಲ ಕೆಲವೇ ಕೇಂದ್ರಗಳಲ್ಲಿ ಅಕ್ರಮ ನಡೆದ ಆರೋಪ ಇದೆ. ಹೀಗಾಗಿ ದೇಶಾದ್ಯಂತ ಪರೀಕ್ಷೆ ರದ್ದು ಮಾಡಿದರೆ ನ್ಯಾಯಯುತವಾಗಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದೆ.
ವಿವಾದದ ಬೆನ್ನಲ್ಲೇ NEET PG Exam ಹೊಸ ದಿನಾಂಕ ಘೋಷಣೆ, ಆಗಸ್ಟ್ ನಲ್ಲಿ ನಡೆಯಲಿದೆ ಪಿಜಿ ಪರೀಕ್ಷೆ
ವಿವಿಧ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ವಂಚನೆ, ಅಭ್ಯರ್ಥಿಗಳ ಬದಲಿ, ಬೇಕಾಬಿಟ್ಟಿ ಕೃಪಾಂಕ ನೀಡಿಯೆಂಹ ಅಕ್ರಮಗಳು ವರದಿಯಾಗಿದ್ದವು. ಇದನ್ನು ವಿರೋಧಿಸಿ ಹಲವೆಡೆ ಪ್ರತಿಭಟನೆಗಳಾಗಿ ಮರುಪರೀಕ್ಷೆಯ ಕೂಗು ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ನೀಟ್ ಅಭ್ಯರ್ಥಿಗಳು, ಅವರ ಪೋಷಕರು ಹಾಗೂ ತರಬೇತಿ ಸಂಸ್ಥೆಗಳಿಂದ ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದರ ವಿಚಾರಣೆ ಜು.8ಕ್ಕೆ ನಡೆಯಲಿದೆ.
ಆ.11ಕ್ಕೆ ನೀಟ್ ಪಿಜಿ ಪರೀಕ್ಷೆ
ನವದೆಹಲಿ: ನೀಟ್-ಪಿಜಿ ಪರೀಕ್ಷೆಯ ಹೊಸ ದಿನಾಂಕ ಪ್ರಕಟವಾಗಿದೆ. 2024ನೇ ವೈದ್ಯಕೀಯ ವಿಜ್ಞಾನ ಪ್ರವೇಶಾತಿ ಪರೀಕ್ಷೆಯು ಆಗಸ್ಟ್ 11ಕ್ಕೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ತಿಳಿಸಿದೆ.
ಈ ಹಿಂದೆ ನೀಟ್ ಯುಜಿ ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಮಧ್ಯೆ ಪಿಜಿ ಪರೀಕ್ಷೆ ಜೂ.23ರ ಬೆಳಗ್ಗೆ ನಡೆಯಬೇಕಿತ್ತು. ಆದರೆ ಜೂ.22ರ ರಾತ್ರಿ ಏಕಾಏಕಿ ಪರೀಕ್ಷೆ ರದ್ದು ಮಾಡಲಾಗಿತ್ತು. ‘ಮುನ್ನೆಚ್ಚರಿಕೆಯ ಕ್ರಮವಾಗಿ ಪರೀಕ್ಷೆಯನ್ನು ಮಂದೂಡಲಾಗಿದೆ’ ಎಂದು ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ) ಹೇಳಿತ್ತು. ಇದು ಪರೀಕ್ಷಾರ್ಥಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಹುಲ್ ಗಾಂಧಿ ಟೀಕೆಗಳಿಗೆ ಆ ಕ್ಷಣವೇ ಫಟಾಫಟ್ ಉತ್ತರ: ಲೋಕಸಭೆಯಲ್ಲಿ ಅಪರೂಪದ ಕ್ಷಣ
ಈಗ ಆ.11ಕ್ಕೆ ಎರಡು ಪಾಳಿಯಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಎನ್‌ಟಿಎ ಹೇಳಿದೆ. ಇದೇ ವೇಳೆ ನೀಟ್ ಪಿಜಿ ಅರ್ಹತೆಗಾಗಿ ಕಟ್ ಆಫ್ ದಿನಾಂಕವನ್ನು ಆ.15ರ ತನಕ ಮುಂದುವರೆಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೇಳಿದೆ.