* ಡ್ರೋನ್‌ ಹಾರಾಟದ ಪ್ರಾತ್ಯಕ್ಷಿಕೆ ವೀಕ್ಷಣೆ* ಪೈಲಟ್‌ಗಳೊಂದಿಗೆ ಮೋದಿ ಸಂವಾದ* ಮೇಡ್‌ ಇನ್‌ ಇಂಡಿಯಾ ಡ್ರೋನ್‌ ಟ್ಯಾಕ್ಸಿ ಮಾದರಿ ಪ್ರದರ್ಶನ

ನವದೆಹಲಿ (ಮೇ.27): ಇಲ್ಲಿನ ಪ್ರಗತಿ ಮೈದಾನದಲ್ಲಿ 2 ದಿನಗಳ ಕಾಲ ಆಯೋಜಿಸಿರುವ ದೇಶದ ಅತಿದೊಡ್ಡ ಡ್ರೋನ್‌ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಲಿದ್ದಾರೆ. ಈ ವೇಳೆ ಡ್ರೋನ್‌ಗಳ ಹಾರಾಟದ ಪ್ರಾತ್ಯಕ್ಷಿಕೆ ವೀಕ್ಷಣೆ ಜೊತೆಗೆ, ಕಿಸಾನ್‌ ಡ್ರೋನ್‌ ಪೈಲಟ್‌ಗಳ ಜೊತೆಗೆ ಪ್ರಧಾನಿ ಮಾತುಕತೆ ನಡೆಸಲಿದ್ದಾರೆ.

ಯಾರ್ಯಾರು ಭಾಗಿ?: ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ವಿದೇಶಿ ರಾಜತಾಂತ್ರಿಕರು, ಸೇನಾ ಪಡೆಗಳು, ಸಾರ್ವಜನಿಕ ವಲಯದ ಉದ್ಯಮಿಗಳು, ಖಾಸಗಿ ಕಂಪನಿಗಳು ಹಾಗೂ ಡ್ರೋನ್‌ ಸ್ಟಾರ್ಟಪ್‌ ಪಾಲ್ಗೊಳ್ಳಲಿವೆ. 70 ಹೆಚ್ಚು ಪ್ರದರ್ಶಕರು ಡ್ರೋನ್‌ಗಳನ್ನು ವಿವಿಧೋದ್ದೇಶಕ್ಕಾಗಿ ಬಳಸುವ ಬಗ್ಗೆ ತಿಳಿಸಲಿದ್ದಾರೆ. ಈ ವೇಳೆ ವರ್ಚುವಲ್‌ ಮಾದರಿಯಲ್ಲಿ ಡ್ರೋನ್‌ ಪೈಲಟ್‌ ಪ್ರಮಾಣಪತ್ರ ವಿತರಣೆ, ಹೊಸ ಉತ್ಪನ್ನಗಳ ಬಿಡುಗಡೆ, ಡ್ರೋನ್‌ ಹಾರಾಟದ ಪ್ರಾತ್ಯಕ್ಷಿಕೆ, ಮೇಡ್‌ ಇನ್‌ ಇಂಡಿಯಾ ಡ್ರೋನ್‌ ಟ್ಯಾಕ್ಸಿ ಮಾದರಿ ಪ್ರದರ್ಶಿಸಲಾಗುವುದು.

ಎಲ್ಲೆಲ್ಲಿ ಡ್ರೋನ್‌ ಬಳಕೆ?: ಡ್ರೋನ್‌ಗಳ ಪ್ರಸ್ತುತ ಕಣ್ಗಾವಲು, ನಿರ್ಣಾಯಕ ಸ್ವತ್ತುಗಳ ತಪಾಸಣೆ ಮತ್ತು ಮೇಲ್ವಿಚಾರಣೆ, ಸಮೀಕ್ಷೆಗೆ ಬಳಸಲಾಗುತ್ತದೆ. ಇದರೊಂದಿಗೆ ರಕ್ಷಣೆ ಮತ್ತು ಆಂತರಿಕ ಭದ್ರತೆ, ಕೃಷಿ, ತೈಲ ಮತ್ತು ಅನಿಲ, ಇಂಧನ ಮತ್ತು ಉಪಯೋಗ, ದೂರಸಂಪರ್ಕ, ಭೌಗೋಳಿಕ ಸಮೀಕ್ಷೆ, ಗಣಿಗಾರಿಕೆ, ನಿರ್ಮಾಣ ಮತ್ತು ಸಾರಿಗೆಯಂತಹ ಅನೇಕ ಕಾರ್ಯಗಳಿಗೂ ಡ್ರೋನ್‌ ಬಳಕೆ ಮಾಡಲಾಗುತ್ತದೆ.

8 ವರ್ಷಗಳ ದಣಿವರಿಯದ ಪಯಣ, ಸವಾಲುಗಳ ಹಾದಿಯಲ್ಲಿ ಮೋದಿ ಸಾಧನೆಯ ಹೆಜ್ಜೆ

ಕಿಸಾನ್‌ ಡ್ರೋನ್‌: ಇತ್ತೀಚೆಗೆ ಪ್ರಧಾನಿ ದೇಶದ ವಿವಿಧ ಭಾಗದ ಕೃಷಿ ಭೂಮಿಯಲ್ಲಿ ಕೀಟನಾಶಕಗಳನ್ನು ಸಿಂಪಡಿಸಲು 100 ಕಿಸಾನ್‌ ಡ್ರೋನ್‌ಗಳಿಗೆ ಚಾಲನೆ ನೀಡಿದ್ದರು. ಡ್ರೋನ್‌ಗಳನ್ನು ವಿಶೇಷವಾಗಿ ಕೃಷಿಯಲ್ಲಿ ಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ, ಬೆಳೆಗಳ ಮೌಲ್ಯಮಾಪನ, ಬೆಳೆ ಸಾಗಾಣಿಕೆ, ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ.

ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್‌ ಮ್ಯಾನ್‌: ತೈಲ ಬೆಲೆ ಏರಿಳಿಸುವುದರಲ್ಲಿ ಮೋದಿ ಮ್ಯಾಜಿಕ್‌ ಮ್ಯಾನ್‌, ಇನ್ನರೆಡು ದಿನಗಳಲ್ಲಿ ತೈಲ ಬೆಲೆ ಯಥಾಸ್ಥಿತಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಲೇವಡಿ ಮಾಡಿದರು. ನಗರದ ಹಿಲ್‌ ಗಾರ್ಡನ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಇಳಿಕೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿದಾಗ ಜನರಿಗೆ ಯಾವುದೇ ಹೊರೆಯಾಗಿಲ್ಲ. ಆದರೆ ದೇಶದಲ್ಲಿ ಮೋದಿ ಮ್ಯಾಜಿಕ್‌ನಿಂದ ಇದೇಲ್ಲ ಸರ್ಕಸ್‌ ನಡೆಯುತ್ತಿದೆ ಎಂದರು.

ಪ್ರಧಾನಿ ಮೋದಿಯೇ ಆದರ್ಶ: ಮೊಬೈಲ್ ಟೀ ಡಿಸ್ಪೆನ್ಸರ್ ಆವಿಷ್ಕರಿಸಿದ ಹುಬ್ಬಳ್ಳಿಯ ಇಂಜಿನಿಯರ್

ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಮಹಾ ನಾಯಕ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ. ಮೊದಲು ತಮ್ಮಲಿರುವ ಹುಳುಕನ್ನು ಬಿಜೆಪಿ ಸರಿಪಡಿಸಿಕೊಳ್ಳಲಿ. ಆಮೇಲೆ ವಿರೋಧ ಪಕ್ಷದ ಕುರಿತು ಮಾತನಾಡಲಿ ಎಂದರು. ನಮ್ಮ ಪಕ್ಷದಲ್ಲಿ ಯಾವುದೇ ರೀತಿ ಗೊಂದಲಗಳಿಲ್ಲ. ಒಂದು ವೇಳೆ ಗೊಂದಲಗಳು ಬಂದರೆ ನಾವೇಲ್ಲಾ ಒಂದುಗೂಡಿ ನಮ್ಮಲಿಯೇ ಬಗೆಹರಿಸಿಕೊಳ್ಳುತ್ತೆವೆ. ಮೊದಲು ಬಿಜೆಪಿ ತಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದು ಚಾಟಿ ಬೀಸಿದರು.