Asianet Suvarna News Asianet Suvarna News

ಚುಮ್ಮಾ ಚುಮ್ಮಾ ದೇ ದೇ, ಸಂದರ್ಶನದಲ್ಲೇ ಶಿಕ್ಷಕಿ ಬಳಿ ಅಸಭ್ಯವಾಗಿ ವರ್ತಿಸಿದ ಪ್ರಿನ್ಸಿಪಾಲ್ ದೃಶ್ಯ ಸೆರೆ!

 ಇಲ್ಲೇ ಕೆನ್ನೆಗೆ ಒಂದು ಚುಮ್ಮಾ ನೀಡಿದರೆ ನಿಮ್ಮ ಕೆಲಸ ಪಕ್ಕಾ. ಸಂದರ್ಶನದ ನೆಪದಲ್ಲಿ ಕೆಲಸ ಅರಸಿ ಬಂದ ಶಿಕ್ಷಕಿಯನ್ನೇ ಬಳಸಿಕೊಳ್ಳಲು ಮುಂದಾದ ಪ್ರಿನ್ಸಿಪಲ್ ವಿಡಿಯೋ ಇದೀಗ ಬಹಿರಂಗವಾಗಿದೆ. 

private school Principal demand kiss from teacher during interview videos spark outrage at UP ckm
Author
First Published Aug 8, 2024, 11:51 AM IST | Last Updated Aug 8, 2024, 11:51 AM IST

ಉನ್ನಾವೋ(ಆ.08) ಟೀಚರ್ ಹುದ್ದೆ ಖಾಲಿ ಇದೆ ಅನ್ನೋ ಕಾರಣಕ್ಕೆ ಸಂದರ್ಶನಕ್ಕೆ ತೆರಳಿದ್ದ ಶಿಕ್ಷಕಿಗೆ ಸಂದರ್ಶನದಲ್ಲೇ ಕಿಸ್ ಕೇಳಿದ ಘಟನೆ ವಿಡಿಯೋ ಬಯಲಾಗಿದೆ. ಪ್ರಿನ್ಸಿಪಾಲ್ ಅಸಭ್ಯ ನಡೆಯ ಈ ವಿಡಿಯೋ ಬೆನ್ನಲ್ಲೇ ಇದೀಗ ಪ್ರಿನ್ಸಿಪಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದೆ. ಮುತ್ತಿಗೆ ಬೇಡಿಕೆ ಇಟ್ಟ ಪ್ರಿನ್ಸಿಪಾಲ್ ವಿಡಿಯೋ ಇದೀಗ ಎಲ್ಲೆಡೆ ಹರಿದಾಡಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.

ಪೂರನ್ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹುದ್ದೆ ಖಾಲಿ ಇದೆ ಅನ್ನೋ ಮಾಹಿತಿ ಪಡೆದ ಮಹಿಳಾ ಟೀಚರ್ ಸಂದರ್ಶನಕ್ಕಾಗಿ ತೆರಳಿದ್ದಾರೆ. ಶಾಲೆಯ ಪ್ರಿನ್ಸಿಪಲ್ ವಿಕಾಸ್ ಜೈಸ್ವಾಲ್ ಕೊಠಡಿಗೆ ತೆರಳಿದ ಶಿಕ್ಷಕಿ ತಮ್ಮ ಅನುಭವ, ಕಲಿಕಾ ವಿಧಾನ ಸೇರದಂತೆ ಇತರ ಮಾಹಿತಿಗಳ ರೆಸ್ಯೂಮ್ ನೀಡಿದ್ದಾರೆ. ರೆಸ್ಯೂಮ್ ಪಡದ ಪ್ರಿನ್ಸಿಪಲ್ ಎಲ್ಲವನ್ನೂ ಬದಿಗಿಟ್ಟು ಉಭಯ ಕುಶಲೋಪರಿ ಮಾತನಾಡಲು ಆರಂಭಿಸಿದ್ದಾರೆ. 

8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!

ಒಂದೆಡೆ ಮಾತನಾಡಿದ ಪ್ರಿನ್ಸಿಪಾಲ್ ನಿಮ್ಮ ಕೆಲಸ ಪಕ್ಕಾ. ನಿಮಗೆ ಈ ಹುದ್ದೆ ಕೊಡುತ್ತೇವೆ. ಆದರೆ ನಿಮ್ಮ ಸಹಕಾರ ಬೇಕು. ನೀವು ಸ್ವಲ್ಪ ಸಹಕರಿಸಿದರೆ ಎಲ್ಲವೂ ಒಕೆ ಎಂದಿದ್ದಾನೆ. ಪ್ರಿನ್ಸಿಪಾಲ್ ಸ್ಪಷ್ಟವಾಗಿ ಅರ್ಥವಾಗದೇ ಶಿಕ್ಷಕಿ ತಬ್ಬಿಬ್ಬಾಗಿದ್ದಾರೆ. ಈ ವೇಳೆ ಕೆನ್ನೆ ತೋರಿಸಿ ಇಲ್ಲಿಗೆ ಸಿಹಿ ಮುತ್ತು ಕೊಟ್ಟರೆ ಕೆಲಸ ಪಕ್ಕಾ ಎಂದಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಮಹಿಳಾ ಟೀಚರ್, ಇದು ಸಾಧ್ಯವಿಲ್ಲ, ಈ ರೀತಿ ನಾನು ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ. 

ಪ್ರಿನ್ಸಿಪಲ್ ವಿರುದ್ಧ ಇದೇ ರೀತಿ ಹಲವು ಆರೋಪಗಳು ಬಂದಿರುವ ಕಾರಣ ಸಂದರ್ಶನದ ವೇಳೆ ಕ್ಯಾಮೆರ ಇಡಲಾಗಿತ್ತು. ಹೀಗಾಗಿ ಪ್ರಿನ್ಸಿಪಾಲ್ ಅಸಭ್ಯ ನಡೆ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದರ ಬೆನ್ನಲ್ಲೇ ಪ್ರಿನ್ಸಿಪಾಲ್ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ. ಪ್ರಿನ್ಸಿಪಾಲ್ ವಜಾಗೊಳಿಸಲು ಆಗ್ರಹ ಹೆಚ್ಚಾಗುತ್ತಿದೆ. 

 

 

ಈ ಖಾಸಗಿ ಶಾಲೆ ಮೇಲೆ ಅನುಮಾನ ಹೆಚ್ಚಾಗತೊಡಗಿದೆ. ಈ ರೀತಿಯ ವ್ಯಕ್ತಿಗಳಿದ್ದರೆ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ? ಶಿಕ್ಷಕಿಯರು ಪಾಠ ಮಾಡುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಶಿಕ್ಷಣ ಸಂಸ್ಥೆ ಮೌಲ್ಯ, ಶಿಸ್ತು, ಗೌರವ ಸೇರಿದಂತೆ ಪಠ್ಯ ಹಾಗೂ ಪಠ್ಯೇತರ  ವಿಷಯಗಳನ್ನು ಕಲಿಸಿಕೊಡುವ ದೇಗುಲ. ಆದರೆ ಈ ದೇಗುಲದಲ್ಲಿ ಈ ರೀತಿಯ ಘಟನೆಗಳು ನಡೆಯತ್ತಿದ್ದರೆ ಆತಂಕ ಮಾತ್ರವಲ್ಲ, ಅಪಾಯಾಕಾರಿ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.

ಶಾಲಾ ಟೀಚರ್ ಜೊತೆ ಪ್ರಿನ್ಸಿಪಲ್ ಕುಚ್ ಕುಚ್, ಎಲ್ಲೆಡೆ ಹರಿದಾಡುತ್ತಿದೆ ರೋಮ್ಯಾನ್ಸ್ ವಿಡಿಯೋ!
 

Latest Videos
Follow Us:
Download App:
  • android
  • ios