ಫೆ.13ಕ್ಕೆ ಯುಎಇಗೆ ಪ್ರಧಾನಿ ಭೇಟಿ: ಅಬುಧಾಬಿಯ ಮೊದಲ ಹಿಂದೂ ದೇಗುಲಕ್ಕೆ ಮೋದಿ ಚಾಲನೆ
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಫೆ.14ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೆ.13-14ರಂದು ಯುಎಇಗೆ ಭೇಟಿ ನೀಡಲಿದ್ದಾರೆ.
ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಫೆ.14ರಂದು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೆ.13-14ರಂದು ಯುಎಇಗೆ ಭೇಟಿ ನೀಡಲಿದ್ದಾರೆ. ಯುಎಇನ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆಯು ಅಬುಧಾಬಿಯಲ್ಲಿ ಬೃಹತ್ ಹಿಂದೂ ದೇವಸ್ಥಾನ ನಿರ್ಮಿಸಿದೆ. ದೇಗುಲ 27 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 108 ಅಡಿ ಎತ್ತರ, 262 ಅಡಿ ಉದ್ದ ಮತ್ತು 180 ಅಡಿ ಅಗಲವಿದೆ.
ಸ್ವಾಮಿನಾರಾಯಣ , ಅಕ್ಷರ- ಪುರುಷೋತ್ತಮ, ರಾಧಾ - ಕೃಷ್ಣ, ರಾಮ ಸೀತೆ, ಲಕ್ಷ್ಮಣ, ಹನುಮಂತ, ಶಿವ - ಪಾರ್ವತಿ, ಗಣೇಶ, ಕಾರ್ತಿಕೇಯ, ಪದ್ಮಾವತಿ - ವೆಂಕಟೇಶ್ವರ, ಜಗನ್ನಾಥ ಮತ್ತು ಅಯ್ಯಪ್ಪನ ಮೂರ್ತಿಗಳನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.
Abu Dhabi: ಏನು ಗೊತ್ತಾ ಅಬು ಧಾಬಿ ಮಂದಿರ ರಹಸ್ಯ! ಫೆಬ್ರವರಿ 14ರಂದೇ ಜರುಗಲಿದೆ ಮಂಗಳ ಕಾರ್ಯ!
ಈ ಭೇಟಿ ವೇಳೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶನಿವಾರ ಪ್ರಕಟಿಸಿದೆ. ಇದು 2015ರಿಂದ ಯುಎಇಗೆ ಮೋದಿಯವರ 7ನೇ ಭೇಟಿಯಾಗಿದೆ. ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವವನ್ನು ಇನ್ನಷ್ಟು ಆಳಗೊಳಿಸುವ, ವಿಸ್ತರಿಸುವ ಮತ್ತು ಬಲಪಡಿಸುವ ಮಾರ್ಗಗಳು ಮತ್ತು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಪರಸ್ಪರ ಹಿತಾಸಕ್ತಿ ಬಗ್ಗೆ ಮೋದಿ ಮತ್ತು ಜಾಯೆದ್ ಚರ್ಚೆ ನಡೆಸಲಿದ್ದಾರೆ.
ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ; ಕಬ್ಬಿಣದ ಬಳಕೆ ಇಲ್ಲ!