ಉತ್ತರ ಪ್ರದೇಶ ವಿಧಾನಸಭೆಯ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾವು ಶ್ರೀಕೃಷ್ಣನ ವಂಶಸ್ಥರು ಎಂದ ಯಾದವ್‌ಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನಸಭೆಯ ಹಳೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಾವು ಶ್ರೀಕೃಷ್ಣನ ವಂಶಸ್ಥರು ಎಂದ ಯಾದವ್‌ಗೆ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.
ಯಾದವ ಜನಾಂಗದವರು ಭಗವಾನ್ ಶ್ರೀಕೃಷ್ಣನ ವಂಶಸ್ಥರು ಎಂಬ ನಂಬಿಕೆ ಇರುವುದು ಬಹುತೇಕರಿಗೆ ಗೊತ್ತೆ ಇದೆ. ಉತ್ತರಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಯಾದವರಾಗಿದ್ದು, ಇದೇ ವಿಚಾರವನ್ನು ಅವರು ಉತ್ತರಪ್ರದೇಶ ಆಸೆಂಬ್ಲಿಯಲ್ಲಿ ಹೇಳಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ನಾವು ಭಗವಾನ್ ಶ್ರೀಕೃಷ್ಣನ ವಂಶಸ್ಥರು, ಸತ್ಯವು ಯಾವಾಗಲೂ ಸತ್ಯವೇ ಆಗಿರುತ್ತದೆ. ಅದನ್ನು ಯಾರಿಂದಲೂ ಮುಚ್ಚಿಡಲಾಗದು, ನಾವು ಪಾಂಡವರ ಕಡೆಯವರು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಆದರೆ ಇದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ತಿರುಗೇಟು ನೀಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಶ್ರೀಕೃಷ್ಣ ಕೇಳಿದ್ದು 5 ಗ್ರಾಮ, ಈಗ 3 ಶ್ರದ್ಧಾ ಕೇಂದ್ರ, ಕಾಶಿ ಮಥುರಾ ಕುರಿತು ಸಿಎಂ ಯೋಗಿ ಮಹತ್ವದ ಹೇಳಿಕೆ!
ತಾನು ಭಗವಾನ್ ಶ್ರೀಕೃಷ್ಣನ ವಂಶಸ್ಥರು ಎಂದ ಅಖಿಲೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಯೋಗಿ ಆದಿತ್ಯನಾಥ್ ನಿಮ್ಮ ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದ ಕಾಲದಲ್ಲೇ ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳಿಗೆ ಬೀಗ ಜಡಿಯಲಾಯ್ತು ಎಂದು ತಿರುಗೇಟು ನೀಡಿದ್ದಾರೆ. ನೋಡಿ ಎರಡು ಸ್ಥಳಗಳಿವೆ. ಕಾಶಿಯಲ್ಲೂ ವಿಶ್ವನಾಥ ದೇಗುಲಕ್ಕೆ ನಿಮ್ಮ ಕಾಲದಲ್ಲೇ ಬಿಗ ಜಡಿಯಲಾಯ್ತು. ಹಾಗೆಯೇ ಮಥುರಾದಲ್ಲಿ ಶ್ರಿ ಕೃಷ್ಣ ಜನ್ಮ ಭೂಮಿಯ ಪಕ್ಕದಲ್ಲಿರುವ ಪಾರ್ಕ್‌ಗೆ ನೀವು ಅಧಿಕಾರದಲ್ಲಿದ್ದ ಕಾಲದಲ್ಲೇ ಬೀಗ ಜಡಿಯಲಾಯ್ತು. ಈ ಎರಡೂ ಜಾಗದಲ್ಲೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬೀಗವನ್ನು ತೆಗೆಯಲಾಯ್ತು. ಅಲ್ಲದೇ ಮಥುರಾ ದೇಗುಲದ ವಿಚಾರದಲ್ಲೂ ನೀವು ಏನೇನೂ ಮಾಡಿಲ್ಲ, ಏಕೆಂದರೆ ನಿಮಗೆ ಅಲ್ಲಿಗೆ ಹೋಗುವುದಕ್ಕೆಯೇ ಭಯ ಎಂದು ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆ ಸೆಷನ್ ವೇಳೆ ನಡೆದ ಈ ಮಾತುಕತೆಯ ತುಣುಕು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಇನ್ನೊಂದೆಡೆ ಅಯೋಧ್ಯೆಯ ರಾಮ ಮಂದಿರದ ವಿಚಾರವಾಗಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, 500 ವರ್ಷಗಳ ಗುಲಾಮಗಿರಿಯನ್ನು ಮುರಿಯುವ ಮೂಲಕ ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಭಕ್ತಿ ಮತ್ತು ಶಕ್ತಿಯ ಸಂಗಮ ಕಾರಣವಾಯಿತು ಹೇಳಿದ್ದಾರೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣವಾಗುವುದರೊಂದಿಗೆ ಶಕ್ತಿ ಹಾಗೂ ಭಕ್ತಿ ಜೊತೆಯಾಗಿದೆ ಎಂದು ಹೇಳಿದರು.
ಭಾರತ ತ್ರೇತಾಯುಗ ಪ್ರವೇಶ ಮಾಡಿದಂತಿದೆ; ರಾಮಮಂದಿರದ ಶಂಕುಸ್ಥಾಪನೆ ಭಾವನಾತ್ಮಕ ಕ್ಷಣ: ಯೋಗಿ ಆದಿತ್ಯನಾಥ್
ಇಂದು ಅಯೋಧ್ಯೆಯ ರಾಮ ಮಂದಿರಕ್ಕೆ ಉತ್ತರ ಪ್ರದೇಶದ ವಿಧಾನಸಭೆಯ ಶಾಸಕರಿಗೆ ತೆರಳಲು ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಸ್ಪೀಕರ್ ಸತಿಶ್ ಮಹನಾ ಅವರು ವಿಧಾನಸಭೆಯ ಸದಸ್ಯರನ್ನು ರಾಮಲಲ್ಲಾನ ದರ್ಶನ ಪಡೆಯುವಂತೆ ಆಹ್ವಾನಿಸಿದ್ದರು. ಆದರೆ ಸಮಾಜವಾದಿ ಪಕ್ಷ ಈ ಆಹ್ವಾನವನ್ನು ನಿರಾಕರಿಸಿದೆ ಎಂದು ತಿಳಿದು ಬಂದಿದೆ.
