Asianet Suvarna News Asianet Suvarna News

ಪಬ್‌ಜಿ ಹುಚ್ಚಾಟಕ್ಕೆ ಅಜ್ಜನ ಖಾತೆಗೆ ಮೊಮ್ಮಗನ ಕನ್ನ, ಬಳಸಿದ ಹಣ ಸಾವಿರದಲ್ಲಿಲ್ಲ!

ಪಬ್‌ ಜಿ ಗೇಮ್ ಹುಚ್ಚು/ ಅಜ್ಜನ ಎರಡು ಲಕ್ಷ ರೂ. ವ್ಯಯಿಸಿದ ಬಾಲಕ/ ಪ್ರೀಮಿಯಂ ಪಟ್ಟಕ್ಕೆ ಏರಲು ಹಣ ವರ್ಗಾವಣೆ/ ಶಾಲಾ ಸಹಪಾಠಿಗಳ ಮೇಲೆ ದೂರು

PUBG Mobile addiction Mohali-based teenager spends Rs 2 lakh on app purchases
Author
Bengaluru, First Published Jul 7, 2020, 5:46 PM IST

ಮೊಹಾಲಿ(ಜು.07)  ಪಬ್ ಜಿ ಎನ್ನುವ ಮೊಬೈಲ್ ಗೇಮ್ ಯುವಕರ ಮನಸ್ಸನ್ನು ಯಾವ ಹಂತಕ್ಕೆ ಕದಡಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಪಬ್ ಜಿ ಕುರಿತಾದ ಒಂದೆಲ್ಲ ಒಂದು ಕತೆಗಳು ದಿನೇ ದಿನೇ  ತೆರೆದುಕೊಳ್ಳುತ್ತಲೇ ಇರುತ್ತವೆ. 

ಅಪ್ಲಿಕೇಶನ್ ಗಳ ಖರೀದಿಗಾಗಿ ಪಂಜಾಬ್ ಮೊಹಾಲಿಯ  15  ವರ್ಷದ ಬಾಲಕ ಅಜ್ಜನ  2  ಲಕ್ಷ ರೂ. ಖರ್ಚುಮಾಡಿದ್ದಾನೆ.   ಪಂಜಾಬಿನಲ್ಲಿ ವರದಿಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ.  ಕೆಲ ದಿನಗಳ ಹಿಂದೆ ಪಂಜಾಬಿನ ಖರಾರ್​ನಲ್ಲಿ 17 ವರ್ಷದ ಯುವಕ ಪಬ್​ಜಿ ಗೇಮ್​ ಅಪ್ಡೇಟ್​ ಮಾಡಲು 16 ಲಕ್ಷ ವ್ಯಯಿಸಿದ್ದ!

ಈ ವರ್ಷ ಗೇಮ್ ಹುಚ್ಚು ಹಿಡಿಸಿಕೊಂಡ ಬಾಲಕನಿಗೆ ಆತನ ಶಾಲೆಯ ಸೀನಿಯರ್ ಗಳು ಸಖತ್ ಟ್ರೇನಿಂಗ್ ಕೊಟ್ಟಿದ್ದರು. ಬ್ಯಾಂಕ್ ಅಕೌಂಟ್ ನಿಂದ ಆನ್ ಲೈನ್ ಪೇಮೆಂಟ್ ಮಾಡುವುದನ್ನು ಹೇಳಿಕೊಟ್ಟಿದ್ದರು.

59 ಚೀನಾ ಆಪ್ ಬ್ಯಾನ್ ಮಾಡಿದರೂ ಪಬ್‌ ಜಿ ಉಳಿದುಕೊಂಡಿದ್ದು ಹೇಗೆ?

 55  ಸಾವಿರ ರೂ. ನಂತೆ ಬಾಲಕ ಹಲವು ಸಾರಿ ಪೇಮೆಂಟ್ ಮಾಡಿದ್ದಾನೆ. ಪೇಟಿಎಮ್ ಮೂಲಕ ಹಣ ಸಂದಾಯ ಮಾಡಿದ್ದಾನೆ. ಗೇಮ್ ಗಾಗಿಯೇ ಹೊಸ ಸಿಮ್ ಖರೀದಿ ಮಾಡಿದ್ದ, ನಮ್ಮ ಪರ್ಸ್ ಗಳಿಂದ ಆಗಾಗ ಹಣ ಕಾಣೆಯಾಗುತ್ತಿದ್ದುದ್ದು ಯಾಕೆ ಎಂಬುದಕ್ಕೂ ಇದೀಗ ಉತ್ತರ ಸಿಕ್ಕಿದೆ ಎಂದು ಹುಡುಗನ ಚಿಕ್ಕಪ್ಪ ಹೇಳುತ್ತಾರೆ.

ಅಜ್ಜನ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾನೆ ಬಾಲಕ. ಚಿಕ್ಕಪ್ಪ ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದಾಗ ದಿಗಿಲುಗೊಂಡಿದ್ದಾರೆ. ಬಾಲಕನ ಬಳಿ ಪ್ರಶ್ನೆ ಮಾಡಿದಾಗ ಪಬ್ ಜಿಗಾಗಿ ವ್ಯಯಿಸಿದ್ದೇನೆ ಎಂದು ತಿಳಿಸಿದ್ದಾನೆ. ಪ್ರಿಮಿಯಂ ಖಾತೆಗೆ ಏರಲು ಹೀಗೆ ಮಾಡಿದೆ ಎಂದಿದ್ದಾನೆ.

ಕುಟುಂಬ ಮೋಹಾಲಿ ಎಸ್ ಎಸ್‌ಪಿ ಕುಲ್ ದೀಪ್ ಸಿಂಗ್ ಬಳಿ ದೂರು ದಾಖಲಿಸಿದೆ. ಬಾಲಕನ  ಸಹಪಾಠಿಗಳು ಆತನನ್ನು ಪ್ರಚೋದಿಸಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

Follow Us:
Download App:
  • android
  • ios