ಮೇಡ್ ಇನ್ ಇಂಡಿಯಾ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಸೆ.2ಕ್ಕೆ ಸೇನೆಗೆ ಸೇರ್ಪಡೆ!
ಸಂಪೂರ್ಣ ಸ್ವದೇಶಿಯಾಗಿ ನಿರ್ಮಾಣವಾಗಿರುವ ವಿಮಾನವಾಹಕ ಯುದ್ಧನೌಕೆ ವಿಕ್ರಾಂತ್ ಅನ್ನು ಸೆಪ್ಟೆಂಬರ್ 2 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕೊಚ್ಚಿಯಲ್ಲಿ ಸೇನೆಗೆ ಸೇರ್ಪಡೆ ಮಾಡಲಿದ್ದಾರೆ. ಆ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ವಿಶ್ವಕ್ಕೆ ಈ ಮೂಲಕ ಭಾರತ ಸಾರಲಿದೆ.
ನವದೆಹಲಿ (ಆ.24): ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2 ರಂದು ಕೊಚ್ಚಿಯಲ್ಲಿ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಸಮರನೌಕೆ 'ವಿಕ್ರಾಂತ್' ಅನ್ನು ಸೇನೆಗೆ ಸೇರ್ಪಡೆ ಮಾಡಲಿದ್ದಾರೆ.ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆ ಈ ಮೂಲಕ ಕಾರ್ಯಾರಂಭ ಮಾಡಲು ಸಿದ್ಧವಾಗಿದೆ, ಈಗಾಗಲೇ ವಿಕ್ರಾಂತ್ ಬಗ್ಗೆ ಅಧಿಕಾರಿಗಳು ಹಾಗೂ ಭಾರತದ ನೌಕಾಪಡೆ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ. ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ ಮತ್ತು ಇದು ನೌಕಾಪಡೆ ಮತ್ತು ದೇಶಕ್ಕೆ ಒಂದು ಹೆಗ್ಗುರುತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ವಿಕ್ರಾಂತ್ ಆತ್ಮನಿರ್ಭರ್ ಭಾರತ್‌ನ ನಿಜವಾದ ಅಭಿವ್ಯಕ್ತಿಯಾಗಿದೆ, ಇದು ಶೇಕಡಾ 76 ರಷ್ಟು ಸ್ವದೇಶಿ ಘಟಕಗಳೊಂದಿಗೆ ನಿರ್ಮಿಸಲ್ಪಟ್ಟಿದೆ" ಎಂದು ದಕ್ಷಿಣ ನೌಕಾ ಕಮಾಂಡರ್ ವೈಸ್ ಅಡ್ಮಿರಲ್ ಎಂಎ ಹಂಪಿಹೊಳಿ ಅವರು ದೇಶದಲ್ಲಿನ ಅತಿದೊಡ್ಡ ಮೇಕ್-ಇನ್-ಇಂಡಿಯಾ ಬಗ್ಗೆ ಮಾತನಾಡುವ ವೇಳೆ ಹೇಳಿದ್ದಾರೆ. ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಯ ನೇವಲ್ ಡಿಸೈನ್ ಡೈರೆಕ್ಟರೇಟ್ (ಡಿಎನ್‌ಡಿ) ವಿನ್ಯಾಸಗೊಳಿಸಿದೆ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ಶಿಪ್‌ಯಾರ್ಡ್‌ನ ಸಿಎಸ್‌ಎಲ್ ನಿರ್ಮಿಸಿದೆ. 1971ರಲ್ಲಿ ಇಂಡೋ-ಪಾಕ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇದೇ ಹೆಸರಿನ ವಿಮಾನವಾಹಕ ಯುದ್ಧನೌಕೆಯ ಹೆಸರನ್ನೇ ಇದಕ್ಕೆ ಇಡಲಾಗಿದೆ.
ಮೇಡ್ ಇನ್ ಇಂಡಿಯಾ ಐಎನ್‌ಎಸ್ ವಿಕ್ರಾಂತ್ ಬಗ್ಗೆ ಇನ್ನಷ್ಟು ಮಾಹಿತಿ..
- ವಿಕ್ರಾಂತ್ ಅನ್ನು ಭಾರತೀಯ ನೌಕಾಪಡೆಯ ಆಂತರಿಕ ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ (ಡಿಎನ್‌ಡಿ) ವಿನ್ಯಾಸಗೊಳಿಸಿದೆ ಮತ್ತು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿದೆ. ಇದು ಬಿಇಎಲ್, ಬಿಎಚ್‌ಇಎಲ್, ಜಿಆರ್‌ಎಸ್‌ಇ, ಕೆಲ್ಟ್ರಾನ್, ಲಾರ್ಸೆನ್ ಆಂಟ್ ಟೌಬ್ರೋ, ವಾರ್ಟ್‌ಸಿಲಾ ಇಂಡಿಯಾ ಇತ್ಯಾದಿ ಹಾಗೂ 100ಕ್ಕೂ ಹೆಚ್ಚು ಎಂಎಸ್‌ಎಂಇ ಒಳಗೊಂಡಿರುವ ಪ್ರಮುಖ ಭಾರತೀಯ ಕೈಗಾರಿಕಾ ಘಟಕಗಳಿಂದ ನಿರ್ಮಿಸಲಾದ ಬೃಹತ್ ಸ್ಥಳೀಯ ಘಟಕವನ್ನು ಸಹ ಹೊಂದಿದೆ.
- ಆತ್ಮನಿರ್ಭರ ಭಾರತ್ ನ ದ್ಯೋತಕ, ಐಎನ್‌ಎಸ್ ವಿಕ್ರಾಂತ್ ಅನ್ನು 76 ಪ್ರತಿಶತ ಸ್ವದೇಶಿ ಘಟಕಗಳೊಂದಿಗೆ ನಿರ್ಮಾಣ ಮಾಡಲಾಗಿದೆ. ವಿಕ್ರಾಂತ್ ಸ್ವಯಂಚಾಲಿತ ಗ್ಯಾಲಿಯನ್ನು ಹೊಂದಿದ್ದು, 1,700 ಸಮುದ್ರ ಯೋಧರಿಗೆ ಭೋಜನದ ವ್ಯವಸ್ಥೆ ಹೊಂದಿರುವ, 5,000 ಊಟಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಡಗಿನ ಅಡುಗೆಮನೆಯಲ್ಲಿ ಸುಮಾರು 10,000 ಚಪಾತಿ ಅಥವಾ ರೊಟ್ಟಿಗಳನ್ನು ತಯಾರಿಸಬಹುದಾಗಿದೆ.
-ವಿಕ್ರಾಂತ್ 100 ಟನ್ ರೇಷನ್ ಅನ್ನು ಸಂಗ್ರಹಿಸಿಡಬಹುದು ಮತ್ತು 50 ಅಡುಗೆಯವರನ್ನು ಹೊಂದಿದ್ದು, ಅವರು 400 ಕೆಜಿ ಅಕ್ಕಿ, ದಾಲ್, ಸಾಂಬಾರ್ ಮತ್ತು ಬ್ರೆಡ್‌ಗಳನ್ನು ಬೇಯಿಸಬಹುದು.
- ವಿಕ್ರಾಂತ್ ಸುಮಾರು 30 ವಿಮಾನಗಳ ಮಿಶ್ರಣವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಮಿಗ್ 29-ಕೆ ಯುದ್ಧ ವಿಮಾನವನ್ನು ವಾಯು-ವಿರೋಧಿ, ಮೇಲ್ಮೈ-ವಿರೋಧಿ ಮತ್ತು ಭೂ ದಾಳಿಯ ಪಾತ್ರಗಳಲ್ಲಿ ಸಮರ್ಥವಾಗಿ ತನ್ನ ನೆಲೆಯಿಂದ ಹಾರಿಸಬಲ್ಲುದು. ಆರಂಭಿಕ ವಾಯು ಎಚ್ಚರಿಕೆಯ ಹೆಲಿಕಾಪ್ಟರ್ ಆದ ಕಮೋವ್ 31 ಅನ್ನು ಕೂಡ ಕಾರ್ಯಾರಂಭಿಸುವ ವ್ಯವಸ್ಥೆ ಹೊಂದಿದೆ. ಅದರೊಂದಿಗೆ ಇತ್ತೀಚೆಗೆ ಸೇರ್ಪಡೆಗೊಂಡ ಆದರೆ ಇನ್ನೂ ಕಾರ್ಯಾರಂಭ ಮಾಡದ ಸ್ಥಳೀಯ ಎಎಲ್‌ಎಚ್ ಕೂಡ ಆಗಿರುವ ಬಹು-ಪಾತ್ರದ ಹೆಲಿಕಾಪ್ಟರ್ MH-60R ಅನ್ನು ಹಾರಿಸಬಲ್ಲುದು. ಇದು ಸುಮಾರು 45,000 ಟನ್‌ಗಳಷಟು ತೂಕವನ್ನು ಸ್ಥಳಾಂತರ ಮಾಡಬಲ್ಲುದು. ಇದು ಖಂಡಿತವಾಗಿಯೂ ಭಾರತೀಯ ನೌಕಾಪಡೆಯಲ್ಲಿರುವ ಅತಿದೊಡ್ಡ ಯುದ್ಧನೌಕೆಯಾಗಿದೆ.
ವಿಕ್ರಮಾದಿತ್ಯ ಯುದ್ಧನೌಕೆಯಲ್ಲಿ ಬೆಂಕಿ; ಕೂಡಲೇ ನಂದಿಸಿದ ಸಿಬ್ಬಂದಿ
- 262 ಮೀಟರ್ ಉದ್ದದ ಭಾರತೀಯ ವಿಮಾನವಾಹಕ ನೌಕೆಯು ಸುಮಾರು 45,000 ಟನ್‌ಗಳ ತೂಕವನ್ನು ಸಾಗಿಸಬಲ್ಲ ಸಾಮರ್ಥ್ಯ ಹೊಂದಿದೆ.
ಹಿಟ್ ಫರ್ಸ್ಟ್ ಹಿಟ್ ಹಾರ್ಡ್: ಪರ್ಫೆಕ್ಟ್ ಆಗಿ ಗುರಿ ಮುಟ್ಟಿದ ಭಾರತೀಯ ನೌಕಾಸೇನೆಯ ಕ್ಷಿಪಣಿ!
- STOBAR (ಶಾರ್ಟ್ ಟೇಕ್-ಆಫ್ ಆದರೆ ಅರೆಸ್ಟೆಡ್ ಲ್ಯಾಂಡಿಂಗ್) ಸಾಮರ್ಥ್ಯದೊಂದಿಗೆ, IAC ಯು ಕಾಂಪೊನೆಂಟ್ ಫಿಕ್ಸೆಡ್ ವಿಂಗ್ ಏರ್‌ಕ್ರಾಫ್ಟ್‌ನ ಮರುಪಡೆಯುವಿಕೆಗಾಗಿ 'ಅರೆಸ್ಟರ್ ವೈರ್‌ಗಳನ್ನು' ಮತ್ತು ಅದೇ ಉಡಾವಣೆಗಾಗಿ ಸ್ಕೀ-ಜಂಪ್ ಕಾರ್ಯವಿಧಾನವನ್ನು ಹೊಂದಿದೆ.