ತ್ರಿಪುರ ಬದಲಾಗಿದೆ, ಕೇರಳ ಬದಲಾವಣೆಯತ್ತ ದಾಪುಗಾಲಿಡುತ್ತಿದೆ, ಸಂದರ್ಶನದಲ್ಲಿ ಮೋದಿ ನೀಡಿದ್ರು ಸುಳಿವು!
3-4 ದಶಕಗಳಿಂದ ಎಡಪಕ್ಷ ಸರ್ಕಾರವಿದ್ದ ತ್ರಿಪುರಾದಲ್ಲಿ ಇದೀಗ ಬಿಜೆಪಿ ಸರ್ಕಾರ ಅಭಿವೃದ್ಧಿ ಮಾಡಿ ತೋರಿಸಿದೆ. ಕೇರಳದಲ್ಲಿ ನಮ್ಮ ಕಾರ್ಯಕರ್ತರ ಹತ್ಯೆಯಾದರೂ ಭಾರತ ಮಾತೆ ಸೇವೆ ಮಾಡುತ್ತಿದ್ದೇವೆ. ಕೇರಳ ಕೂಡ ಬದಲಾಗಲಿದೆ ಅನ್ನೋ ಸುಳಿವನ್ನು ಮೋದಿ ಏಷ್ಯಾನೆಟ್ ಸುವರ್ಣನ್ಯೂಸ್ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
ನವದೆಹಲಿ(ಏ.20) ಅಭಿವೃದ್ಧಿಯ ಅಜೆಂಡಾ ಬಿಜೆಪಿಯ ಅತೀ ದೊಡ್ಡ ಶಕ್ತಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೂರು ನಾಲ್ಕು ದಶಕಗಳಿಂದ ತ್ರಿಪುರಾದಲ್ಲಿ ಎಡಪಕ್ಷಗಳೇ ಆಡಳಿತ ನಡೆಸಿತ್ತು. ಆದರೆ ನಮ್ಮ ಪಕ್ಷ ಆಡಳಿತಕ್ಕೆ ಬಂದು ತ್ರಿಪುರಾವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿ ಜನಸಂಘದ ಕಾಲದಿಂದಲೂ ನಾವು ದೇಶದ ಸೇವೆ ಮಾಡೋಕೆ ಬಯಸುತ್ತೇವೆ. ದೇಶದ ಪ್ರತಿ ಭಾಗದಲ್ಲೂ ಸಂಘಟನೆ ಇದೆ. ರಾಜಕೀಯದಲ್ಲಿ ಲಾಭವಾಗೋ ಕಡೆ ಕೆಲಸ ಮಾಡು, ಎಲ್ಲಿ ಲಾಭವಾಗಲ್ಲ ಅಲ್ಲಿ ಕೆಲಸ ಮಾಡಬೇಡ ಅನ್ನೋ ಸಿದ್ಧಾಂತ ನಮ್ಮದಲ್ಲ. 1967ರಲ್ಲಿ ಜನಸಂಘದ ಅತಿದೊಡ್ಡ ರಾಷ್ಟ್ರೀಯ ಅಧಿವೇಶನ ಕೇರಳದಲ್ಲಿ ನಡೆದಿತ್ತು. ನಮಗೆ ಕೇರಳ ಅಧಿಕಾರಕ್ಕೆ ಬರಬೇಕು ಅನ್ನೋ ಜಾಗ ಅಲ್ಲ. ನಮಗೆ ಕೇರಳ ಕೂಡ ಸೇವೆ ಸಲ್ಲಿಸೋ ಪ್ರದೇಶ. ಅಲ್ಲಿಯೂ ನಾವು ಕೆಲಸ ಮಾಡುತ್ತೇವೆ. ಮೊದಲಿನಿಂದಲೂ ನಾವು ಅದೇ ಉತ್ಸಾಹದಲ್ಲಿ ಕೆಲಸ ಮಾಡ್ತಿದ್ದೇವೆ. ನಮ್ಮ ಎಷ್ಟೋ ಕಾರ್ಯಕರ್ತರಿಗೆ ಗುಂಡೇಟು ಬಿದ್ದಿದೆ. ರಾಜಕೀಯ ಕೊಲೆಗಳಾಗಿದೆ. ಇದಾದ ಮೇಲೂ ನಾವು ಸೇವೆ ಸಲ್ಲಿಸುತ್ತಿದ್ದೇವೆ. ಭಾರತ ಮಾತೆ ಸೇವೆ ಮಾಡುತ್ತೇವೆ. ನಮ್ಮ ಸಂಘಟನೆಯವರ ಮೇಲೆ ಕೇಸ್ಗಳಿವೆ. ಹತ್ಯೆ ಮಾಡಿದ್ದಾರೆ. ಕೆಲವರು ಜೈಲಿನಲ್ಲಿದ್ದಾರೆ. ನಮಗೆ ಕಚ್ ಆಗಿರಲಿ, ಗುವಾಹಟಿ, ಕಾಶ್ಮೀರ, ಕನ್ಯಾಕುಮಾರಿ ಪ್ರತಿಯೊಂದು ನಮ್ಮ ದೇಶದ ಭಾಗಗಳೇ ಎಂದು ಮೋದಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಶೇಷ ಸಂದರ್ಶನಲ್ಲಿ ಮೋದಿ ಹೇಳಿದ್ದಾರೆ.
ಅಧಿಕಾರ ಚಲಾಯಿಸಿಲ್ಲ, ಜನರ ಸೇವೆ ಮಾಡಿದ್ದೇವೆ, 2024ರ ಅಭೂತಪೂರ್ವ ಗೆಲು ...
ಎರಡನೇ ವಿಷಯ, ನೀವು ತ್ರಿಪುರಾ ನೋಡಿರಬಹುದು. 3-4 ದಶಕಗಳಿಂದ ಎಡಪಕ್ಷಗಳ ಆಡಳಿತವಿತ್ತು. ನಮ್ಮ ಪಕ್ಷವೇ ಅಲ್ಲಿರಲಿಲ್ಲ. ಈಗ ನೋಡಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಗೊತ್ತಾಯ್ತು. ಈಜನ ಇಷ್ಟು ದಿನ ಕುಂಟುತ್ತಿದ್ರು ಅಂತ. ತ್ರಿಪುರಾದಲ್ಲಿ ಬಿಜೆಪಿ ಒಳ್ಳೆಯ ಕೆಲಸಗಳನ್ನ ಮಾಡಿದೆ. ಮತ್ತೆ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದಿದ್ದಾರೆ.
ಕೇರಳದಲ್ಲಿ ಅದೆಷ್ಟು ಭ್ರಷ್ಟಾಚಾರದ ಗಂಧವಿದೆ ಇದೆ ಅಂದ್ರೆ ಅಲ್ಲಿನ ವಾತಾವರಣವನ್ನೇ ಆ ರೀತಿ ಮಾಡಿಬಿಟ್ಟಿದ್ದಾರೆ. ಅಲ್ಲಿಂದ ಕೆಲವು ವಿಚಾರಗಳು ಹೊರಗೆ ಬರೋಕೆ ಬಿಡೋದೇ ಇಲ್ಲ. ಚುನಾವಣೆ ಪ್ರಚಾರಕ್ಕೆ ಅಲ್ಲಿಗೆ ಹೋದಾಗ, ಸಹಕಾರಿ ಸಂಘಗಳ ಕುರಿತು ಇಷ್ಟೇ ಹೇಳಿದ್ದು. ಜನಸಾಮಾನ್ಯರ ಜತೆ ತುಂಬಾ ದೊಡ್ಡ ಅಪರಾಧ ಮಾಡ್ತಿದ್ದಾರೆ. ಇದನ್ನ ಕ್ಷಮಿಸೋಕೆ ಆಗಲ್ಲ. ಬಡ ಕುಟುಂಬಗಳು ಬ್ಯಾಂಕ್ನಲ್ಲಿ ಹಣ ಇಡ್ತಾರೆ, ಹೆಚ್ಚು ಬಡ್ಡಿ ಸಿಗುತ್ತೆ ಅಂತ. ಅವರ ಪ್ರಕಾರ ಬ್ಯಾಂಕ್ನಲ್ಲಿ ಹಣವಿಟ್ರೆ, ಮಗಳು ದೊಡ್ಡವಳಾದ್ಮೇಲೆ ಮದುವೆ ಮಾಡಬಹುದು ಅಂತ. ತುಂಬಾ ಕಷ್ಟಪಟ್ಟು ಹಣ ಕೂಡಿಟ್ಟಿರ್ತಾರೆ ಅಲ್ವಾ. ಮೀನುಗಾರರ ಹಣ, ರೈತರ ಹಣ, ವ್ಯಾಪಾರಿಗಳ ಹಣ. ಅಲ್ಲಿ 300 ಸಹಕಾರಿ ಬ್ಯಾಂಕ್ಗಳನ್ನ ಎಡಪಂಥೀಯರು ನಡೆಸ್ತಿದ್ದಾರೆ. ಸುಮಾರು ಒಂದು ಲಕ್ಷ ಕೋಟಿ ಜನಸಾಮಾನ್ಯರು ಹಣ ಇಟ್ಟಿದ್ದಾರೆ. ಈ ಬ್ಯಾಂಕ್ ನಡೆಸುವವರು ಆ ಹಣದಲ್ಲಿ ದೊಡ್ಡ ದೊಡ್ಡ ಆಸ್ತಿ ಮಾಡಿದ್ದಾರೆ. ಒಂದು ಬ್ಯಾಂಕ್ನಲ್ಲಿ ಸುಮಾರು 90 ಕೋಟಿ ಆಸ್ತಿಯನ್ನ ವಶಕ್ಕೆ ಪಡೆಯಲಾಗಿದೆ. ನಾನು ಕಾನೂನು ಸಲಹೆ ಪಡೀತಾಯಿದ್ದೇನೆ. ಈ 90 ಕೋಟಿ ಹಣವನ್ನ ಜನರಿಗೆ ವಾಪಸ್ ಕೊಡೋದು ಹೇಗೆ..? ನಾನು ಇ.ಡಿಗೂ ಒತ್ತಾಯಿಸುತ್ತಿದ್ದೇನೆ. ನಾವು ಕೊಡೋಕೆ ಶುರು ಮಾಡಿದ್ದೇವೆ. ಯಾರು ಲೂಟಿ ಮಾಡಿದ್ದಾರೆ. ಅವರ ಆಸ್ತಿಗಳನ್ನ ವಶಕ್ಕೆ ಪಡೆಯುತ್ತಿದ್ದೇವೆ. ಇದುವರೆಗೂ ನಾವು ಸುಮಾರು 17 ಸಾವಿರ ಕೋಟಿ ಹಣವನ್ನ ವಶಕ್ಕೆ ಪಡೆದು ಸಂಬಂಧಿಸಿದವರಿಗೆ ವಾಪಸ್ ನೀಡಿದ್ದೇವೆ. ಕೇರಳದ 300 ಬ್ಯಾಂಕ್ಗಳ ಒಂದು ಲಕ್ಷ ಹಣವಿದೆಯಲ್ಲ. ಇದೇನು ಸಣ್ಣ ಮೊತ್ತವಲ್ಲ, ಎಲ್ಲಾ ಬಡವರದ್ದು. ನಾನು ಇದನ್ನ ಗಂಭೀರವಾಗಿ ಪರಿಗಣಿಸಿದ್ದೇನೆ. ಇದು ನಮಗೆ ಚುನಾವಣೆ ವಿಷಯವಲ್ಲ. ಸಾಮಾನ್ಯ ನಾಗರೀಕರ ಜೀವನದ ವಿಷಯ ಎಂದು ಮೋದಿ ಹೇಳಿದ್ದಾರೆ.