* ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ* ಕೊರೋನಾ ಎರಡನೇ ಅಲೆ ದಾಳಿ ಇಟ್ಟ ಬಳಿಕ ಎರಡನೇ ಬಾರಿ ಮೋದಿ ಮಾತು* ಕುತೂಹಲ ಮೂಡಿಸಿದೆ ಪ್ರಧಾನ ಮಂತ್ರಿಯ ಭಾಷಣ

ನವದೆಹಲಿ(ಜೂ.07): ಕೊರೋನಾ ಎರಡನೇ ಅಲೆ ದೇಶದಲ್ಲಿ ಸದ್ಯ ಇಳಿಕೆಯಾಗಲಾರಂಭಿಸಿದೆ. ಹೀಗಿರುವಾಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು, ಸೋಮವಾರ ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮೋದಿ ಯಾವ ವಿಚಾರವಾಗಿ ಮಾತನಾಡಲಿದ್ದಾರೆಂಬುವುದೇ ಸದ್ಯದ ಕುತೂಹಲವಾಗಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರಕ್ಕೆ ಅಪಾರ ಸಾವು, ನೋವುಗಳಾಗಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಹುತೇಕ ರಾಜ್ಯಗಳು ಕಳೆದ ಕೆಲ ವಾರಗಳಿಂದ ಕಠಿಣ ಕ್ರಮ ಜಾರಿಗೊಳಿಸಿದ್ದವು. ಸದ್ಯ ದೇಶಾದ್ಯಂತ ಕೊರೋನಾ ಅಬ್ಬರ ಕಡಿಮೆಯಾಗಲಾರೆಂಭಿಸಿದೆ. ಅಲ್ಲದೇ ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದೆ. ಹೀಗಿರುವಾಘ ಮೋದಿ ಮಾತು ಬಹಳಷ್ಟು ಮಹತ್ವ ಪಡೆಯಲಿದೆ. 

Scroll to load tweet…

ಇನ್ನು ರೋನಾ ಎರಡನೇ ಅಲೆ ದೇಶದಲ್ಲಿ ಅಬ್ಬರ ಆರಂಭಿಸಿದ ಬಳಿಕ ಪ್ರಧಾನ ಮಂತ್ರಿ ಮೋದಿ ಜನತೆಯನ್ನುದ್ದೇಶಿಸಿ ಮಾತನಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಏಪ್ರಿಲ್ 20ರಂದು ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಅಂದು ಲಾಕ್‌ಡೌನ್ ಬಗ್ಗೆ ಮಾತನಾಡಿದ್ದ ಅವರು, ಈ ಬಾರಿ ಕೇಂದ್ರ ಯಾವುದೇ ನಿರ್ಬಂಧ ಹೇರುವುದಿಲ್ಲ. ಆಯಾ ರಾಜ್ಯಗಳು ನಿಯಮ ಜಾರಿಗೊಳಿಸಲಿವೆ ಎಂದಿದ್ದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona