ಮುಟ್ಟಿನ ರಜೆ ಆದೇಶ ನೀಡೋಲ್ಲ: ಸುಪ್ರೀಂಕೋರ್ಟ್

ಒಂದು ವೇಳೆ ನಾವು ಆದೇಶ ನೀಡಿದರೆ ಅದು ಮಹಿಳೆಯರ ಕೆಲಸದ ಮೇಲೆಯೇ ದುಷ್ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳೆಯರನ್ನು ನೇಮಿಸಲು ಹಿಂಜರಿಯಬಹುದು. ಹೀಗಾಗಿ ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ. ಸಂಬಂಧಿಸಿದ ಎಲ್ಲರ ಜತೆ ಸೇರಿ ಸರ್ಕಾರವೇ ನೀತಿ ರೂಪಿಸಬೇಕು' ಎಂದು ಸೂಚಿಸಿದ ಸುಪ್ರೀಂಕೋರ್ಟ್

supreme court refused to order menstrual leave grg

ನವದೆಹಲಿ(ಜು.09): 'ಋತುಚಕ್ರ ರಜೆಯು ನೀತಿಗೆ ಸಂಬಂಧಿಸಿದ ವಿಷಯ. ಅದು ಕೋರ್ಟ್‌ಗಳು ಪರಿಶೀಲಿಸುವ ವಿಷಯವಲ್ಲ' ಎಂದಿರುವ ಸುಪ್ರೀಂಕೋರ್ಟ್, 'ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಈ ಕುರಿತು ಮಾದರಿ ನೀತಿ ರೂಪಿಸಬೇಕು' ಎಂದು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ. 

ಋತುಚಕ್ರ ರಜೆಗೆ ನೀತಿ ರೂಪಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಡಿ.ವೈ.ಚಂದ್ರಚೂಡ ಅವರ ತ್ರಿಸದಸ್ಯ ಪೀಠ, 'ಒಂದು ವೇಳೆ ನಾವು ಆದೇಶ ನೀಡಿದರೆ ಅದು ಮಹಿಳೆಯರ ಕೆಲಸದ ಮೇಲೆಯೇ ದುಷ್ಪರಿಣಾಮ ಬೀರಬಹುದು. ಉದ್ಯೋಗದಾತರು ಮಹಿಳೆಯರನ್ನು ನೇಮಿಸಲು ಹಿಂಜರಿಯಬಹುದು. ಹೀಗಾಗಿ ಇದು ಸರ್ಕಾರದ ನೀತಿಗೆ ಸಂಬಂಧಿಸಿದ ವಿಷಯ. ಸಂಬಂಧಿಸಿದ ಎಲ್ಲರ ಜತೆ ಸೇರಿ ಸರ್ಕಾರವೇ ನೀತಿ ರೂಪಿಸ ಬೇಕು' ಎಂದು ಸೂಚಿಸಿತು. 

ಮಧ್ಯಪ್ರದೇಶದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ತೆಗೆದುಕೊಳ್ಳಲು ಅವಕಾಶ

'ಮಹಿಳೆಯರು ಇನ್ನಷ್ಟು ಕೆಲಸ ಮಾಡುವಂತಾಗಲು ಋತು ಚಕ್ರ ರಜೆ ಪ್ರೋತ್ಸಾಹಿಸುತ್ತದೆ' ಎಂಬ ಅರ್ಜಿದಾರರವಾದ ಪ್ರಶ್ನಿಸಿದ ಪೀಠ, 'ಅಂತಹ ರಜೆ ಕಡ್ಡಾಯ ಆದರೆ ಮಹಿಳೆಯರು ನೌಕರಿಯಿಂದ ದೂರ ಉಳಿದಂತಾಗುತ್ತದೆ' ಎಂದಿತು.

Latest Videos
Follow Us:
Download App:
  • android
  • ios