ಬೈಡೆನ್‌ಗೆ ಕರುನಾಡ ಶ್ರೀಗಂಧ ಉಡುಗೊರೆ : ದಶದಾನ ಮಾಡಿದ ಪ್ರಧಾನಿ ಮೋದಿ
ಅಮೆರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಮೂಲ್ಯವಾದ ಹಲವು ಉಡುಗೊರೆಗಳನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.
ನ್ಯೂಯಾರ್ಕ್: ಅಮೆರಿಕಾದ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾರತದ ವಿವಿಧ ಸಂಸ್ಕೃತಿಯನ್ನು ಪ್ರತಿನಿಧಿಸುವ ಅಮೂಲ್ಯವಾದ ಹಲವು ಉಡುಗೊರೆಗಳನ್ನು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಕರುನಾಡಿನ ಶ್ರೀಗಂಧವೂ ಅಮೆರಿಕ ಅಧ್ಯಕ್ಷರ ನಿಲಯ ಸೇರಿದೆ. ಹಿಂದೂ ಸಂಪ್ರದಾಯದಂತೆ ದಶದಾನ ಮಾಡಿದ ಪ್ರಧಾನಿ ಮೋದಿ, ಕೆತ್ತನೆಗಳುಳ್ಳ ಬೆಳ್ಳಿ ಬಟ್ಟಲುಗಳಲ್ಲಿ ಬೈಡೆನ್ ದಂಪತಿಗೆ ದಶದಾನ ಮಾಡಿದ್ದಾರೆ.
ಗೋದಾನದ ರೂಪದಲ್ಲಿ ಬೆಳ್ಳಿ ತೆಂಗಿನಕಾಯಿ, ಭೂದಾನವಾಗಿ ಕರ್ನಾಟಕದ ಶ್ರೀಗಂಧದ ಕೊರಡು , ತಿಲದಾನವಾಗಿ ತಮಿಳುನಾಡಿನ ಬಿಳಿ ಎಳ್ಳು ಹಿರಣ್ಯದಾನವಾಗಿ ರಾಜಸ್ಥಾನದ 24 ಕ್ಯಾರೆಟ್ ಬಂಗಾರದ ನಾಣ್ಯ, ರೌಪ್ಯದಾನವಾಗಿ ರಾಜಸ್ಥಾನದ ಕೆತ್ತನೆಯ ಬೆಳ್ಳಿ ನಾಣ್ಯ , ಲವಣದಾನವಾಗಿ ಗುಜರಾತಿನ ಉಪ್ಪನ್ನು ದಾನವಾಗಿ ಪ್ರಧಾನಿ ನೀಡಿದ್ದಾರೆ. ಆಜ್ಯದಾನವಾಗಿ ತುಪ್ಪ, ಧಾನ್ಯ , ವಸ್ತ್ರ ಗುಡದಾನವನ್ನು (ಬೆಲ್ಲ)ವನ್ನು ನೀಡಿದ್ದು, ಇದರ ಜೊತೆ ಹಿಂದೂಗಳ ಅರಾಧ್ಯ ದೈವ ಗಣೇಶನ ವಿಗ್ರಹವೂ ವೈಟ್‌ಹೌಸ್ ಸೇರಿದೆ. ವಿಘ್ನ ನಿವಾರಕನನ್ನು ಉಡುಗೊರೆಯಾಗಿ ಪ್ರಧಾನಿ ಮೋದಿ ನೀಡಿದ್ದಾರೆ.
80 ತುಂಬಿದ ಬೈಡೆನ್‌ಗೆ ವಿಶೇಷ ಉಡುಗೊರೆ ನೀಡಿದ ಮೋದಿ: ದಶದಾನ ಏನಿದರ ವಿಶೇಷತೆ?
ಶ್ರೀ ಗಂಧದ ಪೆಟ್ಟಿಗೆಯಲ್ಲಿದ್ದ ಬೆಳ್ಳಿ ಗಣೇಶನನ್ನು ಪ್ರಧಾನಿ ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ ದೇವರ ಮನೆಯಲ್ಲಿ ಬೆಳಗುವ ದೀಪವನ್ನೂ ನೀಡಿದ್ದಾರೆ. ಇದು ಕೋಲ್ಕತ್ತಾದ ಕುಶಲಕರ್ಮಿಗಳಿಂದ ನಿರ್ಮಾಣವಾದ ದೀಪವಾಗಿದೆ. ಮೈಸೂರಿನ ಶ್ರೀಗಂಧದಿಂದ ಮಾಡಿದ ಜೈಪುರದ ಕುಶಲಕರ್ಮಿಗಳ ಕೆತ್ತನೆ ಇರುವ ಬಾಕ್ಸ್‌ನಲ್ಲಿ ಈ ಉಡುಗೊರೆ ನೀಡಲಾಗಿದೆ.