ಪ್ರಧಾನಿ Narendra Modi ಇಂದು Indiaದ ಅತೀ longest cable bridge, Sudarshan Setuವನ್ನು ತವರು ರಾಜ್ಯ Gujaratನ Dwarakaದಲ್ಲಿ ಉದ್ಘಾಟಿಸಿದ್ದಾರೆ.
ನವದೆಹಲಿ/ದ್ವಾರಕಾ: ಪ್ರಧಾನಿ ನರೇಂದ್ರ ಮೋದಿ ಇಂದು ಭಾರತದ ಅತೀ ದೊಡ್ಡ ಕೇಬಲ್ ಬ್ರಿಡ್ಜ್ ಸುದರ್ಶನ ಸೇತುವನ್ನು ತವರು ರಾಜ್ಯ ಗುಜರಾತ್‌ನ ದ್ವಾರಕಾದಲ್ಲಿ ಉದ್ಘಾಟಿಸಿದ್ದಾರೆ. 4 ಲೇನ್‌ಗಳ ಈ ಕೇಬಲ್ ಬ್ರಿಡ್ಜ್ ಗುಜರಾತ್‌ನ ಓಖಾವನ್ನು ಬೇಟ್ ದ್ವಾರಕಾ ದ್ವೀಪದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. 2017ರ ಆಕ್ಟೋಬರ್‌ನಲ್ಲಿ 2.3 ಕಿಲೋ ಮೀಟರ್ ಉದ್ದದ ಈ ಕೇಬಲ್ ಬ್ರಿಡ್ಜ್‌ಗೆ ಶಂಕುಸ್ಥಾಪನೆ ನೇರವೇರಿಸಲಾಗಿತ್ತು. ಆ ಸಂದರ್ಭದಲ್ಲಿ ಇದು ಹಳೆ ದ್ವಾರಕಾ ಹಾಗೂ ಹೊಸ ದ್ವಾರಕವನ್ನು ಸಂಪರ್ಕಿಸುತ್ತದೆ ಎಂದು ಹೇಳಲಾಗಿತ್ತು.
ದೇವಭೂಮಿ ದ್ವಾರಕಾ ಆಡಳಿತದ ಅಧಿಕೃತ ಹೇಳಿಕೆಯ ಪ್ರಕಾರ, ಈ ಸೇತುವೆಯು 2.32 ಕಿಲೋಮೀಟರ್ ಉದ್ದವನ್ನು ಹೊಂದಿದ್ದು, ಇದರ ಮಧ್ಯದ ಡಬಲ್-ಸ್ಪ್ಯಾನ್ ಕೇಬಲ್-ಸ್ಟೇಡ್ ಭಾಗವು 900 ಮೀಟರ್‌ಗಳನ್ನು ಒಳಗೊಂಡಿದೆ, ಜೊತೆಗೆ 2.45 ಕಿಲೋಮೀಟರ್ ಉದ್ದದ ಅಪ್ರೋಚ್ ರಸ್ತೆಯನ್ನು ಹೊಂದಿದೆ. 979 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆಯು 27.20 ಮೀಟರ್ ಅಗಲವನ್ನು ಹೊಂದಿದ್ದು, ಎರಡೂ ಬದಿಯಲ್ಲಿ 2.50 ಮೀಟರ್ ಅಗಲದ ಫುಟ್‌ಪಾತ್‌ಗಳನ್ನು ಹೊಂದಿದೆ ಎಂಬ ಮಾಹಿತಿ ಇದೆ.
ನಾವು ಕೃಷ್ಣನ ವಂಶಸ್ಥರು ಪಾಂಡವರ ಪಕ್ಷದವರು ಎಂದ ಅಖಿಲೇಶ್ ಯಾದವ್: ಯೋಗಿ ಆದಿತ್ಯನಾಥ್ ಉತ್ತರಕ್ಕೆ ಶಾಕ್
ನಾಲ್ಕು ಪಥದ 27.20 ಮೀಟರ್ ಅಗಲದ ಸೇತುವೆಯು ಪ್ರತಿ ಬದಿಯಲ್ಲಿ 2.50 ಮೀಟರ್ ಅಗಲದ ಕಾಲು ದಾರಿಗಳನ್ನು ಹೊಂದಿದೆ, ಸುದರ್ಶನ ಸೇತು ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದ್ದು, ಭಗವದ್ಗೀತೆಯ ಶ್ಲೋಕಗಳಿಂದ ಅಲಂಕರಿಸಲ್ಪಟ್ಟ ಕಾಲುದಾರಿ ಮತ್ತು ಎರಡೂ ಬದಿಗಳಲ್ಲಿ ಶ್ರೀಕೃಷ್ಣನ ಚಿತ್ರಗಳನ್ನು ಒಳಗೊಂಡಿದೆ ಎಂದು ದೇವಭೂಮಿ ದ್ವಾರಕಾ ಆಡಳಿತ ಸಮಿತಿ ಹೇಳಿದೆ.
ಸಿಗ್ನೇಚರ್ ಬ್ರಿಡ್ಜ್ ಎಂದು ಕರೆಯಲಾಗುತ್ತಿದ್ದ ಸೇತುವೆಯನ್ನು 'ಸುದರ್ಶನ ಸೇತು' ಅಥವಾ ಸುದರ್ಶನ ಸೇತುವೆ ಎಂದು ಮರುನಾಮಕರಣ ಮಾಡಲಾಗಿದೆ. ಈ ಸೇತುವೆ ಸಂಪರ್ಕಿಸುವ ಬೇಟ್ ದ್ವಾರಕಾ ಓಖಾ ಬಂದರಿನ ಸಮೀಪವಿರುವ ಒಂದು ದ್ವೀಪವಾಗಿದ್ದು, ಇದು ದ್ವಾರಕಾ ಪಟ್ಟಣದಿಂದ ಸುಮಾರು 30 ಕಿ.ಮೀ ದೂರದಲ್ಲಿದೆ, ಅಲ್ಲಿ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಾಲಯವಿದೆ.
ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀಕೃಷ್ಣ ಪೂಜೆ ಮಾಡಿದ್ರೆ…ಸಂಪತ್ತಿನ ಸುರಿಮಳೆಯಾಗುತ್ತೆ
