Asianet Suvarna News Asianet Suvarna News

PM Modi ನರೇಂದ್ರ ಮೋದಿ ಹತ್ಯೆಗೆ ಸಂಚು!

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣದ ಬೆಳಕಿಗೆ ಬಂದಿದೆ. ಈ ಮೇಲ್ ಮೂಲಕ ಬಂದಿರುವ ಸಂದೇಶದಲ್ಲಿ 20 ಕೆಜಿ ಆರ್ ಡಿಎಕ್ಸ್ ಬಳಸಿ ಹತ್ಯೆಗೆ ಸಂಚು ಮಾಡಲಾಗಿದೆ ಎಂದು ವರದಿಯಾಗಿದೆ

Prime minister narendra modi assassination Plot Revealed central investigation agency report san
Author
Bengaluru, First Published Apr 1, 2022, 3:11 PM IST

ನವದೆಹಲಿ (ಏ. 1): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಹತ್ಯೆ ಸಂಚು (assassination Plot) ಬಯಲಾಗಿದೆ. ನರೇಂದ್ರ ಮೋದಿ ಅವರಿಗೆ ಪ್ರಾಣಭಯ ಒಡ್ಡಿರುವ ಸಂದೇಶ ಸಿಕ್ಕಿದ್ದು ಭದ್ರತಾ ಪಡೆಗಳು ಇದರ ತನಿಖೆಯಲ್ಲಿ ತೊಡಗಿವೆ. ನರೇಂದ್ರ ಮೋದಿ ಅವರ ಪ್ರಾಣ ಬೆದರಿಕೆಯೊಡ್ಡಿ ಈ ಮೇಲ್ ಮೂಲಕ ಸಂದೇಶ ರವಾನೆಯಾಗಿದೆ ಎಂದು ವರದಿಯಾಗಿದೆ.  ಈ ಮೇಲ್ ನಲ್ಲಿ 20 ಕೆಜಿ ಆರ್ ಡಿಎಕ್ಸ್ ಬಳಸಿ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿದೆ. ಕೇಂದ್ರದ ತನಿಖಾ ಸಂಸ್ಥೆಗಳಿಗೆ ಈ ಮಾಹಿತಿ ಸಿಕ್ಕಿದ್ದು, ಈ ಮೇಲ್ ನ ಮೂಲದ ಬಗ್ಗೆ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ತನಿಖಾ ತಂಡಕ್ಕೆ (National investigation agency) ಇಮೇಲ್ ರವಾನೆಯಾಗಿದೆ. ಇದರ ಬೆನ್ನಲ್ಲಿಯೇ ಭದ್ರತಾ ಏಜೆನ್ಸಿಗಳು ಕಂಗಾಲಾಗಿದ್ದು, ಪ್ರತಿ ಚಲನವಲನದ ಮೇಲೆ ಹದ್ದಿ ಕಣ್ಣಿಟ್ಟಿದ್ದಾರೆ. ತಮ್ಮ ಈ ಷಡ್ಯಂತ್ರ ಬಯಲಾಗಬಾರದು. ಹಾಗೇನಾದರೂ ಆದಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದೂ ಈ ಮೇಲ್ ಕಳುಹಿಸಿದ ವ್ಯಕ್ತಿ ಬರೆದಿದ್ದಾನೆ.

ವರದಿಗಳ ಪ್ರಕಾರ, ಕೆಲಸಕ್ಕಾಗಿ ಕನಿಷ್ಠ 20 ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಸ್ಲೀಪರ್ ಸೆಲ್‌ಗಳು 20 ಕೆಜಿ ಆರ್‌ಡಿಎಕ್ಸ್ ಅನ್ನು ಸಹ ಹೊಂದಿವೆ ಎನ್ನುವ ವಿವರ ಕೂಡ ಇದರಲ್ಲಿದೆ.

"

ಇಮೇಲ್ ಪ್ರಕಾರ, ಯೋಜನೆಯನ್ನು ಈಗಾಗಲೇ ರೂಪಿಸಲಾಗಿದ್ದು, ಕಾರ್ಯಗತಗೊಳಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರೆ. ಈ ಯೋಜನೆಗೆ ವಿವಿಧ ಭಯೋತ್ಪಾದಕ ಸಂಘಟನೆಗಳೂ (terror organisations) ಸಂಪರ್ಕ ಹೊಂದಿವೆ. ಇಮೇಲ್ ಸ್ವೀಕರಿಸಿರುವ ಎನ್ಐಎಯ ಮುಂಬೈ ಶಾಖೆ ( Mumbai branch of NIA), ತಾನು ಇಮೇಲ್ ಅನ್ನು ವಿವಿಧ ಏಜೆನ್ಸಿಗಳೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದೆ. ಸೈಬರ್ ಸೆಕ್ಯುರಿಟಿ ಏಜೆನ್ಸಿ ಈಗ ಇಮೇಲ್ ಕಳುಹಿಸಿರುವ ಐಪಿ ವಿಳಾಸವನ್ನು ಗುರುತಿಸಲು ಪ್ರಯತ್ನಿಸುತ್ತಿದೆ.

ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ತನಿಖಾ ಸಂಸ್ಥೆಗೆ ಬೆದರಿಕೆ ಮೇಲ್ ಬಂದಿರುವುದು ಇದೇ ಮೊದಲಲ್ಲ. 2018 ರಲ್ಲಿ, ಪುಣೆ ಪೊಲೀಸರಿಗೆ ಬರೆದ ಪತ್ರದಲ್ಲಿ "ರಾಜೀವ್ ಗಾಂಧಿ ಮಾದರಿ" ಶೈಲಿಯಲ್ಲಿ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವ ಸಂಚು ಬಹಿರಂಗವಾಗಿತ್ತು. 1991 ರ ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಚುನಾವಣಾ ಪ್ರಚಾರದ ವೇಳೆ ಶ್ರೀಲಂಕಾದಿಂದ ಆತ್ಮಾಹುತಿ ಬಾಂಬರ್‌ನಿಂದ ಹತ್ಯೆ ಮಾಡಲಾಗಿತ್ತು.

Prime minister narendra modi assassination Plot Revealed central investigation agency report san

IED found at Ghazipur : ಗಣರಾಜ್ಯೋತ್ಸವಕ್ಕೂ ಮುನ್ನ  ದೆಹಲಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು!

ಈ ನಡುವೆ ಇತ್ತೀಚಿನ ದಿನಗಳಲ್ಲಿ ದೆಹಲಿ ಸುತ್ತಮುತ್ತಲ ವಲಯದಲ್ಲಿ ಆರ್ ಡಿಎಕ್ಸ್ ಪತ್ತೆಯಾದ ಸುದ್ದಿಗಳೂ ವರದಿಯಾಗಿದ್ದವು. ಉತ್ತರ ಪ್ರದೇಶದ ಭಾಗವಾಗಿರುವ, ದೆಹಲಿಯೊಂದಿಗೆ ಗಡಿ ಹಂಚಿಕೊಂಡಿರುವ ಗಾಜಿಯಾಬಾದ್ ನ ಹೂವಿನ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಆರ್ ಡಿಎಕ್ಸ್ ಪತ್ತೆಯಾಗಿತ್ತು. ಆ ಬಳಿಕ  ಪಂಚರಾಜ್ಯ ಚುನಾವಣೆಯ ವೇಳೆಯಲ್ಲೂ ದೆಹಲಿಯಲ್ಲಿ ಆರ್ ಡಿಎಕ್ಸ್ ಪತ್ತೆಯಾದ ಬಗ್ಗೆ ವರದಿಯಾಗಿದ್ದವು. "ನಾನು ದೇಶಾದ್ಯಂತ 20 ದಾಳಿಗಳನ್ನು ಯೋಜಿಸುತ್ತಿದ್ದೇನೆ" ಎಂದು ಈ ಮೇಲ್ ನಲ್ಲಿ ವ್ಯಕ್ತಿ ಬರೆದಿದ್ದಾರೆ. ಪ್ರಧಾನಿ ಮೋದಿ ತನ್ನ ಜೀವನವನ್ನು ನಾಶಪಡಿಸಿದ್ದಾನೆ ಎಂದು ವ್ಯಕ್ತಿ ಬರೆದಿದ್ದಾನೆ. "ಈ ಕೆಲಸವನ್ನು ಮಾಡಬಲ್ಲ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಈ ದೇಶಕ್ಕೆ ದೊಡ್ಡ ದುರಂತವನ್ನು ಉಂಟುಮಾಡುತ್ತಾರೆ. ನಾನು ಫೆಬ್ರವರಿ 28 ರಂದು ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದೇನೆ" ಎಂದು ಉಲ್ಲೇಖಿಸಿದ್ದಾರೆ.

Delhi Bomb Threat : ರಾಷ್ಟ್ರ ರಾಜಧಾನಿಯಲ್ಲಿ ತಪ್ಪಿದ ದೊಡ್ಡ ದುರಂತ!

ಜಮ್ಮು ಮತ್ತು ಕಾಶ್ಮೀರದ ಮಾಜಿ ಡಿಜಿಪಿ ಎಸ್ ಪಿ ವೈದ್,  ಪ್ರಧಾನಿ ಮೋದಿ ಅವರನ್ನು ಹತ್ಯೆ ಮಾಡುವ ಇತ್ತೀಚಿನ ಬೆದರಿಕೆಗೆ ಪ್ರತಿಕ್ರಿಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಭಯೋತ್ಪಾದಕ ಸಂಘಟನೆಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿಯವರ ಭದ್ರತಾ ವ್ಯವಸ್ಥೆಗಳ ಬಗ್ಗೆ ನಾನು ತುಂಬಾ ವಿಶ್ವಾಸ ಹೊಂದಿದ್ದೇನೆ. ಎಸ್‌ಪಿಜಿ, ಬ್ಲೂಬುಕ್ ಮತ್ತು ಪಿಎಂ ಮೋದಿಗೆ ಒದಗಿಸಲಾದ ಭದ್ರತೆಯಿಂದ ಪ್ರಧಾನಿ ಮೋದಿ ಅವರನ್ನು ಅದ್ಭುತವಾಗಿ ರಕ್ಷಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios