Asianet Suvarna News Asianet Suvarna News

ಹುತಾತ್ಮ ಯೋಧರಿಗೆ ನಮನ: ಸ್ವಾತಂತ್ರ್ಯ ದಿನಾಚರಣೆಗೆ ಮಹತ್ವದ ಸಂದೇಶ ಸಾರಿದ ರಾಷ್ಟ್ರಪತಿ!

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಹತ್ವದ ಸಂದೇಶ ಸಾರಿದ್ದಾರೆ. ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಹೋರಾಡುತ್ತಿರುವ ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಚೀನಾ ಗಡಿ ಸಂಘರ್ಷದಲ್ಲಿ ಹುತಾತ್ಮರಾದ 20 ಭಾರತೀಯ ಯೋಧರಿಗೆ ನಮನ ಸಲ್ಲಿಸಿದ್ದಾರೆ. ರಾಮನಾಥ್ ಕೋವಿಂದ್ ಭಾಷಣದ ಪ್ರಮುಖ ಅಂಶಗಳ ವಿವರ ಇಲ್ಲಿದೆ.
 

President Ram Nath Kovind addressed the nation On the eve of 74th Independence Day
Author
Bengaluru, First Published Aug 14, 2020, 7:54 PM IST

ನವದೆಹಲಿ(ಆ.14): ಕೊರೋನಾ ವೈರಸ್ ಸಾಂಕ್ರಾಮಿಕ ಸೋಂಕಿನ ನಡುವೆ ಆರೋಗ್ಯ ಗಮನದಲ್ಲಿಟ್ಟುಕೊಂಡು  ಭಾರತೀಯರು ಸ್ವಾತಂತ್ರ್ಯ ದಿನಾಚರಣೆ ಆಚರಿಸಬೇಕು ಎಂದು ರಾಷ್ಟ್ರಪ್ರತಿ ರಾಮನಾಥ್ ಕೋವಿಂದ್ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಈ ಬಾರಿ ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆ ಇರುವುದಿಲ್ಲ.  ಕೊರೋನಾ ವೈರಸ್ ಕಾರಣ  ಸ್ವಾತಂತ್ರ್ಯ ದಿನಾಚರಣೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಬೇಕಿದೆ ಎಂದು ಮನವಿ ಮಾಡಿದರು. 

ಸೇನಾಪಡೆ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ!

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೇಶವನ್ನುದ್ದೇಶಿ ಮಾತನಾಡಿದ ರಾಮನಾಥ್ ಕೋವಿಂದ್, ಕೊರೋನಾ ವೈರಸ್ ವಿರುದ್ಧ ಹೋರಾಟ, ನವ ಭಾರತ ನಿರ್ಮಾಣ, ಹೊಸ ಶಿಕ್ಷಣ ನೀತಿ, ಸಾಂಸ್ಕೃತಿಕ, ಪಾರಂಪರಿಕ ಹಾಗೂ ಐತಿಹಾಸಿಕ ಪರಂಪರೆಗಳ ಪುನರ್ ಸ್ಥಾಪನೆ ಸೇರಿದಂತೆ ಹಲವು ವಿಚಾರಗಳ ಕುರಿತು ಕೋವಿಂದ್ ಬೆಳಕು ಚೆಲ್ಲಿದ್ದಾರೆ. 

ರಾಷ್ಟ್ರಪತಿ ಕೋವಿಂದ್ ಭೇಟಿಯಾದ ಮೋದಿ: ಕುತೂಹಲ ಮೂಡಿಸಿದೆ ಭೇಟಿ!.

ಪ್ರತಿ ವರ್ಷ ಆಗಸ್ಟ್ 15 ರಂದು ನಾವು ಧ್ವಜಾರೋಹಣ ಮಾಡೋ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆರಂಭಿಸುತ್ತೇವೆ. ಇದೇ ವೇಳೆ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತೇವೆ.  ಸ್ವಾತಂತ್ರ್ಯ ಸಂಗ್ರಾಮ ಆದರ್ಶದಲ್ಲೇ ಆಧುನಿಕ ಭಾರತ ನಿರ್ಮಾಣವಾಗುತ್ತಿದೆ. ಹೊಸ ಪರಿಕಲ್ಪನೆ, ಹೊಸ ಯೋಜನೆ ಮೂಲಕ ನವ ಭಾರತಕ್ಕೆ ಅಡಿಪಾಯ ಹಾಕಲಾಗಿದೆ ಎಂದು ಕೋವಿಂದ್ ಹೇಳಿದರು. 

10 ಕೋಟಿ ಕಾರು, 1.5 ಲಕ್ಷ ರುಪಾಯಿ ಸಂಬಳ ಕೈಬಿಟ್ಟ ರಾಷ್ಟ್ರಪತಿ!..

ಕಳೆದ ಕೆಲ ತಿಂಗಳುಗಳಿಂದ ಭಾರತ ಕೊರೋನಾ ವಿರುದ್ಧ ಹೋರಾಡುತ್ತಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿಗಳು, ಪೊಲೀಸರು, ಸ್ವಯಂ ಸೇವಕರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಈ ಹೋರಾಟದಲ್ಲಿ ಭಾಗಿಯಾಗಿರುವ ಎಲ್ಲರಿಗೂ ನನ್ನ ಅಭಿನಂದನೆಗಳು. ಆದರೆ ಈ ಹೋರಾಟದಲ್ಲಿ ಹಲವರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.

ಮಾಸ್ಕ್ ಹೊಲಿದು ಬಡವರಿಗೆ ವಿತರಣೆ, ರಾಷ್ಟ್ರಪತಿ ಕೋವಿಂದ್ ಪತ್ನಿ ಕಾರ್ಯಕ್ಕೆ ಶ್ಲಾಘನೆ!.

ಕೊರೋನಾ ಕಾರಣ ಹಲವರು ಕೆಲಸ ಕಳೆದುಕೊಂಡಿದ್ದಾರೆ. ದಿನಗೂಲಿ ನೌಕರರು ಆದಾಯವಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸರ್ಕಾರ ಉಚಿತ ರೇಶನ್ ನೀಡುವ ಯೋಜನೆಯನ್ನು ನವೆಂಬರ್ 2020ರ ವರೆಗೆ ವಿಸ್ತರಿಸಲಾಗಿದೆ.  ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿದೆ. ಇದರ ನಡುವೆ ನಾಗರೀಕರ ಸಹಕಾರ ಕೂಡ ಅತೀ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಕೊರೋನಾ ನಿಯಂತ್ರಣದಲ್ಲಿ ಯಶಸ್ಸು ಸಾಧಿಸುತ್ತಿದೆ ಎಂದರು. 

ಎಲ್ಲರೂ ಈ ಮಹಾಮಾರಿ ಕೊರೋನಾ ವೈರಸ್‌ನಿಂದ ಸುರಕ್ಷಿತರಾಗಿರಬೇಕು. ಇದರ ನಡುವೆ ಹಲವು ರಾಜ್ಯಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಸರ್ಕಾರ, ಸಂಘ ಸಂಸ್ಥೆಗಳು, ಭದ್ರತಾ ಪಡೆಗಳು ಸೇರಿದಂತೆ ಹಲವರು ನೆರವಿಗೆ ಧಾವಿಸಿದ್ದಾರೆ. ರಕ್ಷಣಾ ಪಡೆಗಳು ಕುಟುಂಬಗಳನ್ನು ಆಪತ್ತಿನಿಂದ ಪಾರುಮಾಡುತ್ತಿದೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನಾವೆಲ್ಲ ಜೊತೆಯಾಗಿ, ಒಗ್ಗಟ್ಟಾಗಿ ನಿಲ್ಲಬೇಕು ಎಂದಿದ್ದಾರೆ.  

ಗಡಿ ಪ್ರದೇಶದಲ್ಲಿ ಭಾರತಕ್ಕಾಗಿ ಹೋರಾಡಿದ 20 ವೀರ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುತ್ತೇನೆ.  ನಮ್ಮ ಸೇನೆ, ಪೊಲೀಸ್, ಸೇರಿದಂತೆ ಭದ್ರತಾ ಪಡೆಯ ಮೇಲೆ ನನಗೆ ಹೆಮ್ಮೆ ಇದೆ. ಈ ದೇಶ ಗಡಿಯಲ್ಲಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿರುವ ಎಲ್ಲಾ ವೀರ ಯೋಧರಿಗೆ ಸಲಾಂ ಎಂದು ಕೋವಿಂದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. 
 
ಕೊರೋನಾ ವೈರಸ್ ಕಾರಣ ಕುಸಿದಿರುವ ಆರ್ಥಿಕತೆ ಮೇಲಕ್ಕೆತ್ತಲು ಕೇಂದ್ರ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ.  ರೈತರು, ಕೃಷಿಕರಿಗೆ ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ.  ಪ್ರಕೃತಿಗೆ ವಿರುದ್ಧವಾಗಿ ಹೋಗದೆ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿದೆ. ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದರು. 

ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿಕೊಂಡು ಹೊಸ ಭಾರತ ನಿರ್ಮಾಣ ಮಾಡಬೇಕಿದೆ. ಕೊರೋನಾ ವೈರಸ್ ಲಾಕ್‌ಡೌನ್, ಅನ್‌ಲಾಕ್ ಸಮಯದಲ್ಲಿ ಶಿಕ್ಷಣ, ಕಚೇರಿ ಕೆಲಸಗಳು, ಸಭೆ ಸಮಾರಂಭಗಳು ತಂತ್ರಜ್ಞಾನ ಬಳಸಿಕೊಂಡು ನಡೆದಿದೆ.  ಉಪಯುಕ್ತ ರೀತಿಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ.  ಯುವ ಜನಾಂಗದಲ್ಲಿ ಭಾರತದ ಭವಿಷ್ಯ ಸುರಕ್ಷಿತ ಅನ್ನೋ ವಿಶ್ವಾಸ ನನಗಿದೆ ಎಂದು ಕೋವಿಂದ್ ಭರವಸೆ ವ್ಯಕ್ತಪಡಿಸಿದ್ದಾರೆ. 

ಕೊರೋನಾ ವೈರಸ್ ಕಾರಣ ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಕುರಿತು ಚಿಂತಾಕ್ರಾಂತರಾಗಿದ್ದಾರೆ. ಈ ರೀತಿಯ ಪರಿಸ್ಥಿತಿಗಳು ಶಾಶ್ವತವಲ್ಲ. ಹೀಗಾಗಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಯುವಕರು, ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ.  ಯಾವುದೇ ರಾಷ್ಟ್ರವನ್ನು ಬಲಿಷ್ಠ ಮಾಡಲು ಯುವಕರಿಗೆ ಸುಶಿಕ್ಷಿತರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಶಿಲಾನ್ಯಾಸ ಹೆಮ್ಮೆಯ ಹಾಗೂ ಐತಿಹಾಸಿಕ ಕ್ಷಣವಾಗಿದೆ. ಈ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು. 

 

Follow Us:
Download App:
  • android
  • ios