Asianet Suvarna News Asianet Suvarna News

ಉಗ್ರ ಸ್ವರೂಪ ಪಡೆದ ರೈತರ ಪ್ರತಿಭಟನೆ, ಓರ್ವ ಸಾವು, ದಿಲ್ಲಿ ಚಲೋ 2 ದಿನ ಸ್ಥಗಿತ!

ಬೇಡಿಕೆ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಪೊಲೀಸರು ರೈತರು ನಡುವೆ ಘರ್ಷಣೆ ನಡೆಯುತ್ತಿದೆ. ಹರ್ಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತನೋರ್ವ ಮೃತಪಟ್ಟಿರುವುದು ಇದೀಗ ಕೋಲಾಹಲಕ್ಕೆ ಕಾರಣವಾಗಿದೆ.

Protesting Farmers march halt for 2 days due to farmer died in clash says Report ckm
Author
First Published Feb 21, 2024, 8:56 PM IST

ಹರ್ಯಾಣ(ಫೆ.21) ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ರೈತರು ನಡೆಸುತ್ತಿರುವ ಪ್ರತಿಭಟನೆ ಉಗ್ರ ಸ್ವರೂಪ ಪಡೆದುಕೊಂಡಿದೆ. ದಿಲ್ಲಿ ಚಲೋ ತೀವ್ರಗೊಳಿಸಲು ರೈತರು ಭಾರಿ ಸಂಖ್ಯೆಯಲ್ಲಿ ದಿಲ್ಲಿಯತ್ತ ಧಾವಿಸುತ್ತಿದ್ದಾರೆ. ಜೆಸಿಬಿ, ಟ್ರಾಕ್ಟರ್ ಸೇರಿದಂತೆ ಹಲವು ವಾಹನಗಳ ಜೊತೆ ದೆಹಲಿಯತ್ತ ಧಾವಿಸುತ್ತಿದ್ದಾರೆ. ಹರ್ಯಾಣ ಗಡಿಯಲ್ಲಿ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ, ಘರ್ಷಣೆ ನಡೆದಿದೆ. ಇತ್ತ ಪ್ರತಿಭಟನಾ ನಿರಿತ ರೈತನೋರ್ವ ಮೃತಪಟ್ಟಿದ್ದಾನೆ. ಪೊಲೀಸರ ಗುಂಡೇಟಿಗೆ ರೈತ ಮೃತಪಟ್ಟಿದ್ದಾನೆ ಎಂದು ಪ್ರತಿಭಟನಾ ನಿರತ ರೈತರು ಗಂಭೀರ ಆರೋಪಿಸಿದ್ದಾರೆ. 

ರೈತ ಮೃತಪಟ್ಟಿರುವ ಕಾರಣ ರೈತರು ತಮ್ಮ ದಿಲ್ಲಿ ಚಲೋ ಹೋರಾಟವನ್ನು 2ದಿನ ಮುಂದೂಡಿದ್ದಾರೆ. ತೀವ್ರವಾಗಿ ಗಾಯಗೊಂಡ ರೈತನನ್ನು ಪಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಿಲ್ಲ. ಇದೀಗ ರೈತರು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪೊಲೀಸರ ಗುಂಡೇಟಿಗೆ ರೈತ ಬಲಿಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

5 ವರ್ಷ MSP ಅಡಿಯಲ್ಲಿ ಬೆಳೆ ಖರೀದಿ ಪ್ರಸ್ತಾಪ ತಿರಸ್ಕರಿಸಿದ ರೈತರು, 4ನೇ ಸುತ್ತಿನ ಮಾತುಕತೆ ವಿಫಲ!

ಗಾಯಗೊಂಡ ಮೂವರು ರೈತರನ್ನು ಪಟಿಯಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಓರ್ವ ಮೃತಪಟ್ಟಿದ್ದು, ಗಾಯಗೊಂಡ ಮತ್ತಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತದೆ.  ಇತ್ತ ಹರ್ಯಾಣ ಖನೌರಿ ಗಡಿಯಲ್ಲಿ ಜಮಾಯಿಸಿರುವ ರೈತರನ್ನು ತಡೆಗೋಡೆಗಳ ಮೂಲಕ ಪೊಲೀಸರು ತಡೆದಿದ್ದಾರೆ. 

ಇತ್ತ ಪಂಜಾಬ್ ಹರ್ಯಾಣ ಹೈಕೋರ್ಟ್ ಸೂಚನೆ ಹೊರತಾಗಿಯೂ ರೈತರು ಬಾರಿ ಸಂಖ್ಯೆಯಲ್ಲಿ ಹೆದ್ದಾರಿಯಲ್ಲಿ ಟ್ರಾಕ್ಟರ್, ಘನ ವಾಹನಗಳು ಜೆಸಿಬಿಗಳನ್ನು ಬಳಸಿದ್ದಾರೆ.  ಮೋಟಾರು ವಾಹನ ಕಾಯ್ದೆ ಪ್ರಕಾರ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ ಟ್ರಾಲಿಗಳನ್ನು ಬಳಸುವಂತಿಲ್ಲ. ರೈತರು ತಮ್ಮ ಸಾಂವಿಧಾನಿಕ ಕರ್ತವ್ಯಗಳಿಗೆ ಬದ್ಧರಾಗಿರಬೇಕು ಎಂದು ‘ದೆಹಲಿ ಚಲೋ’ ಪ್ರತಿಭಟನಾನಿರತ ರೈತರನ್ನು ಪಂಜಾಬ್‌- ಹರ್ಯಾಣ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತ್ತು.

'ಖಲಿಸ್ತಾನಿ ಅಜೆಂಡಾದ ಪ್ರತಿಭಟನೆ.. ದೆಹಲಿ ಗಡಿಯಲ್ಲಿ ಹೋರಾಟ ಟೀಕಿಸಿದ 'ರಿಯಲ್‌' ರೈತ!

ನೀವು (ರೈತರು) ಅಮೃತಸರದಿಂದ ದೆಹಲಿಗೆ ಟ್ರಾಲಿಗಳಲ್ಲಿ ಪ್ರಯಾಣಿಸುತ್ತಿದ್ದೀರಿ. ಆದರೆ ಮೋಟಾರು ವಾಹನ ಕಾಯಿದೆ ಪ್ರಕಾರ ಹೆದ್ದಾರಿಯಲ್ಲಿ ಹೆದ್ದಾರಿಗಳಲ್ಲಿ ಟ್ರ್ಯಾಕ್ಟರ್‌ ಟ್ರಾಲಿಗಳನ್ನು ಬಳಸುವಂತಿಲ್ಲ. ಪ್ರತಿಯೊಬ್ಬರಿಗೂ ಅವರ ಮೂಲಭೂತ ಹಕ್ಕುಗಳು ತಿಳಿದಿವೆ. ಆದರೆ ಕೆಲವು ಸಾಂವಿಧಾನಿಕ ಕರ್ತವ್ಯಗಳನ್ನೂ ಕೂಡ ಅನುಸರಿಸಬೇಕು’ ಎಂದು ರೈತರಿಗೆ ಕೋರ್ಟ್ ಚಾಟಿ ಬೀಸಿದೆ. ಅದಾಗ್ಯೂ‘ಅವರಿಗೆ ಪ್ರತಿಭಟಿಸುವ ಹಕ್ಕಿದೆ. ಆದರೆ ಇದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಎಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪುಗೂಡದಂತೆ ನೋಡಿಕೊಳ್ಳಿರಿ’ ಎಂದು ಪಂಜಾಬ್‌ ಸರ್ಕಾರಕ್ಕೆ ಸೂಚಿಸಿದೆ.
 

Follow Us:
Download App:
  • android
  • ios