ಕೇಂದ್ರ ಸರ್ಕಾರವು ದೇಶದ ಮೂರು ಪ್ರಮುಖವಿಮಾನ ನಿಲ್ದಾಣಗಳನ್ನು ಖಾಸಗಿ ವಶಕ್ಕೆ ನೀಡಲು ನಿರ್ಧಾರ ಮಾಡಿದೆ.

ನವದೆಹಲಿ (ಆ.20): ಕೇಂದ್ರ ಸರ್ಕಾರ ಇದೀಗ ಇನ್ನೂ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಗೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಈ ಕುರಿತ ಪ್ರಸ್ತಾವನೆಯನ್ನು ಬುಧವಾರ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ. 

ಕಲಬುರಗಿಯಲ್ಲಿ ಹವಾಮಾನ ವೈಪರಿತ್ಯ: ಆಗಸದಲ್ಲೇ ಸುತ್ತಾಡಿ ವಾಪಸ್‌ ಹೋದ ಎರಡು ವಿಮಾನಗಳು..!.

ಜೈಪುರ, ಗುವಾಹಟಿ ಮತ್ತು ತಿರುವನಂತಪುರ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿ ಸಹಭಾಗಿತ್ವ(ಪಿಪಿಪಿ)ದಡಿ ಖಾಸಗಿ ಸಂಸ್ಥೆಗಳಿಗೆ ನೀಡಲು ಒಪ್ಪಿಗೆ ವ್ಯಕ್ತಪಡಿಸಿದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Scroll to load tweet…

ಮಂಗಳೂರು ಏರ್‌ಪೋರ್ಟ್‌ಗೆ ಮತ್ತೊಂದು ಬಾಂಬ್ ಬೆದರಿಕೆ : ಆರೋಪಿ ವಶಕ್ಕೆ

2020ರ ಫೆಬ್ರವಯಲ್ಲಿ ಅದಾನಿ ಗ್ರೂಪ್‌ ಮಂಗಳೂರು, ಅಹಮದಾಬಾದ್‌ ಮತ್ತು ಲಖನೌ ವಿಮಾನ ನಿಲ್ದಾಣಗಳ ಒಪ್ಪಂದಕ್ಕೆ ಸಹಿ ಮಾಡಿತ್ತು.