ನವದೆಹಲಿ(ಜು. 05): ಕೊರೋನಾತಂಕ ಹಾಗೂ ಚೀನಾ ಭಾರತದ ನಡುವಿನ ಸಂಘರ್ಷದ ನಡುವೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಸದ್ಯಯ ಭಾರೀ ಕುತೂಹಲ ಮೂಡಿಸಿದೆ. 

ಸದ್ಯ ದೇಶಾದ್ಯಂತ ಕೊರೋನಾ ಅಟ್ಟಹಾಸ ಮುಂದುವರೆದಿದೆ. ಸೋಂಕಿತರ ಹಾಗೂ ಸಾವನ್ನಪ್ಪುತ್ತಿರುವವರ ಸಂಖ್ಯೆಯೂ ಹೆಚ್ಚಿದೆ. ಅತ್ತ ಲಡಾಖ್ ಗಡಿಯಲ್ಲಿ ಚೀನಾ ಕುತಂತ್ರವೂ ಮುಂದುವರೆದಿದೆ. ಹೀಗಿರಿವಾಗ ಕೋವಿಂದ್ ಮೋದಿ ಭೇಟಿಯಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆನ್ನಲಾಗಿದೆ. 

ಇನ್ನು ಈ ಬಗ್ಗೆ ರಾಷ್ಟ್ರಪತಿ ಭವನ ರಾಷ್ಟ್ರಪತಿ ಭವನ ಸ್ಪಷ್ಟನೆ ನೀಡಿದ್ದು,  ಪ್ರಸ್ತುತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆಂದು ತಿಳಿಸಿದೆ.