ತೆಲಂಗಾಣ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳಾ ಶಾಸಕರ ಬಗ್ಗೆ ತೆಲಂಗಾಣ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟಿಸುತ್ತಿದ್ದ ಶಾಸಕ ಕೆಟಿಆರ್‌ ಅವರನ್ನು ಮಾರ್ಷಲ್‌ಗಳು ಸದನದಿಂದ ಹೊರ ಹಾಕಿದ್ದಾರೆ.

ಹೈದರಾಬಾದ್‌: ತೆಲಂಗಾಣ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ಮಹಿಳಾ ಶಾಸಕರ ಬಗ್ಗೆ ತೆಲಂಗಾಣ ಕಾಂಗ್ರೆಸ್ ಸಿಎಂ ರೇವಂತ್ ರೆಡ್ಡಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಆರ್‌ಎಸ್ ನಾಯಕ ಕೆಟಿಆರ್‌ (ಮಾಜಿ ಸಿಎಂ ಚಂದ್ರಶೇಖರ್‌ ರಾವ್ ಪುತ್ರ) ಅವರು ಸಿಎಂ ಆಸನದ ಎದುರು ಪ್ರತಿಭಟನೆ ಮಾಡಲು ಶುರು ಮಾಡಿದ್ದಾರೆ. ತೆಲಂಗಾಣ ಸಿಂಎ ರೇವಂತ್ ರೆಡ್ಡಿ ಮಹಿಳಾ ಶಾಸಕರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಅವರು ಈ ಕೂಡಲೇ ಕ್ಷಮೆ ಕೇಳಬೇಕು ಎಂದು ಕೆ.ಟಿ. ರಾಮರಾವ್ ಆಗ್ರಹಿಸಿದ್ದಾರೆ. ಈ ವೇಳೆ ಸದನದಲ್ಲಿದ್ದ ಮಾರ್ಷಲ್‌ಗಳು ಕೆಟಿ ರಾಮ ರಾವ್‌ ಅವರ ಕೈ ಕಾಲು ಹಿಡಿದು ಎತ್ತಿಕೊಂಡು ಬಂದು ವಿಧಾನಸಭೆ ಕಲಾಪದಿಂದ ಹೊರ ಹಾಕಿದ್ದಾರೆ. ಅಲ್ಲದೇ ಕೆಟಿಆರ್ ಸೇರಿದಂತೆ ಹಲವು ಬಿಆರ್‌ಎಸ್ ಶಾಸಕರನ್ನು ಬಂಧಿಸಿದ ಪೊಲೀಸರು ಪೊಲೀಸ್‌ ವ್ಯಾನ್‌ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. 

ಸದನದಲ್ಲಿ ಚರ್ಚೆಯ ವೇಳೆ ಸಿಎಂ ರೇವಂತ್ ರೆಡ್ಡಿಯವರು ಮಾತನಾಡುತ್ತಾ, ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ ರಾಮರಾವ್ ಅವರು ತಮ್ಮ ಹಿಂದೆ ಕುಳಿತಿರುವ ಹಿರಿಯ ಸೋದರಿಯರ ಬಗ್ಗೆ ಗಮನವಿಟ್ಟರೆ ದ್ರೋಹ ಬಗೆದಂತಾಗುತ್ತದೆ ಎಂದು ಹೇಳಿದಾಗ ವಿವಾದ ಶುರುವಾಗಿದೆ. ಕೆಟಿಆರ್ ಅವರು ಬಿಆರ್‌ಎಸ್ ನಮಗೆ ಸದಾ ಸಹಕರಿಸುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ನೀವು ಯಾರನ್ನು ನಂಬುವಿರಿ, ನಿಮ್ಮ ಹಿಂದೆ ಕುಳಿತಿರುವ ಸೋದರಿಯರು ನಮಗೆ ದ್ರೋಹ ಮಾಡಿ ಬಿಆರ್‌ಎಸ್ ಸೇರಿದರು ಎಂದು ನಾನು ಕೆಟಿಆರ್‌ಗೆ ಹೇಳಲು ಬಯಸುವೆ. ಹೀಗಿರುವಾಗ ಕೆಟಿಆರ್ ಅವರು ಹಿಂದೆ ಕುಳಿತಿರುವವರ ಮಾತನ್ನು ಕೇಳಿದರೆ ಅವರ ಪಕ್ಷ ಜುಬ್ಲಿಹಿಲ್ ಬಸ್‌ಸ್ಟ್ಯಾಂಡ್ ತರ ಕೊನೆಯಾಗಲಿದೆ ಎಂದು ರೇವಂತ್ ರೆಡ್ಡಿ ಹೇಳಿದ್ದಾರೆ. 

ತೆಲಂಗಾಣ ಎಲೆಕ್ಷನ್‌ಗೆ ವಾಲ್ಮೀಕಿ ದುಡ್ಡು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಗಂಭೀರ ಆರೋಪ

ಸಿಎಂ ರೇವಂತ್ ರೆಡ್ಡಿ ಈ ಹೇಳಿಕೆಗೆ ಕೆಟಿಆರ್ ಅವರ ಹಿಂದೆ ಕುಳಿತಿದ್ದ ಬಿಆರ್‌ಎಸ್ ಶಾಸಕರಾದ ಸಬಿತಾ ಇಂದ್ರ ರೆಡ್ಡಿ ಹಾಗೂ ಸುನೀತಾ ಲಕ್ಷ್ಮಾ ರೆಡ್ಡಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ರೇವಂತ್ ರೆಡ್ಡಿಯವರು ಕಾಂಗ್ರೆಸ್‌ಗೆ ಆಹ್ವಾನಿಸಿದ ಶಾಸಕರಲ್ಲಿ ನಾನು ಒಬ್ಬಳು, ಅವರು ಪಕ್ಷದಲ್ಲಿ ತಮಗೆ ಉಜ್ವಲ ಭವಿಷ್ಯವಿದೆ ಎಂದು ಭರವಸೆ ನೀಡಿದ್ದರು ಎಂದು ದೂರಿದ್ದಾರೆ. ಯಾಕೆ ನಿಮಗೆ ನನ್ನ ಮೇಲೆ ಸದಾ ದ್ವೇಷ? ಯಾಕೆ ಯಾವಾಗಲೂ ನೀವು ನನ್ನನ್ನು ಟಾರ್ಗೆಟ್ ಮಾಡ್ತೀರಿ? ಯಾಕೆ ನನ್ನನ್ನು ಅವಮಾನಿಸುತ್ತೀರಿ ಎಂದು ರೇವಂತ್ ರೆಡ್ಡಿಗೆ ಸಬಿತಾ ಇಂದ್ರ ರೆಡ್ಡಿ ಪ್ರಶ್ನಿಸಿದ್ದಾರೆ. 

ಇದಕ್ಕೆ ಪ್ರತಿಕ್ರಿಯಿಸಿದ ರೇವಂತ್ ರೆಡ್ಡಿ, ಸಬೀತಾ ನನಗೆ ಹಿರಿಯಕ್ಕ ತಮ್ಮನಿಗೆ ಪ್ರೋತ್ಸಾಹ ಮಾಡುವಂತೆ ಕಾಂಗ್ರೆಸ್ ಸೇರುವಂತೆ ಪ್ರೋತ್ಸಾಹಿಸಿದ್ದರು ಎಂದು ಹೇಳಿದ್ದಾರೆ. ಆದರೆ 2018ರಲ್ಲಿ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಾರ್ಟಿ ಮಲ್ಕಜಗಿರಿಯಿಂದ ನನ್ನನ್ನು ಸ್ಪರ್ಧಿಸುವಂತೆ ಕೇಳಿದಾಗ, ನನಗೆ ಚುನಾವಣೆ ವೇಳೆ ಬೆಂಬಲಿಸುವುದಾಗಿ ಹೇಳಿದ್ದ ಸಬೀತಾ ಕಾಂಗ್ರೆಸ್ ತೊರೆದು ಬಿಆರ್‌ಎಸ್ ಸೇರಿ ನನಗೆ ದ್ರೋಹ ಮಾಡಿದರು ಎಂದು ರೇವಂತ್ ರೆಡ್ಡಿ ದೂರಿದ್ದಾರೆ. 

ಮತ್ತೆ ಇಬ್ಬರು ಬಿಆರ್‌ಎಸ್‌ ಶಾಸಕರು ಕಾಂಗ್ರೆಸ್‌ ಸೇರ್ಪಡೆ, ಕೆ. ಚಂದ್ರಶೇಖರ್‌ ರಾವ್‌ ಗೆ ಭಾರೀ ಹಿನ್ನಡೆ

ರೇವಂತ್ ರೆಡ್ಡಿ ಹೇಳಿಕೆ ತೆಲಂಗಾಣ ವಿಧಾನಸಭೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಬಿಆರ್‌ಎಸ್ ಶಾಸಕರು ಸಿಎಂ ರೇವಂತ್ ರೆಡ್ಡಿ ತಮ್ಮ ಮಹಿಳಾ ಸಹೋದ್ಯೋಗಿಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸದನದ ಬಾವಿಗೆ ಇಳಿದು ಸರ್ವಾಧಿಕಾರ ಕೊನೆಗೊಳಿಸಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಭದ್ರತೆಗಿದ್ದ ಮಾರ್ಷಲ್‌ಗಳು ಪ್ರತಿಭಟನೆ ನಡೆಸುತ್ತಿದ್ದ ಶಾಸಕರನ್ನು ಸದನದಿಂದ ಹೊರ ಹಾಕಿದರು. 

Scroll to load tweet…