Asianet Suvarna News Asianet Suvarna News

PM On Rahul Gandhi : ಸದನದಲ್ಲಿ ಇರೋದಿಲ್ಲ, ಹೇಳಿದನ್ನ ಕೇಳಿಸಿಕೊಳ್ಳೋದೂ ಇಲ್ಲ!

ರಾಹುಲ್ ಗಾಂಧಿ ಬಗ್ಗೆ ಪ್ರಧಾನಿ ಮೋದಿ ಮಾತು
ಸದನದಲ್ಲಿ ಕೂರದ ವ್ಯಕ್ತಿಯ ಮಾತಿಗೆ ಪ್ರತಿಕ್ರಿಯೆ ನೀಡುವುದಿಲ್ಲ
ವಿರೋಧ ಪಕ್ಷದವರ ಎಲ್ಲಾ ಪ್ರಶ್ನೆಗೆ ಸರ್ಕಾರ ಸ್ಪಷ್ಟವಾಗಿ ಸದನದಲ್ಲಿ ಉತ್ತರ ನೀಡಿದೆ

Prime Minister Narendra Modi on Rahul Gandh he cannot reply person who does not listen and does not sit in the House san
Author
Bengaluru, First Published Feb 9, 2022, 9:44 PM IST

ನವದೆಹಲಿ (ಫೆ. 9): ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ವಿರುದ್ಧ ವ್ಯಂಗ್ಯವಾಡಿದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು, "ಸದನದಲ್ಲಿ ಕುಳಿತುಕೊಳ್ಳದ, ಹೇಳಿದನ್ನು ಕೇಳಿಸಿಕೊಳ್ಳದ" ವ್ಯಕ್ತಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. ಪಂಚರಾಜ್ಯಗಳಲ್ಲಿ (Five State Election) ಮೊದಲ ಹಂತದ ಚುನಾವಣೆ ನಡೆಯುವ ಒಂದು ದಿನದ ಮುನ್ನ ಸುದ್ದಿಸಂಸ್ಥೆಯ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ ಪ್ರತಿಪಕ್ಷಗಳು ಎತ್ತಿರುವ ಎಲ್ಲಾ ಪ್ರಶ್ನೆಗಳಿಗೆ ವಿವಿಧ ಸಚಿವಾಲಯಗಳು ವಿವರವಾದ ಉತ್ತರಗಳನ್ನು ನೀಡಿವೆ ಎಂದು ಹೇಳಿದರು.

ನಿರುದ್ಯೋಗ (unemployment ) ಮತ್ತು ಭಾರತ-ಚೀನಾ ಸಮಸ್ಯೆಯ (India-China issue) ಕುರಿತು ರಾಹುಲ್ ಗಾಂಧಿಯವರ ಪ್ರಶ್ನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, "ನಾನು ಪ್ರತಿಯೊಂದು ವಿಷಯದ ಬಗ್ಗೆ ಸತ್ಯಗಳನ್ನು ನೀಡಿದ್ದೇನೆ ಮತ್ತು ಪ್ರತಿಯೊಂದು ವಿಷಯದ ಬಗ್ಗೆ ಸತ್ಯದ ಆಧಾರದ ಮೇಲೆ ಮಾತನಾಡಿದ್ದೇನೆ. ಕೆಲವು ವಿಷಯಗಳಲ್ಲಿ ನಮ್ಮ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯವು ಉತ್ತರ ನೀಡಿದೆ. ವಿವರವಾದ ಉತ್ತರಗಳು ಮತ್ತು ಅಗತ್ಯವಿರುವಲ್ಲೆಲ್ಲಾ ನಾನು ಸಹ ಮಾತನಾಡಿದ್ದೇನೆ. ಸದನದಲ್ಲಿ ಕುಳಿದುಕೊಳ್ಳದ ಹಾಗೂ ಹೇಳಿದನ್ನು ಸರಿಯಾಗಿ ಕೇಳಿಸಿಕೊಳ್ಳದ ವ್ಯಕ್ತಿಗೆ ನಾನು ಹೇಗೆ ಉತ್ತರ ನೀಡಲಿ? ಎಂದು ಮೋದಿ ಪ್ರಶ್ನೆ ಮಾಡಿದ್ದಾರೆ.

ತಮ್ಮ ಸರ್ಕಾರ ಮಾತುಕತೆಯಲ್ಲಿ ನಂಬಿಕೆ ಇಟ್ಟಿದ್ದು, ಯಾರ ಮೇಲೂ ಮಾತಿನ ದಾಳಿ  ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. "ನಾವು ಯಾರ ಮೇಲೂ ದಾಳಿ ಮಾಡುವುದಿಲ್ಲ, ಬದಲಿಗೆ ಮಾತುಕತೆ  ನಡೆಸುವುದನ್ನು ನಾವು ನಂಬುತ್ತೇವೆ. ಕೆಲವೊಮ್ಮೆ, ಚರ್ಚೆಗಳು (ವಾದ-ವಿವಾದ), ಸಂಸತ್ತಿನಲ್ಲಿ ಅಡಚಣೆಗಳು (ಟೋಕಾ-ಟಕಿ) ನಾನು ಇದನ್ನು ಸ್ವಾಗತಿಸುತ್ತೇನೆ ಎಂದು ಪಿಎಂ ಮೋದಿ ಹೇಳಿದರು.
 


ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು ನಿರುದ್ಯೋಗ, ಭಾರತ-ಚೀನಾ ಗಡಿ ವಿವಾದದಂತಹ ವಿಷಯಗಳ ಬಗ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿಯವರ ಹೇಳಿಕೆಗಳ ನಂತರ, ಪ್ರಧಾನಿ ಮೋದಿ ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು ಮತ್ತು ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಸರ್ಕಾರದ ನೀತಿಗಳನ್ನು ಪ್ರಸ್ತಾಪ ಮಾಡಿ ಟೀಕೆ ಮಾಡಿದ್ದರು.
ಇದಕ್ಕೂ ಮುನ್ನ, ಸಂಸತ್ತಿನಲ್ಲಿ ಭಾಷಣ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಬಿಜೆಪಿ ನೇತೃತ್ವದ ಸರ್ಕಾರವು "ಕಾಂಗ್ರೆಸ್‌ಗೆ ಹೆದರುತ್ತಿದೆ" ಎಂದು ಹೇಳಿದರು. ಪ್ರಧಾನಿಯವರ ‘ಕಾಂಗ್ರೆಸ್ ಭಯ’ ಸಂಸತ್ತಿನಲ್ಲಿ ಬಿಂಬಿತವಾಗಿದ್ದು, ಪಕ್ಷವನ್ನು ಟೀಕಿಸುವತ್ತ ಗಮನ ಹರಿಸಿದ್ದಾರೆಯೇ ಹೊರತು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಆರೋಪಿಸಿದ್ದರು.

PM Modi on Congress ನಗರ ನಕ್ಸಲರ ಕಪಿಮುಷ್ಟಿಯಲ್ಲಿ ಕಾಂಗ್ರೆಸ್‌, ಸತತ 2ನೆ ದಿನವೂ ಮೋದಿ ವಾಗ್ದಾಳಿ!
ಫೆಬ್ರವರಿ 2 ರಂದು ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪರವಾಗಿ ಚರ್ಚೆಯನ್ನು ಪ್ರಾರಂಭಿಸಿದ ಮಾಜಿ ಕಾಂಗ್ರೆಸ್ ಅಧ್ಯಕ್ಷ ನಿರುದ್ಯೋಗ, ಹಣದುಬ್ಬರ ಮತ್ತು ಭಾರತ-ಚೀನಾ ಗಡಿ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರನ್ನು ಗುರಿಯಾಗಿ ಟೀಕೆ ಮಾಡಿದ್ದರು. ಫೆಬ್ರವರಿ 7 ರಂದು ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ನೀತಿಯು "ಒಡೆದು ಆಳುವುದು" ಮತ್ತು ಅದು "ತುಕ್ಡೆ ತುಕ್ಡೆ" ಗ್ಯಾಂಗ್‌ನ ನಾಯಕರಾಗಿದ್ದಾರೆ ಎಂದು ಹೇಳಿದ್ದರು. ಒಂದು ದಿನದ ನಂತರ ಫೆಬ್ರವರಿ 8 ರಂದು ರಾಜ್ಯಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು ಕಾಂಗ್ರೆಸ್ ಚಿಂತನೆಯನ್ನು 'ನಗರ ನಕ್ಸಲರು' ಹೈಜಾಕ್ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಇಲ್ಲದಿದ್ದರೆ ತುರ್ತುಪರಿಸ್ಥಿತಿ, ಜಾತಿ ರಾಜಕಾರಣ ಇರುತ್ತಿರಲಿಲ್ಲ, ಸಿಖ್ಖರ ಕಗ್ಗೊಲೆಯಾಗುತ್ತಿರಲಿಲ್ಲ ಮತ್ತು ಕಾಶ್ಮೀರಿ ಪಂಡಿತರ ಹತ್ಯೆಯೂ ಆಗುತ್ತಿರಲಿಲ್ಲ ಎಂದು ಹೇಳುವ ಮೂಲಕ ವಾಗ್ದಾಳಿ ಮಾಡಿದ್ದರು.

Follow Us:
Download App:
  • android
  • ios