ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೋತವರಿಗೆ ಹುರಿದುಂಬಿಸಿ,ಗೆದ್ದವರಿಗೆ ಬೆನ್ನು ತಟ್ಟಿದ ಪಿಎಂ ಮೋದಿ!
ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿದ್ದ ಭಾರತದ ಅಥ್ಲೀಟ್‌ಗಳೊಂದಿಗೆ ಸಂವಾದ ನಡೆಸಿದ್ದರ ವಿವರ ಪ್ರಕಟವಾಗಿದೆ. ಗೆದ್ದವರಿಗೆ ಬೆನ್ನುತಟ್ಟಿ ಸೋತವರಿಗೆ ಮೋದಿ ಹುರಿದುಂಬಿಸಿದ್ದಾರೆ.
ನವದೆಹಲಿ (ಆ.16) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಿದ್ದ ಭಾರತೀಯ ಅಥ್ಲೀಟ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಡೆಸಿದ್ದ ಸಂವಾದ ಪೂರ್ಣ ಪಾಠ ಪ್ರಕಟವಾಗಿದೆ. ಶುಕ್ರವಾರ ಇದರ ಮಾಹಿತಿಯನ್ನು ಸ್ವತಃ ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಸಂವಾದದಲ್ಲಿ ಮೋದಿ ಸೋತವರಿಗೆ ಹುರಿದುಂಬಿಸಿ,ಗೆದ್ದವರಿಗೆ ಬೆನ್ನು ತಟ್ಟಿದ್ದಾರೆ. ಪ್ರತಿ ಆಟಗಾರರನ್ನೂ ಮೋದಿ ಮಾತನಾಡಿಸಿ ಅವರ ಭವಿಷ್ಯದ ಬದುಕಿಗೆ ಪ್ರೋತ್ಸಾಹ ತುಂಬಿದ್ದಾರೆ. ಅದರೊಂದಿಗೆ ನಗೆಚಟಾಕಿಯನ್ನೂ ಹಾರಿಸಿದ್ದು, ಅಥ್ಲೀಟ್‌ಗಳ ಸಂಭ್ರಮಕ್ಕೆ ಕಾರಣವಾಗಿತ್ತು.
ಲಕ್ಷ್ಯ ಸೆನ್ ಜೊತೆ ಮೋದಿ ಮಾತು: ನಾನು ಮೊದಲ ಬಾರಿಗೆ ಇವರನ್ನೂ ನೋಡಿದಾಗ ಬಹಳ ಚಿಕ್ಕವರಾಗಿದ್ದರು. ಈಗ ಇವರು ಬೆಳೆದ ದೊಡ್ಡವರಾಗಿದ್ದಾರೆ..' ಎಂದು ಮೋದಿ ತಮಾಷೆ ಮಾಡಿದರೆ, ಅದಕ್ಕೆ ಲಕ್ಷ್ಯಸೆನ್ ತಮ್ಮ ಪ್ಯಾರಿಸ್ ಅನುಭವಗಳನ್ನು ಹಂಚಿಕೊಂಡರು. ಟೂರ್ನಿಯಲ್ಲಿ ಅನೇಕ ದೊಡ್ಡ ಮ್ಯಾಚ್ಗಳು ಮೊದಲು ಶುರುವಾಗಿದ್ದವು. ನನ್ನ ಫೋಕಸ್ ಮ್ಯಾಚ್ಗಳ ಕಡೆ ಇರುತ್ತಿತ್ತು ಫ್ರೀ ಸಮಯದಲ್ಲಿ ಊಟಕ್ಕೆ ಹೋಗುತ್ತಿದ್ದೆ, ಕಾಫಿಗೆ ಹೋಗುತ್ತಿದ್ದೆ. ಡೈನಿಂಗ್ ರೂಮ್ ಹಂಚಿಕೊಳ್ಳುತ್ತಿದ್ದೆ. ಆ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಯ್ತು. ಇದು ನನ್ನ ಮೊದಲ ಒಲಿಂಪಿಕ್ ಆಗಿತ್ತು. ಇದರ ಬಗ್ಗೆ ನನಗೆ ಅನುಭವ ಇರಲಿಲ್ಲ. ಪ್ಯಾರಿಸ್‌ನ ಕಾಫಿ ಚೆನ್ನಾಗಿತ್ತು. ಆದರೆ, ಕೋರ್ಟ್‌ನಲ್ಲಿ ಸಿಕ್ಕಾಪಟ್ಟೆ ಗದ್ದಲ ಇರುತ್ತಿದ್ದವು. ಮೊದಲು ಎರಡು ಮೂರು ಮ್ಯಾಚ್ಗಳ ವೇಳೆ ಭಯವಾಗಿತ್ತು. ಬಳಿಕ ಪಂದ್ಯಗಳ ಸ್ಥಿತಿಗೆ ಹೊಂದಿಕೊಂಡು ಉತ್ತಮ ಆಟ ಬರಲು ಶುರುವಾಯ್ತು ಎಂದು ಹೇಳಿದರು.
ಬಳಿಕ ಹಾಕಿ ತಂಡದ ಗೋಲ್‌ಕೀಪರ್ ಆಗಿದ್ದ ಅನುಭವಿ ಪಿಆರ್ ಶ್ರೀಜೇಶ್ ಅವರನ್ನು ಮೋದಿ ಮಾತನಾಡಿಸಿದರು. ಶ್ರೀಜೇಶ್ ಅವರೇ ನೀವು ನಿವೃತ್ತಿ ನಿರ್ಧಾರವನ್ನು ನಿಖರವಾಗಿ ಯಾವಾಗ ತೆಗೆದುಕೊಂಡಿದ್ದೀರಿ? ಎಂದು ಕೇಳಿದರು. ನಾನು ಕೆಲವು ವರ್ಷಗಳಿಂದ ಅದರ ಬಗ್ಗೆ ಯೋಚಿಸುತ್ತಿದ್ದೆ. ನನ್ನ ತಂಡದ ಸದಸ್ಯರು, ನನ್ನನ್ನು ಯಾವಾಗ ಹೊರಡುತ್ತೀರಿ ಎಂದು ಕೀಟಲೆ ಮಾಡುತ್ತಿದ್ದರು. ಸರ್ ನಾನು ಮೊದಲ ಬಾರಿಗೆ 2002ರಲ್ಲಿ ಕ್ಯಾಂಪ್ಗೆ ಸೇರಿದೆ. 2004ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಜ್ಯೂನಿಯರ್ ತಂಡಕ್ಕೆ ಆಡಿದೆ. ನಾನು 20 ವರ್ಷ ದೇಶಕ್ಕೆ ಆಡಿದ್ದೇನೆ. ಏನನ್ನಾದರೂ ಸಾಧಿಸಿದ ನಂತರ ನಿವೃತ್ತಿ ಹೊಂದಲು ಬಯಸಿದ್ದೆ. ಒಲಿಂಪಿಕ್ಸ್ ವಿಶ್ವದ ಎಲ್ಲಾ ಕ್ರೀಡಾಪಟುಗಳು ಆಚರಿಸುವ ಶ್ರೇಷ್ಠ ವೇದಿಕೆ. ನಾನು ಅವಾಗ, ಇದಕ್ಕಿಂತ ಉತ್ತಮ ಅವಕಾಶ ನನಗೆ ಸಿಗುವುದಿಲ್ಲಎಂದು ನಿರ್ಧರಿಸಿದೆ' ಎಂದು ಹೇಳಿದರು.
ನಿಮ್ಮ ತಂಡ ಖಂಡಿತವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತದೆ. ಅಲ್ಲದೆ, ನಿಮ್ಮ ತಂಡ ನಿಮಗೆ ಭವ್ಯ ವಿದಾಯವನ್ನು ಕೊಟ್ಟಿದೆ ಎಂದು ಮೋದಿ ಹೇಳಿದ್ದಕ್ಕೆ, 'ಸರ್ ನಾವು ಸೆಮಿಫೈನಲ್‌ನಲ್ಲಿ ಸೋತಾಗ ತಂಡವು ಸ್ವಲ್ಪಮಟ್ಟಿಗೆ ಹಿನ್ನಡೆ ಕಂಡಿತು. ಆದರೆ ನಮ್ಮ ತಂಡ ಫೈನಲ್ ಹೋಗುವುದಕ್ಕೆ ಅರ್ಹವಾಗಿತ್ತು. ನಾವು ಸೆಮಿಫೈನಲ್‌ನಲ್ಲಿ ಸೋತಾಗ ತಂಡ ಒಟ್ಟಿಗೆ ಬಂದು ಶ್ರೀಜೇಶ್ ಭಾಯ್‌ಗಾಗಿ ನಾವು ಈ ಕಂಚು ಗೆಲ್ಲಬೇಕು ಎಂದು ಹೇಳಿದರು. ನಾನು ಗರ್ವದಿಂದ ಹೇಳುತ್ತೇನೆ ಅನೇಕ ವರ್ಷ ದೇಶಕ್ಕೆ ಆಡಿದ್ದೇನೆ. ನನ್ನ ವೃತ್ತಿ ಜೀವನಕ್ಕೆ ಮಾತ್ರವಲ್ಲದೇ ನನ್ನ ತಂಡಕ್ಕೂ ವಿದಾಯ ಹೇಳಲು ಆ ವೇದಿಕೆಯನ್ನು ಬಳಸಿಕೊಂಡೆ ಎಂದರು.
ಬಳಿಕ ರೆಸ್ಲರ್ ಅಮನ್ ಸೆಹ್ರಾವತ್ ಅವರನ್ನು ಮಾತನಾಡಿಸಿದ ಮೋದಿ, ‘ಏನ್ ಭಾಯ್.. ನೀವು ಯಂಗೆಸ್ಟ್ ಇದ್ದೀರಿ. ಎಲ್ಲರೂ ನಿಮಗೆ ಹೇಳ್ತಿದ್ರಾ. ಅದನ್ನ ಮಾಡಬೇಡಿ, ಇದನ್ನ ಮಾಡಬೇಡಿ ಅಂತಾ. ನೀವೇನಾದ್ರೈ ಸ್ವಲ್ಪ ಹೆದರುತ್ತಿದ್ದರಾ ಎಂದು ಕೇಳಿದರು. ‘ಈ ವಯಸ್ಸಿನಲ್ಲಿ ನಾನು ಸಾಕಷ್ಟು ನೋಡಿದ್ದೇನೆ. 10ನೇ ವಯಸ್ಸಿನಲ್ಲಿಯೇ ತಂದೆ-ತಾಯಿ ಬಿಟ್ಟು ಹೋದರು. ಆದ್ರೆ ಈ ಒಲಂಪಿಕ್ನಲ್ಲಿ ಪದಕ ಗೆಲ್ಲುವುದು ಕನಸಾಗಿತ್ತು. ದೇಶಕ್ಕೆ ಒಲಂಪಿಕ್ ಪದಕ ನೀಡುವುದು ನನ್ನ ಕನಸಾಗಿತ್ತು. ಇದನ್ನೇ ಯೋಚಿಸಿಕೊಂಡು ನಾನು ನಿತ್ಯ ಪ್ರಾಕ್ಟಿಸ್ ಮಾಡ್ತಿದೆ. ನಾನೂ ಪದಕ ಗೆಲ್ಲಲು ಕುಸ್ತಿ ಫೆಡರೇಷನ್ ಯೋಗದಾನ ಹೆಚ್ಚಿದೆ' ಎಂದು ಹೇಳಿದರು.
ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಎಲ್ಲಾ ಅಥ್ಲೀಟ್ಸ್ ಚಾಂಪಿಯನ್: ಪ್ರಧಾನಿ ಮೋದಿ ಬಣ್ಣನೆ
ನಿಮ್ಮ ಮೂಡ್ ಹೇಗಿದೆ ಈಗ ಎಂದು ಮೋದಿ ಕೇಳಿದಾಗ, 'ಬಹಳ ಚೆನ್ನಾಗಿದೆ..' ಎಂದರು. ಮನೆಗೆ ಹೋಗಿ ನಿನಗೆ ಏನ್ ಬೇಕು, ಅದನ್ನ ತಿಂದ್ರಾ ಹೇಗೆ..? ಎನ್ನುವ ಪ್ರಶ್ನೆಗೆ, ಈವರೆಗೂ ನಾನೂ ಮನೆಗೆ ಹೋಗಿಲ್ಲ ಸಾರ್' ಎಂದಾಗ ಸ್ವತಃ ಮೋದಿ ಕೂಡ ಅಚ್ಚರಿಪಟ್ಟರು.
ಒಲಿಂಪಿಕ್ಸ್ ಆಯೋಜನೆ ಭಾರತದ ಕನಸು: ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಾರ
ಬಳಿಕ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮಲ್ಲಿ ಯಾರು ಸೋತು ಬಂದಿದ್ದೀರಿ.. ಕೈ ಎತ್ತಿ. ಮೊದಲು ಸೋತು ಭಾರತಕ್ಕೆ ಬಂದಿದ್ದೀರಿ ಎಂಬ ಆಲೋಚನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ. ನೀವು ದೇಶದ ಧ್ವಜವನ್ನು ಹಾರಿಸಿ ಹಿಂತಿರುಗಿದ್ದೀರಿ. ನೀವು ಅಮೂಲ್ಯವಾದ ಅನುಭವವನ್ನೂ ಗಳಿಸಿದ್ದೀರಿ. ಕ್ರೀಡೆ ಒಂದೇ ಕ್ಷೇತ್ರ ಸ್ನೇಹಿತರೆ, ಅಲ್ಲಿ ಯಾರೂ ನಿಜವಾಗಿಯೂ ಸೋಲುವುದಿಲ್ಲ. ಅಲ್ಲಿ ಎಲ್ಲರೂ ಕಲಿಯುತ್ತಾರೆ. ಒಳ್ಳೆಯದು ಸಂಭವಿಸಿದೆ.. ನಾನು ಕೈ ಎತ್ತಿ ಅಂದಾಗ ಯಾರು ಎತ್ತಲಿಲ್ಲ. ಶೇ. 80 ರಷ್ಟು ನೀವು ಕೈಯನ್ನು ಮೇಲೆ ಎತ್ತಲ್ಲಿಲ್ಲ. ಅವರು ನಮ್ಮ ಮಾತುಗಳನ್ನೂ ಅರ್ಥ ಮಾಡಿಕೊಂಡಿದ್ದಾರೆ. ಯಾರು ಕೈ ಎತ್ತಿದ್ದಾರೆ.. ನಮ್ರತೆ ಕಾರಣಕ್ಕೆ ಎತ್ತಿದ್ದಾರೆ. ವಿವೇಕದ ಕಾರಣಕ್ಕೆ ಕೈ ಎತ್ತಿದ್ದಾರೆ. ನಾನೂ ಅವರಿಗೆ ಆಗ್ರಹ ಮಾಡ್ತೀನಿ. ಇದು ಯೋಚನೆ ಅಲ್ಲ.. ನಾವು ಹಿಂದಿದ್ದೇವೆ.. ಆದ್ರೆ ಬಹಳ ಕಲಿತು ಬಂದಿದ್ದೇವೆ. ನಮ್ಮ ಮಾತುಗಳಗೆ ನಿಮ್ಮ ಒಪ್ಪಿಗೆ ಇದೆಯಾ..?. ನೀವು ಮೈದಾನದಲ್ಲಿ ಆಡಿದ್ದನ್ನ ಜಗತ್ತು ನೋಡಿದೆ. ಈಗ ನೀವು ಮೈದಾನದ ಹೊರಗೆ ಏನು ಮಾಡಿದ್ದೀರಿ ಎಂದು ಹೇಳಿ.ನೀವು ಪ್ರಪಂಚದಾದ್ಯಂತ ಕ್ರೀಡಾಪಟುಗಳೊಂದಿಗೆ ಸ್ನೇಹ ಬೆಳೆಸಿರಬೇಕು ಮತ್ತು ಬಹಳಷ್ಟು ಕಲಿತಿರಬೇಕು ಎಂದು ಹೇಳಿದರು.