PM Modi in Gujarat ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ!
ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ
ಗಾಂಧಿನಗರದಲ್ಲಿರುವ ತಾಯಿ ಹೀರಾಬೆನ್ ಮೋದಿ ಅವರ ನಿವಾಸಕ್ಕೆ ಭೇಟಿ
ಕಾಲಿಗೆರೆದು ಆಶೀರ್ವಾದ ಪಡೆದುಕೊಂಡ ದೇಶದ ಪ್ರಧಾನಿ
ಗಾಂಧಿನಗರ ( ಮಾ. 11): ಎರಡು ದಿನಗಳ ಗುಜರಾತ್ (Gujarat ) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಶುಕ್ರವಾರ ತಮ್ಮ ತಾಯಿ ಹೀರಾಬೆನ್ ಮೋದಿಯನ್ನು (Heeraben Modi) ಗಾಂಧಿನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಇದೇ ವೇಳೆ ಪ್ರಧಾನಿ ಮೋದಿ ಅವರು ತಮ್ಮ ತಾಯಿಯೊಂದಿಗೆ ಭೋಜನ ಸವಿದರು.
ಇದಕ್ಕೂ ಮುನ್ನ ಶುಕ್ರವಾರ ಅಹಮದಾಬಾದ್‌ನಲ್ಲಿ ಗುಜರಾತ್ ಪಂಚಾಯತ್ ಮಹಾಸಮ್ಮೇಳನವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು.ಇದಕ್ಕೂ ಮುನ್ನ ಅವರು ಅಹಮದಾಬಾದ್‌ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಮತ್ತು ಕಾರ್ಯಕರ್ತರ ಸಭೆಯನ್ನು ನಡೆಸಿದರು ಮತ್ತು ಪಕ್ಷವು "ಹೆಚ್ಚು ಪರಿಣಾಮಕಾರಿಯಾಗಿ ಜನರಿಗೆ ಸೇವೆ ಸಲ್ಲಿಸುವ" ವಿಧಾನದ ಬಗ್ಗೆ ಚರ್ಚಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಅದ್ಭುತ ಸಾಧನೆ ತೋರಿದ ಬಳಿಕ ಶುಕ್ರವಾರ ಪ್ರಧಾನಿ ಗುಜರಾತ್ ಗೆ ಆಗಮಿಸಿದರು. ಈ ವೇಳೆ ವಿಮಾನ ನಿಲ್ದಾಣದಿಂದ ಕಮಲಂನಲ್ಲಿರುವ ಬಿಜೆಪಿ ಕಚೇರಿಯವರೆಗೆ ಅವರು ರೋಡ್ ಶೋ ನಡೆಸಿದರು.
“ಜನರ ಪ್ರೀತಿಯಿಂದ ನಾನು ವಿನಮ್ರನಾಗಿದ್ದೇನೆ. ಈ ಬೆಂಬಲ ಮತ್ತು ಉತ್ಸಾಹವು ನಮ್ಮ ನಾಗರಿಕರ ಸೇವೆಯಲ್ಲಿ ಇನ್ನಷ್ಟು ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ, ”ಎಂದು ಅವರು ಹೇಳಿದರು.
ಈ ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಭೇಟಿ ಮಹತ್ವ ಪಡೆದುಕೊಂಡಿದೆ. ಫೆಬ್ರವರಿ-ಮಾರ್ಚ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಪಂಜಾಬ್ ಹೊರತುಪಡಿಸಿ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ, ಅದರ ಫಲಿತಾಂಶ ಮಾರ್ಚ್ 10 ರಂದು ಹೊರಬಿದ್ದಿದೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 255 ಸ್ಥಾನಗಳನ್ನು ಗೆದ್ದಿವೆ. ಉತ್ತರಾಖಂಡದಲ್ಲಿ ಪಕ್ಷವು 70 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಪಡೆದುಕೊಂಡಿದೆ. ಗೋವಾದಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ 20 ಸ್ಥಾನಗಳನ್ನು ಗೆದ್ದು ಸ್ವತಂತ್ರ ಅಭ್ಯರ್ಥಿಗಳ ಬೆಂಬಲವನ್ನು ಪಡೆದರೆ, ಮಣಿಪುರದಲ್ಲಿ ಆಡಳಿತಾರೂಢ ಬಿಜೆಪಿ ಒಕ್ಕೂಟವು 60 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಜಯಿಸಿದೆ.
Election Result ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ಯೋಗಿ ಆದಿತ್ಯನಾತ್ ರಾಜೀನಾಮೆ!
ಗುರುವಾರ ಪಂಚರಾಜ್ಯಗಳ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ಉತ್ತರಾಖಂಡದಲ್ಲಿ ಎರಡನೇ ಅವಧಿಗೆ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಗೆ ಇಂದು ನಾಲ್ಕೂ ದಿಕ್ಕಿನಿಂದ ಆಶೀರ್ವಾದ ಸಿಕ್ಕಿದೆ. ಒಂದು ಗುಡ್ಡಗಾಡು ರಾಜ್ಯ, ಮತ್ತೊಂದು ಸಮುದ್ರ ತಟ, ಮತ್ತೊಂದು ಪೂರ್ವ ಗಡಿ, ಮತ್ತೊಂದು ಮಾ ಗಂಗೆ ಇರುವ ನಾಡು ಬಿಜೆಪಿ ಪಾಲಾಗಿದೆ. ಬಿಜೆಪಿಯ ನೀತಿ, ನೀಯತ್ತು ಹಾಗೂ ನಿರ್ಣಯದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ. ಚುನಾವಣಾ ಫಲಿತಾಂಶ ಬಿಜೆಪಿಯ ಆಡಳಿತಕ್ಕೆ ಮತ್ತಷ್ಟು ಬಲ ಕೊಟ್ಟಿದೆ. ಮೊದಲು ಜನರು ತಮ್ಮದೇ ಹಕ್ಕುಗಳಿಗಾಗಿ ಸರ್ಕಾರದ ಬಾಗಿಲು ತಟ್ಟಿ ಸುಸ್ತಾಗುತ್ತಿದ್ದರು. ಹಲವಾರು ಬಾರಿ ಲಂಚ ಕೊಟ್ಟು ಸೌ;ಲಭ್ಯ ಪಡೆದುಕೊಳ್ಳಬೇಕಿತ್ತು. ಬಡವರು ಹೈರಾಣಾಗುತ್ತಿದ್ದರು. ಆದರೆ ಇಂದು ಬಡವರಿಗೆ ತಮ್ಮ ಹಕ್ಕು ಸಿಗುತ್ತಿದೆ. ಯಾವುದೇ ಸಮಸ್ಯೆ, ಅಡ್ಡಿ ಇಲ್ಲದೇ ಬಿಜೆಪಿ ಆಡಳಿತ ಅವಧಿಯಲ್ಲಿ ಅವರಿಗೆ ಇದು ಸಿಗುತ್ತಿದೆ' ಎಂದು ಹೇಳಿದ್ದರು.
Election Result 2022 ಮಾಯಾವತಿ, ಓವೈಸಿಗೆ ಪದ್ಮಭೂಷಣ, ಭಾರತ ರತ್ನ ನೀಡಿ ಎಂದ ಶಿವಸೇನೆ!
ಎರಡು ದಶಕಗಳಿಗೂ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸರ್ಕಾರ, ಆಡಳಿತದಲ್ಲಿ ಎಷ್ಟು ಸಮಸ್ಯೆ ಇರುತ್ತದೆ ಎಂದು ನನಗೆ ಗೊತ್ತಿದೆ. ಹೀಗಿದ್ದರೂ ನಾನು ತೆಗೆದುಕೊಂಡ ಧೈರ್ಯ ಬಹುಶಃ ಯಾರೂ ತೆಗೆದುಕೊಂಡಿರಲಿಲಕ್ಕಿಲ್ಲ. ನಾನು ಈ ಬಗ್ಗೆ ಸ್ವಾತಂತ್ರ್ಯ ದಿನದಂದು ಉಲ್ಲೇಖಿಸಿದ್ದೆ. ನಾನಂದು ಬಿಜೆಪಿಗೆ ಎಲ್ಲೆಲ್ಲಿ ಸೇವೆ ಮಾಡುವ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ನಮ್ಮ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಇಂತಹ ನಿರ್ಧಾರ ತೆಗೆದುಕೊಳ್ಳಿಲು ಭಲ ಸಿಗುತ್ತದೆ. ಪ್ರತಿ ಬಡವರನ್ನು ತಲುಪುವ ನಿರ್ಧಾರವೇ ಇದಕ್ಕೆ ಕಾರಣ ಎಂದು ಹೇಳಿದ್ದರು.