ಕಲಬುರಗಿ(ಆ.16): ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎರಡು ವಿಮಾನಗಳು ಲ್ಯಾಂಡ್‌ ಅಗದೆ ಆಗಸದಲ್ಲೇ ಸುತ್ತಾಡಿ ವಾಪಸ್‌ ಹೋದ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 

"

ಹವಾಮಾನ ವೈಪರಿತ್ಯದಿಂದ ಬೆಂಗಳೂರು-ಕಲಬುರಗಿ ನಡುವಿನ ಅಲಯನ್ಸ್ ಏರ್ ವಿಮಾನವನ್ನ ಹೈದರಾಬಾದ್‌ಗೆ  ಡೈವರ್ಟ್, ಮತ್ತೊಂದು ಸ್ಟಾರ್ ಏರ್ ವಿಮಾನವನ್ನ ಮರಳಿ ಬೆಂಗಳೂರಿಗೆ ಕಳಹಿಸಲಾಗಿದೆ ಎಂದು ತಿಳಿದು ಬಂದಿದೆ.

ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ

ಕಲಬುರಗಿ ನಗರದಲ್ಲಿ ಇಂದು ಮೋಡ ಕವಿದ ವಾತಾವರಣ ಮತ್ತು ಜಿಟಿಜಿಟಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ವಿಮಾನ ಲ್ಯಾಂಡಿಂಗ್‌ಗೆ ತೊಂದರೆ ಉಂಟಾಗಿದೆ. ಸುಮಾರು ನಲವತ್ತು ನಿಮಿಷ ಕಲಬುರಗಿ ಸುತ್ತಮುತ್ತ ಹಾರಾಡಿದ ವಿಮಾನಗಳು ಒಂದು ವಿಮಾನ ಹೈದರಾಬಾದ್‌ ಹಾಗೂ ಬೆಂಗಳೂರಿಗೆ ತೆರಳಿವೆ.