ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಭಾರತೀಯ ಅಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಭಾರತದ ಪ್ರತಿ ಕ್ರೀಡಾಪಟುಗಳು ಕೂಡಾ ಚಾಂಪಿಯನ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಭಾರತದ ಒಲಿಂಪಿಯನ್‌ಗಳ ಜೊತೆ ಗುರು ವಾರ ತಮ್ಮ ನಿವಾಸದಲ್ಲಿ ಪ್ರಧಾನಿ ಮೋದಿ ಭೋಜನಕೂಟ ಏರ್ಪಡಿಸಿ, ಅವರೊಂದಿಗೆ ಸಂವಾದ ನಡೆಸಿದರು. 

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರತಿಯೊಬ್ಬ ಆಟಗಾರನೂ ಚಾಂಪಿಯನ್, ಸರ್ಕಾರವು ಕ್ರೀಡೆಗಳಿಗೆ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಮತ್ತು ಕ್ರೀಡೆಯ ಉನ್ನತಿಗಾಗಿ ಮೂಲಸೌಕರ್ಯವನ್ನು ಹೆಚ್ಚಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.

Scroll to load tweet…

ಒಲಿಂಪಿಕ್ಸ್ ಆಯೋಜನೆ ಭಾರತದ ಕನಸು: ಪ್ರಧಾನಿ ನರೇಂದ್ರ ಮೋದಿ ಪುನರುಚ್ಚಾರ

ಪಿಸ್ತೂಲ್ ಬಗ್ಗೆ ಕುತೂಹಲ, ಹಾಕಿ ಸ್ಟಿಕ್‌ ಉಡುಗೊರೆ! 

ಪ್ರಧಾನಿಯನ್ನು ಭೇಟಿಯಾದ ಹಾಕಿ ತಂಡದ ಆಟಗಾರರು, ತಮ್ಮ ಸಹಿ ಇರುವ ಹಾಕಿ ಸ್ಟಿಕ್‌ ಅನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. 2 ಪದಕ ವಿಜೇತ ಶೂಟರ್ ಮನು ಭಾಕರ್ ಅವರ ಬಳಿ, ಪಿಸ್ತೂಲ್ ಹೇಗೆ ಕಾರ್ಯಾಚರಿಸುತ್ತದೆ ಎಂಬುದನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಕುಸ್ತಿಪಟು ಅಮನ್ ತಮ್ಮ ಜೆರ್ಸಿಯನ್ನು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು.

Scroll to load tweet…

ಸಂವಾದಕ್ಕೂ ಮುನ್ನ, ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರರು, ಶೂಟರ್‌ಗಳಾದ ಮನು ಭಾಕರ್, ಸರಬೋತ್ ಸಿಂಗ್, ಸ್ವಲ್ ಕುಸಾಲೆ, ಅಮನ್ ಶರಾವತ್ ಸೇರಿ ಹಲವರು ಪ್ರಧಾನಿ ಜೊತೆ ಪದಕ ಪ್ರದರ್ಶಿಸಿ ಫೋಟೋ ಕ್ಲಿಕ್ಕಿಸಿದರು. ಭಾರತದ ಬಹುತೇಕ ಅಥ್ಲೀಟ್ ಗಳು ಸಂವಾದದಲ್ಲಿ ಪಾಲ್ಗೊಂಡರು. ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್, ಬಾಕ್ಸರ್ ಲವೀನಾ, ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸೇರಿ ಇತರ ಅಥ್ಲೆಟ್ ಗಳ ಜೊತೆಗೂ ಪ್ರಧಾನಿ ಪ್ಯಾರಿಸ್ ಅನು ಭವಗಳನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಕೇಂದ್ರ ಕ್ರೀಡಾ ಸಚಿವ ಮಾನ್ ಸುಖ್ ಮಾಂಡವೀಯ, ಭಾರತೀಯ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಸೇರಿ ಪ್ರಮುಖರು ಉಪಸ್ಥಿತರಿದ್ದರು.