PM Narendra Modi VS Rahul Gandhi: ಸೋಶಿಯಲ್ ಮೀಡಿಯಾದಲ್ಲಿ ಕಿಂಗ್ ಯಾರು?
ಅದೇನೇ ಹೇಳಬಹುದು.. ಇಂದು ರಾಷ್ಟ್ರದಲ್ಲಿ ಎರಡು ಪ್ರಖ್ಯಾತ ರಾಜಕಾರಣಿಗಳೇನಾದರೂ ಇದ್ದರೆ ಅದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಇನ್ನು ಸೋಶಿಯಲ್ ಮೀಡಿಯಾದಲ್ಲೂ ಇವರು ಜನಪ್ರಿಯರಾಗಿದ್ದಾರೆ.

ನವದೆಹಲಿ (ಆ.12): ಇಂದು ಸೋಶಿಯಲ್ ಮೀಡಿಯಾ ಎಷ್ಟು ಜನಪ್ರಿಯವಾಗಿದೆ ಎಂದರೆ, ರಾಜಕೀಯ ವಾಗ್ದಾಳಿಗಳೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಸರ್ಕಾರದ ಬಗ್ಗೆ ರಚನಾತ್ಮಕ ಟೀಕೆ ಮಾಡೋದಿರಲಿ, ಆರೋಪಗಳನ್ನು ಮಾಡೋದಿರಲಿ ರಾಜಕೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ಆಯ್ಕೆ ಮಾಡಿಕೊಳ್ಳುವ ಮೊದಲ ವಿಧಾನ ಸೋಶಿಯಲ್ ಮೀಡಿಯಾ ಪೋಸ್ಟ್. ಆದರೆ, ಯಾವ ಖಾತೆಯಿಂದ ಇದು ಪೋಸ್ಟ್ ಆಗುತ್ತದೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಎಷ್ಟು ಫಾಲೋವರ್ಸ್‌ಗಳಿದ್ದಾರೂ, ಅಷ್ಟು ಪ್ರಮಾಣದ ರೀಚ್ ನಿಮಗೆ ಪ್ರತಿ ಪೋಸ್ಟ್‌ನಲ್ಲಿ ಸಿಗುತ್ತದೆ. ಅದರಂತೆ ನಾಯಕರು ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ಗಳಲ್ಲಿ ತಮ್ಮ ಕುರಿತಾದ ವಿಚಾರಗಳನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್‌ನ ಹಲವು ನಾಯಕರು, ಮೋದಿಯ ಮಾತಿಗಿಂತ ಲೈವ್ ಫೀಡ್‌ಗಿಂತ ರಾಹುಲ್ ಮಾತಿನ ಲೈವ್ ಫೀಡ್‌ಗೆ ಹೆಚ್ಚಿನ ಸ್ಪಂದನೆ ವ್ಯಕ್ತವಾಗಿದೆ ಎಂದಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ರಾಹುಲ್‌ಗಿಂತ ತೀರಾ ದೊಡ್ಡ ಪ್ರಮಾಣದ ಫಾಲೋವರ್ಸ್‌ಗಳನ್ನು ನರೇಂದ್ರ ಮೋದಿ ಹೊಂದಿದ್ದಾರೆ.
ಟ್ವಿಟರ್: ಕಳೆದ ಒಂದು ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಗೆ ಬರೋಬ್ಬರಿ 79.9 ಲಕ್ಷ ಎಂಗೇಜ್‌ಮೆಂಟ್‌ಗಳು ದಾಖಲಾಗಿವೆ. ಇನ್ನು ರಾಹುಲ್ ಗಾಂಧಿಯವರ ಟ್ವಿಟರ್ ಪುಟ ಇದೇ ಒಂದು ತಿಂಗಳ ಅವಧಿಯಲ್ಲಿ 23.43 ಲಕ್ಷ ಎಂಗೇಜ್‌ಮೆಂಟ್‌ಗಳು ದಾಖಲಿಸಿದೆ. ಇನ್ನು ಕಳೆದ ಮೂರು ತಿಂಗಳ ಟ್ವಿಟರ್ ಎಂಗೇಜ್‌ಮೆಂಟ್‌ಗಳನ್ನು ಲೆಕ್ಕಹಾಕುವುದಾದರೆ, ಪ್ರಧಾನಿಯವರ ಟ್ವಿಟರ್ ಪೇಜ್‌ನಲ್ಲಿ 2.77 ಕೋಟಿ ಎಂಗೇಜ್‌ಮೆಂಟ್‌ಗಳು ದಾಖಲಾಗಿದ್ದರೆ, ರಾಹುಲ್ ಅವರ ಟ್ವಿಟರ್ ಖಾತೆಗೆ 58.23 ಲಕ್ಷ ಎಂಗೇಜ್‌ಮೆಂಟ್‌ಗಳು ಬಂದಿವೆ. ಹಾಗಾಗಿ ಟ್ವಿಟರ್‌ನಲ್ಲಿ ಪ್ರಧಾನಿ ಅವರ ಪುಟವೇ ಮೇಲುಗೈ ಕಂಡಿದೆ.
ಫೇಸ್‌ಬುಕ್: ಇನ್ನು ಫೇಸ್‌ಬುಕ್‌ನಲ್ಲಿ ಕಳೆದ ಒಂದು ತಿಂಗಳಲ್ಲಿ ಪ್ರಧಾನಿ ಮೋದ ಅವರ ಪೇಜ್‌ಗೆ 57.89 ಲಕ್ಷ ಎಂಗೇಜ್‌ಮೆಂಟ್‌ಗಳು ಬಂದಿವೆ. ಇನ್ನು ರಾಹುಲ್ ಗಾಂಧಿ ಅವರ ಪುಟಕ್ಕೆ 28.38 ಲಕ್ಷ ಎಂಗೇಜ್‌ಮೆಂಟ್‌ಗಳು ಬಂದಿವೆ ಎಂದು ಫೇಸ್‌ಬುಕ್‌ನಲ್ಲಿಯೇ ಮಾಹಿತಿ ಇದೆ. ಇನ್ನು ಈ ವರ್ಷದಲ್ಲಿ ಪ್ರಧಾನಿ ಮೋದಿ ಅವರ ಫೇಸ್‌ಬುಕ್ ಪುಟದಲ್ಲಿ 3.25 ಕೋಟಿ ಎಂಗೇಜ್‌ಮೆಂಟ್‌ಗಳು ಬಂದಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿಗೆ 1.88 ಕೋಟಿ ಸ್ಪಂದನೆಗಳು ಬಂದಿವೆ.
ಯೂಟ್ಯೂಬ್: ಗೂಗಲ್‌ನ ಪ್ರಖ್ಯಾತ ವಿಡಿಯೋ ತಾಣವಾದ ಯೂಟ್ಯೂಬ್‌ನಲ್ಲೂ ಕಳೆದ ಒಂದು ತಿಂಗಳಲ್ಲಿ ಪ್ರಧಾನಿ ಮೋದಿ ಅವರ ವಿಡಿಯೋಗಳಿಗೆ 25.46 ಕೋಟಿ ವೀವ್ಸ್‌ಗಳು ದಾಖಲಾಗಿದೆ. ಇನ್ನು ರಾಹುಲ್ ಗಾಂಧಿ ಅವರ ಪೇಜ್‌ಗೆ 4.82 ಕೋಟಿ ವೀವ್ಸ್‌ಗಳು ಬಂದಿವೆ. ಪ್ರಧಾನಿ ಮೋದಿಯವರ ಯೂಟ್ಯೂಬ್ ಈ ವರ್ಷ ಸರಿಸುಮಾರು 75.79 ಕೋಟಿ ವೀಕ್ಷಣೆಗಳನ್ನು ಗಳಿಸಿದ್ದರೆ, ರಾಹುಲ್ ಗಾಂಧಿಯವರ ಯೂಟ್ಯೂಬ್ ಈ ವರ್ಷ ಸರಿಸುಮಾರು 25.38 ಕೋಟಿ ವೀಕ್ಷಣೆಗಳನ್ನು ಗಳಿಸಿದೆ. ಯೂಟ್ಯೂಬ್‌ನಲ್ಲಿ ಪ್ರಧಾನಿ ಮೋದಿ ಅವರ ಪುಟವೇ ಕಿಂಗ್ ಆಗಿದೆ.
ಪ್ರಧಾನಿಯನ್ನು ನೀರವ್ ಮೋದಿಗೆ ಹೋಲಿಸಿ ವಿಪಕ್ಷದ ಎಡವಟ್ಟು, ಕಡತದಿಂದ ತೆಗೆದುಹಾಕಿದ ಸ್ಪೀಕರ್!
ಇನ್ಸ್‌ಟಾಗ್ರಾಮ್: ಫೇಸ್‌ಬುಕ್ ಮಾಲೀಕತ್ವದ ಇನ್ನೊಂದು ಸೋಶಿಯಲ್ ಮೀಡಿಯಾ ಆಗಿರುವ ಇನ್ಸ್‌ಟಾಗ್ರಾಮ್‌ನಲ್ಲಿ ಇತ್ತಿಚಿನ ವಿಡಿಯೋ ವೀವ್ಸ್‌ಗಳನ್ನು ಗಮನಿಸುವುದಾದರೆ, ರಾಹುಲ್ ಗಾಂಧಿಯವರ ಯಾವ ವಿಡಿಯೋ ಕೂಡ 2 ಮಿಲಿಯನ್‌ಗಿಂತ ಹೆಚ್ಚಿನ ವೀಕ್ಷಣೆ ಪಡೆದಿಲ್ಲ. ಇನ್ನು ಮೋದಿಯವರ ಹೆಚ್ಚಿನ ವಿಡಿಯೋಗಳು ಕನಿಷ್ಠ 10 ಮಿಲಿಯನ್‌ಗಿಂತ ಹೆಚ್ಚಿನ ವೀಕ್ಷಣೆ ದಾಖಲು ಮಾಡಿದೆ.