ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲುವಿನ ಕುರಿತು ಮೋದಿ ಮಾತು!
ಮೂರನೇ ಭಾರಿ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷದಲ್ಲಿ ಜನರ ಸೇವೆ ಮಾಡಿದ್ದೇವೆ. ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದು ಜನರ ವಿಶ್ವಾಸಗಳಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಕಾಂಗ್ರೆಸ್ ಕಳೆದ 5-6 ದಶಕದಲ್ಲಿ ಜನರಿಗೆ ಮಾಡಿದ ಮೋಸದ ಕುರಿತು ಮಾತನಾಡಿದ್ದಾರೆ.
ನವದೆಹಲಿ(ಏ.20) ಲೋಕಸಭಾ ಚುನಾವಣ ಕಾವು ಜೋರಾಗಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದೆ. ಇತ್ತ ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ 400ಕ್ಕೂ ಮೀರಿ ಎಂದು ಘೋಷಣಾ ವಾಕ್ಯವನ್ನೇ ಮೊಳಗಿಸಿದೆ. ಮೂರನೇ ಬಾರಿ ಐತಿಹಾಸಿಕ ಗೆಲುವಿನ ವಿಶ್ವಾಸದಲ್ಲಿದೆ. ಲೋಕಸಭಾ ಚುನಾವಣೆ, ಭಾರತದ ಅಭಿವೃದ್ಧಿ, 10 ವರ್ಷಗಳ ಬಿಜೆಪಿ ಆಡಳಿತ ಕುರಿತು ಪ್ರಧಾನಿ ನರೇಂದ್ರ ಮೋಂದಿ ಏಷ್ಯಾನೆಟ್ ಸುವರ್ಣ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.
2014,2019 ಇದೀಗ 2024ರ ಭಾರಿ ಗೆಲುವು ಹಾಗೂ ಭಾರತದ ಅಭಿವೃದ್ಧಿ ಕುರಿತು ಮಾತನಾಡುತ್ತೀರಿ, ನಿರ್ಣಾಯಕ ಗೆಲುವಿಗೂ ಅಭಿವೃದ್ಧಿಗೂ ಏನು ಸಂಬಂಧ ಅನ್ನೋ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳಿಗೂ ಆಕಾಂಕ್ಷೆಗಳಿರಬೇಕು, ನಾವು ಚುನಾವಣೆಗೆ ಸ್ಪರ್ಧಿಸಬೇಕು.. ಜನರ ವಿಶ್ವಾಸ ಗಳಿಸಬೇಕು.. ನಂತರ ಅಧಿಕಾರಕ್ಕೆ ಬಂದಮೇಲೆ.. ನಾವು ಕೊಟ್ಟ ಭರವಸೆ ಹಾಗೂ ನಮ್ಮ ಕನಸುಗಳನ್ನ ಜಾರಿಗೆ ತರಲು ಪ್ರಯತ್ನ ಮಾಡಬೇಕು.. ಯಾವುದೇ ರಾಜಕೀಯ ಪಕ್ಷಗಳಿಗೆ ಇದು ಮಹತ್ವದ ವಿಚಾರ ಅನಿಸೋದೇ ಇಲ್ಲ.. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ.. ಪ್ರಜಾಪ್ರಭುತ್ವದಲ್ಲಿರುವ ಪ್ರತಿಯೊಂದು ರಾಜಕೀಯ ಪಕ್ಷಗಳು ಒಂದು ಭಾವನೆ ಇಟ್ಟುಕೊಳ್ಳಬೇಕು.. ಅಧಿಕಾರಕ್ಕೆ ಬಂದ ಮೇಲೆ ತಮ್ಮ ವಿಚಾರದ ಆಧಾರದ ಮೇಲೆ ದೇಶದ ಸೇವೆ ಮಾಡಬೇಕು.. ಇದು ಪ್ರಜಾಪ್ರಭುತ್ವಕ್ಕೆ ಅವಶ್ಯಕವಾಗಿರುತ್ತೆ ಎಂದು ಮೋದಿ ಹೇಳಿದ್ದಾರೆ.
ತಿರಂಗ ಹಿಡಿದರೆ ಸಾಕು ದಾರಿ ಬಿಡುತ್ತಾರೆ, ಇದು ವಿಶ್ವದಲ್ಲಿ ಭಾರತ ಸಂಪಾದಿಸಿದ ಗೌರವ; ಮೋದಿ ಸಂದರ್ಶನ!
ಬಿಜೆಪಿ ಪ್ರಶ್ನೆ ಬಂದರೆ, 2014ರಲ್ಲಿ ನಾವು ಅಧಿಕಾರಕ್ಕೆ ಬಂದಾಗ, 5-6 ದಶಕಗಳ ಕಾಲ ಅಧಿಕಾರ ನಡೆಸೋಕೆ ಕಾಂಗ್ರೆಸ್ಗೆ ಅವಕಾಶ ಸಿಕ್ಕಿತ್ತು.. ಬಹುಶಃ ಅವರಿಗೆ ಆಗ ಪ್ರಬಲ ವಿಪಕ್ಷಗಳು ಇರಲಿಲ್ಲ.. ಇಷ್ಟೊಂದು ಮಾಧ್ಯಮಗಳ ತೀವ್ರತೆ ಸಹ ಆಗ ಇರಲಿಲ್ಲ.. ಒಂದು ಪ್ರಕಾರ ಅವರಿಗೆ ಖಾಲಿ ಮೈದಾನದಂತಿತ್ತು.. ದೇಶದ ಜನತೆ ಅವರ ಜೊತೆಗಿದ್ದರು. ಸ್ವಾತಂತ್ರ್ಯ ಹೋರಾಟದ ಭಾವನೆ ಜನರಲ್ಲಿತ್ತು, ಅವರು ಏನು ಹೇಳಿದ್ರು ದೇಶ ಮಾಡುತ್ತಿತ್ತು. ಆದ್ರೆ ಅವರು ಆ ಅವಕಾಶವನ್ನ ನಾಶ ಮಾಡಿದರು. ಕ್ರಮೇಣವಾಗಿ ಹಾಳು ಮಾಡುತ್ತಾ ಬಂದರು ಎಂದು ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.
2013ರ ಆ ಪರಿಸ್ಥಿತಿಯಲ್ಲಿ ನನ್ನ ಮೇಲೆ ಏನೆಲ್ಲಾ ಹೇಳಿದ್ರು.. ಈ ವ್ಯಕ್ತಿಗೆ ಹಿಂದೂಸ್ತಾನದ ಜನರ ಬಗ್ಗೆ ಏನು ಗೊತ್ತು? ವಿಶ್ವದ ಬಗ್ಗೆ ಏನು ಗೊತ್ತು? ನಕಾರಾತ್ಮಕ ವಿಚಾರಗಳ ಮಾತುಗಳನ್ನ ಆಡಿದ್ದರು. ಆದರೆ ಜನರು ನಮಗೆ ಅವರ ಸೇವೆ ಮಾಡೋಕೆ ಅವಕಾಶ ನೀಡಿದರು. 2014 ಭರವಸೆಯ ಕಾಲಘಟ್ಟವಾಗಿತ್ತು. ಜನರ ಮನಸ್ಸಿನಲ್ಲೂ ಭರವಸೆ ಇತ್ತು.ಜನರ ಭರವಸೆಗಳನ್ನ ಈಡೇರಿಸಬೇಕು ಅನ್ನೋ ಭರವಸೆ ನನ್ನ ಮನಸ್ಸಿನಲ್ಲೂ ಇತ್ತು ಎಂದು ಮೋದಿ ಹೇಳಿದ್ದಾರೆ.
ಮೊದಲ 5 ವರ್ಷ ನಾವು ಅಧಿಕಾರ ಚಲಾಯಿಸಿಲ್ಲ ಜನರ ಸೇವೆ ಮಾಡಿದ್ದೇವೆ. ಸರ್ಕಾರ ನಡೆಸೋದು ಅಂದರೆ ಕೂತು ಮೋಜು ಮಾಡುವ ಪಕ್ಷದಲ್ಲಿ ನಾನಿಲ್ಲ.. ನಾನು ಸಾಮಾನ್ಯ ಜನರಿಗಿಂತ ಹೆಚ್ಚು ಕಷ್ಟ ಪಡಲು ಪ್ರಯತ್ನ ಪಡುತ್ತೇನೆ. ಜನ ನಮ್ಮೊಂದಿಗೆ ಸೇರಿ ನಮ್ಮ ಸರ್ಕಾರದ ಕೆಲಸಗಳನ್ನ ನೋಡಿದರು. 2014ರಲ್ಲಿ ಒಂದು ಭರವಸೆಯ ವಾತಾವರಣವಿತ್ತು.. 2019ರಲ್ಲಿ ಅದು ವಿಶ್ವಾಸವಾಗಿ ಬದಲಾಯಿತು. ಜನರ ಇಷ್ಟೊಂದು ವಿಶ್ವಾಸ ನನ್ನಲ್ಲಿ ಆತ್ಮವಿಶ್ವಾಸವನ್ನ ಇನ್ನಷ್ಟು ಹೆಚ್ಚು ಮಾಡಿದೆ. ಜನರ ಈ ವಿಶ್ವಾಸ ನಾವು ಸರಿಯಾದ ಹಾದಿಯಲ್ಲಿ ಸಾಗುತ್ತಿದ್ದೇವೆ ಅನ್ನೋ ಭರವಸೆ ತಂದಿದೆ ಎಂದು ಮೋದಿ ಹೇಳಿದ್ದಾರೆ.
ನಾವು ಎಲ್ಲರಿಗಾಗಿ ಕೆಲಸ ಮಾಡೋಕೆ ಸಬ್ ಕಾ ಸಾಥ್.. ಸಬ್ ಕಾ ವಿಕಾಸ್.. ಸಬ್ ಕಾ ಪ್ರಯಾಸ್ ಅಂದುಕೊಂಡು ನಾವು ಬೀದಿಗಿಳಿದೆವು.. ಇದರ ಪರಿಣಾಮ.. 2019 ವಿಶ್ವಾಸದ ಕಾಲಘಟ್ಟವಾಯ್ತು. ಈಗ ನಾವು 2024ರಲ್ಲಿ ದೇಶದ ಜನರ ಬಳಿ ಹೋಗ್ತಿದ್ದೇವೆ. ನಾನು 13-14 ವರ್ಷಗಳ ಕಾಲ ಮುಖ್ಯಮಂತ್ರಿಯಾದ ಅನುಭವ.. 10 ವರ್ಷ ಪ್ರಧಾನ ಮಂತ್ರಿಯಾದ ಅನುಭವ.. ನಾನು ಮಾಡಿದ ಕೆಲಸಗಳ ಆಧಾರದ ಮೇಲೆ ಹೇಳ್ತೀನಿ.. ಈ ಬಾರಿ ಗ್ಯಾರಂಟಿ ಮೂಲಕ ಬಂದಿದ್ದೇನೆ.. ಮೊದಲು ಭರವಸೆ.. ಬಳಿಕ ವಿಶ್ವಾಸ.. ಈಗ ಗ್ಯಾರಂಟಿ.. ಈ ಗ್ಯಾರಂಟಿ ಇದೆಯಲ್ಲ ಇದಕ್ಕೆ ತುಂಬಾ ಜವಾಬ್ದಾರಿ ಬೇಕು.. ನನಗನಿಸುತ್ತೆ ಈಗ ವಿಶ್ವದಲ್ಲಿ ಭಾರತ ಭರವಸೆ ಮೂಡಿಸಿದೆ. ಇಡೀ ವಿಶ್ವ ಭಾರತದಲ್ಲಿ 30 ವರ್ಷಗಳ ಕಾಲ ಅಸ್ಥಿರ ಸರ್ಕಾರವ್ನ ನೋಡಿದೆ.. ಅಸ್ಥಿರ ಸರ್ಕಾರಗಳು ದೇಶಕ್ಕೆ ಬಹಳ ನಷ್ಟವನ್ನುಂಟು ಮಾಡಿವೆ.. ವಿಶ್ವದಲ್ಲಿ ಭಾರತವನ್ನ ನೋಡುವ ವಿಧಾನ ಬೇರೆ ಆಗಿತ್ತು, ಆಗ ಬೆಲೆ ಇರಲಿಲ್ಲ... ಸ್ಥಿರ ಸರ್ಕಾರ ಏನು ಮಾಡುತ್ತೆ ಅನ್ನೋ ಬದಲಾವಣೆಯನ್ನ ಮತದಾರ ನೋಡಿದ್ದಾನೆ ಎಂದಿದ್ದಾರೆ.
ನನಗನಿಸುತ್ತೆ 2024ರ ಚುನಾವಣೆಯಲ್ಲಿ ಮೋದಿ ಸ್ಪರ್ಧೆ ಮಾಡುತ್ತಿಲ್ಲ. ಬಿಜೆಪಿ ಸ್ಪರ್ಧೆ ಮಾಡುತ್ತಿಲ್ಲ. ದೇಶದ ಜನರೇ ಮುಂದೆ ಬಂದಿದ್ದಾರೆ.. ಅವರ 10 ವರ್ಷಗಳ ಅನುಭವದ ಆಧಾರದಲ್ಲಿ ನಿರ್ಧಾರ ಮಾಡಿದ್ದಾರೆ. ಈ ಚುನಾವಣೆಯ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆಗಿನ ಸಂದರ್ಶನದಲ್ಲಿ ಮೋದಿ ಹೇಳಿದ್ದಾರೆ.
ಕರ್ನಾಟಕ್ಕೆ ತೆರಿಗೆ ಅನ್ಯಾಯ ಆರೋಪ, ವಿಶೇಷ ಸಂದರ್ಶನದಲ್ಲಿ ಅಂಕಿ ಅಂಶ ತೆರೆದಿಟ್ಟ ಪ್ರಧಾನಿ ಮೋದಿ!
ಇದೇ ವೇಳೆ ಮೋದಿ, ಸದ್ಯ ದೇಶದಲ್ಲಿರುವ ವಾತಾವರಣದ ಕುರಿತು ಮಾತನಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ತುಂಬಾ ಸಮಯದಿಂದ ಕೆಲಸ ಮಾಡಿದ್ದೇನೆ. ಸಂಘಟನೆಯ ಕಾರ್ಯಕರ್ತನಾಗಿದ್ದೆ. ವಾತಾವರಣ ನನಗೆ ಅರ್ಥವಾಗುತ್ತದೆ. ಆದರೆ ನಾನು ಜ್ಯೋತಿಷಿ ಅಲ್ಲ. ಜನರ ಭಾವನೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಇದರ ಆಧಾರದ ಮೇಲೆ ನಾನು ಹೇಳುತ್ತೇನೆ. ಚುನಾವಣೆಯ ಸಮಯದಲ್ಲಿ ಓಡಾಡುವ ಮನುಷ್ಯ ನಾನನಲ್ಲ. ವಾರದಲ್ಲಿ ಪ್ರತಿ ಶನಿವಾರ ಬಾನುವಾರ ಎಲ್ಲಿಗಾದರೂ ಹೋಗುತ್ತೇನೆ. ಸರ್ಕಾರದ ಕೆಲಸಗಳನ್ನು ಜನರ ಮಧ್ಯೆ ಮಾಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಸದ್ಯ ಇರುವ ವಾತಾವರಣ ಚುನಾವಣೆ ಘೋಷಣೆಯಾದ ಬಳಿಕ ಸೃಷ್ಟಿಯಾಗಿದ್ದಲ್ಲ. ಕಳೆದ 10 ವರ್ಷ ನಿರಂತವಾಗಿ ಜನರ ಬೆಂಬಲ ಅಭೂತಪೂರ್ವವಾಗಿ ಹೆಚ್ಚಾಗಿದೆ. ನೀವು ಸಾಮಾನ್ಯ ಮತದಾರ ಎಂದುಕೊಳ್ಳಿ. ನೀವು ಮತಚಲಾಯಿಸೋಕೆ ಹೋಗುವ ಮುನ್ನ ಏನು ಯೋಚನೆ ಮಾಡುತ್ತೀರಿ? ದೇಶವನ್ನು ಯಾರಿಗೆ ಕೊಡಬೇಕು ಅನ್ನೋದು? ಯಾರ ಕೈಯನ್ನ ಬಲಪಡಿಸಬೇಕು ಅನ್ನೋದು ಮತದಾರರ ಯೋಚನೆಯಾಗಿರುತ್ತದೆ ಎಂದು ಮೋದಿ ಹೇಳಿದ್ದಾರೆ.
ಎರಡನೇಯದ್ದಾಗಿ, ನಮ್ಮ ಜೊತೆ ಯಾರಿದ್ದಾರೆ? ನಮ್ಮ ಯೋಚನೆಗಳು ಏನು? ನಮ್ಮ ಅಜೆಂಡಾಗಳು ಏನು? ಎರಡನೇ ಹಂತದಲ್ಲಿ ಇದನ್ನೆಲ್ಲಾ ನೋಡ್ತಾರೆ. ಇವರು ಹೇಗೆ ಕೆಲಸ ಮಾಡ್ತಾರೆ? ಇವರ ಅನುಭವ ಏನೇನು ಇದನ್ನೆಲ್ಲಾ ನೋಡ್ತಾರೆ. ಮತ್ತೊಂದು ಈ ಚುನಾವಣೆಯ ಸದ್ಭಾಗ್ಯ ಏನೆಂದರೆ. 2014ರಲ್ಲಿ ಮತದಾರನಿಗೆ ಹೋಲಿಕೆ ಮಾಡಿ ನಿರ್ಧರಿಸೋಕೆ ಕಡಿಮೆ ಅವಕಾಶಗಳಿದ್ವು. ಸಿಟ್ಟಿನಲ್ಲಿ ಮೋದಿ ಕರೆತರಬೇಕು ಎಂದು ನಿರ್ಧರಿಸಿದ್ರು. ಆದ್ರೆ ಈಗ ಹೋಲಿಕೆ ಮಾಡೋಕೆ ಅವಕಾಶಗಳಿವೆ.. ಅವರು ಹೀಗೆ ಮಾಡ್ತಿದ್ರು.. ಮೋದಿ ಹೀಗೆ ಮಾಡ್ತಿದ್ದಾರೆ.. ಅವರು ಈ ತಪ್ಪು ಮಾಡ್ತಿದ್ರು... ಮೋದಿ ಈ ತಪ್ಪು ಮಾಡುತ್ತಿಲ್ಲ.. ಅವರು ಈ ಕೆಟ್ಟ ಕೆಲಸ ಮಾಡ್ತಿದ್ರು.. ಮೋದಿ ಇದನ್ನ ಮಾಡುತ್ತಿಲ್ಲ.. ಈ ಹೋಲಿಕೆಗಳನ್ನ ಮಾಡಿದ ಮೇಲೆ ಜನರಿಗೆ ಅರ್ಥವಾಗುತ್ತೆ.. ನನಗೆ ಅವರ ಕಣ್ಣಲ್ಲಿ ಪ್ರೀತಿಯನ್ನ ನೋಡುತ್ತೇನೆ, ಆಕರ್ಷಣೆಯನ್ನ ನೋಡುತ್ತೇನೆ.. ಹಾಗೂ ಅವರ ಕಣ್ಣಲ್ಲಿನ ಜವಾಬ್ದಾರಿ ಸಹ ನೋಡುತ್ತೇನೆ.. ಆ ಜವಾಬ್ದಾರಿ ಹೇಳುತ್ತೆ ಮೋದಿ ಜೀ ಈ ಚುನಾವಣೆ ನಾವು ಗೆಲ್ಲುತ್ತೇವೆ.. ನೀವು ಚಿಂತೆ ಮಾಡಬೇಡಿ.. ಶಾಂತವಾಗಿರಿ ಅನ್ನೋ ಸಂದೇಶ ಸಿಗುತ್ತಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.