‘’40 ಶಾಸಕರಿಗೆ ಬಿಜೆಪಿ ಆಮಿಷ: ಆಪರೇಷನ್ ಕಮಲ ವಿಫಲವಾಗಲೆಂದು ರಾಜ್‌ಘಾಟ್‌ ಬಳಿ ಪ್ರಾರ್ಥನೆ’’

ಎಎಪಿ ಸಭೆಗೂ ಮುನ್ನ 10 ಕ್ಕೂ ಹೆಚ್ಚು ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವರದಿಗಳು ಬಂದ ಬೆನ್ನಲ್ಲೇ 62 ಎಎಪಿ ಶಾಸಕರ ಪೈಕಿ 53 ಶಾಸಕರು ಸಭೆಗೆ ಹಾಜರಾಗಿದ್ದರು ಎಂದು ತಿಳಿದುಬಂದಿದೆ. 

bjp tried to poach 40 aap mlas aap claims amid reports about some mlas are not reachable ash

ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಎಪಿ ಸಭೆ ನಡೆಸಿದ್ದು, ಆಪ್‌ ಶಾಸಕರ ಸಭೆಗೆ ಹಲವರು ಗೈರಾಗಿರುವುದು ಪಕ್ಷದ ವಲಯದಲ್ಲಿ ಆತಂಕ ಮೂಡಿದೆ ಎಂದು ಹೇಳಲಾಗುತ್ತಿದೆ. ಆದರೂ, ಸಭೆಗೂ ಮುನ್ನ ಕನಿಷ್ಠ 10 ಕ್ಕೂ ಹೆಚ್ಚು ಎಎಪಿ ಶಾಸಕರು ಪಕ್ಷದ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ವರದಿಗಳ ಬೆನ್ನಲ್ಲೇ ಬೆಳಗ್ಗೆ 11 ಗಂಟೆಗೆ ಎಎಪಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಎಎಪಿಯ 62 ಶಾಸಕರ ಪೈಕಿ 53 ಮಂದಿ  ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಬಿಜೆಪಿಯು ತನ್ನ ಶಾಸಕರನ್ನು ಸೆಳೆಯಲು ಮತ್ತು ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಪಕ್ಷವು ಆರೋಪಿಸಿದ ಬೆನ್ನಲ್ಲೇ ಗುರುವಾರ ಬೆಳಗ್ಗೆ 11 ಗಂಟೆಗೆ  ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರ ಸಭೆ ನಡೆದಿದೆ.

ದೆಹಲಿಯಲ್ಲಿರುವ ಎಎಪಿಯ 62 ಶಾಸಕರ ಪೈಕಿ 53 ಮಂದಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು ಎಂದು  ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಅಲ್ಲದೆ, ಸಭೆಯಲ್ಲಿ ಗೈರಾದವರು ಸಹ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಪಕ್ಷಕ್ಕೆ ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದ್ದಾರೆ ಎಂದೂ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇನ್ನೊಂದೆಡೆ, ಈ ಸಭೆಯಲ್ಲಿ ಭಾಗಿಯಾದ ಎಲ್ಲ ಶಾಸಕರು ಬಿಜೆಪಿಯ ಆಪರೇಷನ್ ಕಮಲದ ವೈಫಲ್ಯಕ್ಕಾಗಿ ಪ್ರಾರ್ಥಿಸಲು ಮಹಾತ್ಮ ಗಾಂಧಿಯವರ ಸ್ಮಾರಕ ರಾಜ್‌ಘಾಟ್‌ಗೆ ಹೋಗಿ ಪ್ರಾರ್ಥನ ಸಲ್ಲಿಸಿದ್ದಾರೆ ಎಂದು ಸಹ ವರದಿಯಾಗಿದೆ. 

ನಮ್ಮ 4 ಶಾಸಕರಿಗೆ ಬಿಜೆಪಿ ತಲಾ 20 ಕೋಟಿ ಆಫರ್‌: ಎಎಪಿ ಸ್ಫೋಟಕ ಆರೋಪ

"ಕೆಲವರು ಸಭೆಯಲ್ಲಿ ಇರಲಿಲ್ಲ. ಅರವಿಂದ್ ಕೇಜ್ರಿವಾಲ್ ಫೋನ್ ಸ್ಪೀಕರ್‌ನಲ್ಲಿ ಅವರೊಂದಿಗೆ ಮಾತನಾಡಿದರು ಮತ್ತು ಅವರು ತಮ್ಮ ಬೆಂಬಲವನ್ನು ವಾಗ್ದಾನ ಮಾಡಿದರು" ಎಂದು ಸೌರಭ್‌ ಭಾರದ್ವಾಜ್ ಸುದ್ದಿಗಾರರಿಗೆ ತಿಳಿಸಿದರು. ಹಾಗೂ,  "ದೆಹಲಿ ಸರ್ಕಾರ ಸುರಕ್ಷಿತವಾಗಿದೆ, ಯಾವುದೇ ಅಪಾಯವಿಲ್ಲ. ಅರವಿಂದ್ ಕೇಜ್ರಿವಾಲ್ ಆಪರೇಷನ್ ಕಮಲವನ್ನು ಸೋಲಿಸಿದ್ದಾರೆ. ಅದು ವಿಫಲವಾಗಿದೆ" ಎಂದೂ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ಇದಕ್ಕೂ ಮೊದಲು, ಸಭೆಗೆ ಆಗಮಿಸುವವರನ್ನು ಎಣಿಸುವಾಗ ಎಎಪಿಗೆ ಉದ್ವಿಗ್ನ ಕ್ಷಣಗಳು ಇದ್ದವು. 40 ಶಾಸಕರನ್ನು ಒಡೆಯಲು ಬಿಜೆಪಿ ತಯಾರಿ ನಡೆಸುತ್ತಿದೆ ಎಂದು ಹಿರಿಯ ಶಾಸಕ ದಿಲೀಪ್ ಪಾಂಡೆ ಹೇಳಿದ್ದು,  ಮತ್ತು ಕೆಲವು ಶಾಸಕರನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದರು. ಅಲ್ಲದೆ, ಎಲ್ಲಾ ಶಾಸಕರನ್ನು ಸಂಪರ್ಕಿಸಲಾಗುತ್ತಿದೆ. ನಿನ್ನೆ ಸಭೆಯ ಬಗ್ಗೆ ಸಂದೇಶವನ್ನು ತಿಳಿಸಲಾಗಿದೆ ಮತ್ತು ಸಂಪರ್ಕವನ್ನು ಸ್ಥಾಪಿಸಲು ಸಾಧ್ಯವಾಗದ ಶಾಸಕರನ್ನು ಸಂಪರ್ಕಿಸಲಾಗುತ್ತದೆ. ಬಿಜೆಪಿ 40 ಶಾಸಕರನ್ನು ಒಡೆಯಲು ತಯಾರಿ ನಡೆಸುತ್ತಿದೆ" ಎಂದು ಎಎಪಿ ಶಾಸಕ ದಿಲೀಪ್ ಪಾಂಡೆ ಹೇಳಿದರು.

ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದ ಮಾದರಿಯನ್ನು ಅನುಸರಿಸಿ ಬಿಜೆಪಿ ತನ್ನ ಸರ್ಕಾರವನ್ನು ಬೀಳಿಸಲು ಆಪರೇಷನ್ ಕಮಲದ ಸಂಚು ರೂಪಿಸುತ್ತಿದೆ ಎಂದು ಎಎಪಿ ಆರೋಪಿಸಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದೆ. ಬಿಜೆಪಿ ಎಂಟು ಶಾಸಕರನ್ನು ಹೊಂದಿದ್ದು, ಬಹುಮತಕ್ಕೆ ಇನ್ನೂ 28 ಶಾಸಕರ ಅಗತ್ಯವಿದೆ.

ಬಿಜೆಪಿ ಸೇರಿದರೆ ನಿಮ್ಮ ಕೇಸ್‌ಗಳು ಖುಲಾಸೆಯಾಗುತ್ತದೆ ಎಂದು ಸಂದೇಶ ಬಂದಿದೆ: ಮನೀಶ್‌ ಸಿಸೋಡಿಯಾ

ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು "ಕೆಳಿಸಲು" ಬಿಜೆಪಿ ಶಾಸಕರಿಗೆ ₹ 20 ಕೋಟಿ ಮತ್ತು ಇತರೆ ಶಾಸಕರನ್ನು ತಂದರೆ ₹ 25 ಕೋಟಿ ನೀಡುತ್ತದೆ ಎಂದು ನಿನ್ನೆ ಎಎಪಿ ಆರೋಪಿಸಿದೆ. ಅಲ್ಲದೆ, ಇತ್ತೀಚೆಗಷ್ಟೇ ದೆಹಲಿ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸಹ ನನಗೆ ಬಿಜೆಪಿ ಆಫರ್‌ ನೀಡಿದೆ, ಪಕ್ಷವನ್ನು ಒಡೆದರೆ ನನ್ನನ್ನು ಮುಖ್ಯಮಂತ್ರಿ ಮಾಡುವುದಾಗಿಯೂ ಹಾಗೂ ನನ್ನ ವಿರುದ್ಧ ಇಡಿ, ಸಿಬಿಐನ ಎಲ್ಲ ಕೇಸ್‌ಗಳನ್ನು ಮುಚ್ಚಿ ಹಾಕುವುದಾಗಿಯೂ ಬಿಜೆಪಿ ಸಂದೇಶ ನೀಡಿದೆ ಎಂದು ಮನೀಶ್‌ ಸಿಸೋಡಿಯಾ ಹೇಳಿಕೊಂಡಿದ್ದರು. ಆಧರೆ, ಬಿಜೆಪಿ ಈ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದೆ. 

Latest Videos
Follow Us:
Download App:
  • android
  • ios