ಧಾನಿ ನರೇಂದ್ರ ಮೋದಿಯವರ ಗುಜರಾತ್ ಭೇಟಿಯ ಎರಡನೇ ದಿನ ಎರಡು ಪ್ರಮುಖ ಕಾರ್ಯಕ್ರಮಗಳು ನಡೆದವು. ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿ ಹೊಸದಾಗಿ ತಯಾರಿಸಲಾದ ಬನಾಸ್ ಡೈರಿ ಸಂಕೀರ್ಣದ ಉದ್ಘಾಟನೆ ಮತ್ತು ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್‌ಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.
ಅಹಮದಾಬಾದ್ (ಏ. 19): ತವರು ರಾಜ್ಯ ಗುಜರಾತ್ ಗೆ (Gujarat ) ಮೂರು ದಿನಗಳ ಭೇಟಿಗಾಗಿ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಮಂಗಳವಾರ, ವಿಶ್ವದಲ್ಲಿ ಈ ಮಾದರಿಯ ಮೊಟ್ಟಮೊದಲ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರವನ್ನು(Global Centre for Traditional Medicine) ಜಾಮ್ ನಗರದಲ್ಲಿ (Jam Nagar) ಅನಾವರಣ ಮಾಡಿದರು.
ಭಾರತದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳು ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಪಡೆಯುತ್ತಿರುವ ಹೊತ್ತಿನಲ್ಲೇ, ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಕುರಿತಾದ ಜಾಗತಿಕ ಕೇಂದ್ರವೊಂದನ್ನು ತೆರೆಯುವುದಾಗಿ ವಿಶ್ವ ಆರೋಗ್ಯ ಸಂಸ್ಥೆ (World Health Orgaanisation) ಕಳೆದ ಶುಕ್ರವಾರ ಘೋಷಣೆ ಮಾಡಿತ್ತು. "ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಿಗಳ ಜಾಗತಿಕ ಕೇಂದ್ರ ಜಗತ್ತಿಗೆ ಉತ್ತಮ ವೈದ್ಯಕೀಯ ಪರಿಹಾರಗಳನ್ನು ನೀಡುವುದಲ್ಲದೆ ಸಾಂಪ್ರದಾಯಿಕ ಔಷಧಿಗಳಿಗೆ ಹೊಸ ಯುಗವನ್ನು ಪ್ರಾರಂಭಿಸುತ್ತದೆ' ಎಂದು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
"ಇಂದು ಸ್ಥಾಪನೆಯಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್‌ನಲ್ಲಿ ಭಾರತದ ಬಗ್ಗೆ ಡಾ ಟೆಡ್ರೊಸ್ ಘೆಬ್ರೆಯೆಸಸ್ ಹೊಂದಿರುವ ಪ್ರೀತಿಯನ್ನು ತೋರಿಸುವುದು ಮಾತ್ರವಲ್ಲ, ಸಾಂಪ್ರದಾಯಿಕ ಔಷಧವನ್ನು ಪುನರುತ್ಪಾದಿಸಲಾಗುವ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನ ತೋರಿಸಿದೆ. ಅವರು ಈ ಸಂಸ್ಥೆಯನ್ನು ತಮ್ಮ ಮಗುವಿನಂತೆ ನೋಡುತ್ತಾರೆ ಮತ್ತು ನಾವು ಅದರ ಅತ್ಯುತ್ತಮ ಕಾಳಜಿಯನ್ನು ತೆಗೆದುಕೊಳ್ಳುತ್ತೇವೆ ಎಂದು ನಾನು ಅವರಿಗೆ ಭರವಸೆ ನೀಡುತ್ತೇನೆ' ಎಂದು ಹೇಳಿದರು.
ಭಾರತದ ಸಾಂಪ್ರದಾಯಿಕ ಔಷಧ ಪದ್ಧತಿ ಕೇವಲ ಚಿಕಿತ್ಸೆಗೆ ಸೀಮಿತವಾಗಿಲ್ಲ. ಇದು ಜೀವನದ ಸಮಗ್ರ ವಿಜ್ಞಾನವಾಗಿದೆ. 'ನಮ್ಮ ಗ್ರಹ, ನಮ್ಮ ಆರೋಗ್ಯ'ದ ಮೇಲೆ WHO ಗಮನಹರಿಸಿದ್ದು, 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಭಾರತದ ಮಂತ್ರವನ್ನು ಮತ್ತಷ್ಟು ಪ್ರಚಾರ ಮಾಡುತ್ತದೆ ಎಂದರು. ಸಾಂಪ್ರದಾಯಿಕ ಔಷಧಕ್ಕಾಗಿ ಈ ಕೇಂದ್ರದ ಮೂಲಕ WHO ಭಾರತದೊಂದಿಗೆ ಹೊಸ ಪಾಲುದಾರಿಕೆಯನ್ನು ರಚಿಸಿದೆ. ಇದು ನಮ್ಮ ಸಾಂಪ್ರದಾಯಿಕ ಔಷಧಿಗಳ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ನೀಡುತ್ತಿರುವ ಅಭಿನಂದನೆ ಎಂದುಕೊಳ್ಳುತ್ತೇವೆ. ಅಂತರರಾಷ್ಟ್ರೀಯ ಯೋಗ ದಿನವು ಜನರು ಮಾನಸಿಕ ಸಮತೋಲನವನ್ನು ಕಂಡುಕೊಳ್ಳಲು ಮತ್ತು ಪ್ರಪಂಚದಾದ್ಯಂತ ಜನರ ಒತ್ತಡವನ್ನು ತೊಡೆದುಹಾಕಲು ಸಹಾಯ ಮಾಡಿದೆ ಎಂದು ಮೋದಿ ಹೇಳಿದ್ದಾರೆ.
ಕಟ್ಟಿದ ಮೂಗು, ಮೊಡವೆಗೂ ಮದ್ದು ಕಾಳು ಮೆಣಸು
ಪ್ರಪಂಚದಾದ್ಯಂತದ ದೇಶಗಳು ಕೋವಿಡ್ -19 ವಿರುದ್ಧ ಹೋರಾಡಲು ಸಾಂಪ್ರದಾಯಿಕ ಗಿಡಮೂಲಿಕೆ ಔಷಧಿಗಳಿಗೆ ಒತ್ತು ನೀಡುತ್ತಿದೆ. ನಮ್ಮ ಸಾಂಪ್ರದಾಯಿಕ ಔಷಧಗಳು ಕೇವಲ ಚಿಕಿತ್ಸೆಯನ್ನು ಒಳಗೊಂಡಿರುವುದಿಲ್ಲ, ಇದು ಸಾಮಾಜಿಕ ಆರೋಗ್ಯ, ಮಾನಸಿಕ ಆರೋಗ್ಯ, ಸಂತೋಷ, ಪರಿಸರ ಆರೋಗ್ಯವನ್ನು ಸಹ ಒಳಗೊಂಡಿದೆ ಎಂದರು. ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್ ಜುಗ್ನೌತ್ ಮತ್ತು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ ಟೆಡ್ರೊಸ್ ಘೆಬ್ರೆಯೆಸಸ್ ಅವರು ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾರತದಲ್ಲಿ ಸಾಂಪ್ರದಾಯಿಕ ಔಷಧಗಳ ಜಾಗತಿಕ ಕೇಂದ್ರ!
ಸಾಂಪ್ರದಾಯಿಕ ಔಷಧಿಗಳ ಜಾಗತಿಕ ಕೇಂದ್ರ 5 ಗುರಿ ನಿಗದಿಪಡಿಸಿದ ಮೋದಿ: ಇಂದು, ನಾನು ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್‌ಗಾಗಿ 5 ಗುರಿಗಳನ್ನು ನೀಡುತ್ತೇನೆ. ಸಾಂಪ್ರದಾಯಿಕ ಔಷಧ ಭಂಡಾರವನ್ನು ರಚಿಸಲು ತಂತ್ರಜ್ಞಾನವನ್ನು ಬಳಸಿ, ಸಾಂಪ್ರದಾಯಿಕ ಪ್ರಮಾಣಿತ ಮಾರ್ಗಸೂಚಿಗಳು ಮತ್ತು ಮಾನದಂಡ ದಾಖಲೆಗಳಿಗಾಗಿ ಅಂತರರಾಷ್ಟ್ರೀಯ ಕೇಂದ್ರಗಳನ್ನು ರಚಿಸಿ, ವಿಶ್ವಾದ್ಯಂತ ತಜ್ಞರ ವಾರ್ಷಿಕ ಶೃಂಗಸಭೆ, ಸಂಶೋಧನೆಯಲ್ಲಿ ನಿಧಿಯನ್ನು ಇನ್ನು ಹೆಚ್ಚಿಸುವುದು ಹಾಗೂ ಸಮಗ್ರ ಕ್ಷೇಮಕ್ಕಾಗಿ ಆಧುನಿಕ ಮತ್ತು ಸಾಂಪ್ರದಾಯಿಕ ಒಟ್ಟಿಗೆ ಸಂಯೋಜಿಸುವ ಚಿಕಿತ್ಸಾ ಪ್ರೋಟೋಕಾಲ್ ಅನ್ನು ಸ್ಥಾಪನೆ ಎನ್ನುವ ಗುರಿಯನ್ನು ನೀಡಿದ್ದಾರೆ.
