ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಮೋಹನ್ ಅವರು ದೊಡ್ಡ ಅನಾಹುತವೊಂದರಿಂದ ಜಸ್ಟ್ ಪಾರಾದ ಘಟನೆ ಇಂದು ನಡೆದಿದೆ.

ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಸರು ಮಾಡಿರುವ ನಟಿ ಪ್ರಿಯಾಂಕಾ ಮೋಹನ್ ಅವರು ದೊಡ್ಡ ಅನಾಹುತವೊಂದರಿಂದ ಜಸ್ಟ್ ಪಾರಾದ ಘಟನೆ ಇಂದು ನಡೆದಿದೆ. ನಟಿ ಪ್ರಿಯಾಂಕಾ ಮೋಹನ್ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಇದ್ದಕ್ಕಿದ್ದಂತೆ ಸ್ಟೇಜ್ ಕುಸಿದು ಬಿದಿದ್ದು, ಅದೃಷ್ಟವಶಾತ್ ಪ್ರಿಯಾಂಕಾ ಮೋಹನ್ ಯಾವುದೇ ಹಾನಿಯಾಗದೇ ಪಾರಾಗಿದ್ದಾರೆ. ತೆಲಂಗಾಣದ ತೊರುರ್‌ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಹೊಸದಾಗಿ ಆರಂಭವಾದ ಕಸಂ ಶಾಪಿಂಗ್ ಮಾಲ್‌ನ ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿ ಪ್ರಿಯಾಂಕಾ ಮೋಹನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. 

ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸುತ್ತು ಹೊಡೆಯುತ್ತಿದ್ದು, ವೈರಲ್ ಆಗಿವೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ಪ್ರಿಯಾಂಕಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ತಾನು ಆರಾಮವಾಗಿರುವುದಾಗಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆಯುವ ವೇಳೆ ಕಾಂಗ್ರೆಸ್ ನಾಯಕ ಹನುಮಂಡ್ಲ ಝಾನ್ಸಿ ರೆಡ್ಡಿ ಅವರು ಕೂಡ ನಟಿ ಪ್ರಿಯಾಂಕಾ ಅವರ ಜೊತೆಗೆ ಇದ್ದರು. ಅವರಿಗೆ ಘಟನೆಯಲ್ಲಿ ಸ್ವಲ್ಪ ಮಟ್ಟಿನ ಗಾಯಗಳಾಗಿವೆ ಎಂದು ವರದಿಯಾಗಿದೆ. 

ಗ್ಲಾಮರಸ್ ಲುಕ್‌ನಲ್ಲಿ ಮಿಂಚಿದ ಪ್ರಿಯಾಂಕ ಮೋಹನ್‌, ಇಂಥಾ ಫೋಟೋಸ್ ಹಾಕ್ಬೇಡಿ ಬೇಜಾರಾಗುತ್ತೆ ಎಂದ ಫ್ಯಾನ್ಸ್!

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟ್ಟ ಮಾಡಿದ ನಟಿ ಪ್ರಿಯಾಂಕಾ ಹೀಗೆ ಬರೆದಿದ್ದಾರೆ. ' ತರುರ್‌ನಲ್ಲಿ ನಾನು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಸಣ್ಣದೊಂದು ಅವಘಡ ಸಂಭವಿಸಿತ್ತು. ಸಣ್ಣ ಗಾಯದೊಂದಿಗೆ ಈ ಅನಾಹುತದಿಂದ ನಾನು ಪಾರಾಗಿದ್ದೇನೆ. ನಾನೀಗ ಆರಾಮವಾಗಿದ್ದೇನೆ ಎಂದು ನನ್ನ ಹಿತೈಷಿಗಳಿಗೆ ಈ ಮೂಲಕ ತಿಳಿಯಪಡಿಸಲು ಬಯಸುತ್ತೇನೆ. ಈ ಘಟನೆಯಲ್ಲಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.

ಅಲ್ಲದೇ ಈ ಸಂದರ್ಭದಲ್ಲಿ ನನ್ನ ಕ್ಷೇಮ ವಿಚಾರಿಸಿ ಮೆಸೇಜ್ ಮಾಡಿದ ಕರೆ ಮಾಡಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಶಾಪಿಂಗ್ ಮಾಲ್‌ನ ಉದ್ಘಾಟನ ಸಮಾರಂಭದ ವೇಳೆ ವೇದಿಕೆ ಕುಸಿದ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮತ್ತೊಂದು ವೀಡಿಯೋದಲ್ಲಿ ವೇದಿಕೆ ಕುಸಿದ ನಂತರ ಪ್ರಿಯಾಂಕಾ ಮೋಹನ್ ಅವರನ್ನು ಬೌನ್ಸರ್‌ಗಳು ಸುರಕ್ಷಿತವಾಗಿ ಆ ಸ್ಥಳದಿಂದ ಕರೆದೊಯ್ಯುತ್ತಿರುವ ವೀಡಿಯೋ ವೈರಲ್ ಆಗಿದೆ. 

ಬೆಡ್‌ರೂಮ್‌ ಸೀನ್‌ ಮಾಡಲ್ಲ, ಲಿಪ್‌ಲಾಕ್‌ ಅಗೋದೆ ಇಲ್ಲ; ಕೋಟಿ ಕೊಟ್ರೂ ಬೇಡ ಅಂತಾರೆ ಪ್ರಿಯಾಂಕಾ ಮೋಹನ್!

ಇನ್ನು ಪ್ರಿಯಾಂಕಾ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಪ್ರಿಯಾಂಕಾ ಮೋಹನ್ ಅವರು ನಾನಿ ಹಾಗೂ ಎಸ್‌ಜೆ ಸೂರ್ಯಾ ಅವರ ಸರಿಪೊಧಾ ಶನಿವಾರಂನಲ್ಲಿ ಕಾಣಿಸಿಕೊಂಡಿದ್ದಾರೆ., ಹಾಗೆಯೇ ತಮಿಳಿನ ಬ್ರದರ್ ಸಿನಿಮಾದಲ್ಲಿ ಅವರು ಜಯಂ ರವಿ ಜೊತೆ ನಟಿಸುತ್ತಿದ್ದಾರೆ. 

Scroll to load tweet…