ದೆಹಲಿ(ಏ.23); ಕೊರೋನಾ ವೈರಸ್ ಬರದಂತೆ ತಡೆಯಲು ಸಾಮಾಜಿಕ ಅಂತರ, ಶುಚಿತ್ವ ಜೊತೆಗೆ ಮುಖಕ್ಕೆ ಮಾಸ್ಕ್ ಅವಶ್ಯಕ. ಆದರೆ ಲಾಕ್‌ಡೌನ್‌ನಿಂದ ಒಂದು ಹೊತ್ತಿನ ಊಟಕ್ಕೆ ಪರದಾಡುವವರಿಗೆ ಮಾಸ್ಕ್ ಖರೀದಿ ಅಸಾಧ್ಯ. ಇದೀಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪತ್ನಿ ಸವಿತಾ ಕೋವಿಂದ್ ತಾವೇ ಖುದ್ದ ಮಾಸ್ಕ್ ಹೊಲಿದು ಬಡವರಿಗೆ ವಿತರಿಸುತ್ತಿದ್ದಾರೆ. ಇವರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಭಿವೃದ್ಧಿಯಲ್ಲಿ ದೇಶಕ್ಕೇ ಮಾದರಿ ಗುಜರಾತ್, ಕೊರೋನಾ ತಡೆಯುವಲ್ಲಿ ಹಿಂದೆ

ದೆಹಲಿಯಲ್ಲಿನ ಬಡವರು, ನಿರ್ಗತಿಕರಿಗೆ ಸವಿತಾ ಕೋವಿಂದ್ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಖುದ್ದು ಮಾಸ್ಕ್ ತಯಾರಿಸಿ ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂಲಕ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಾವು ಪಾಲ್ಗೊಂಡಿದ್ದಾರೆ. 

ರಾಷ್ಟ್ರಪತಿ ನಿವಾಸದಲ್ಲಿ ಶಕ್ತಿ ಹಾಟ್‌ನಲ್ಲಿ ಸವಿತಾ ಕೋವಿಂದ್ ಖುದ್ದಾಗಿ ಮಾಸ್ಕ್ ಹೊಲಿಯುತ್ತಿದ್ದಾರೆ. ತಾವು ಮಾಸ್ಕ್ ಹಾಕಿಕೊಂಡು ಮಾಸ್ಕ್ ಹೊಲಿಯುತ್ತಿದ್ದಾರೆ. ಈ ಚಿತ್ರವನ್ನು ಕರ್ನಾಟಕ ಬಿಜೆಪಿ ಅಧೀಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಕೆಲವೇ ಕ್ಷಣಗಳಲ್ಲಿ ಸವಿತಾ ಕೋವಿಂದ್ ಕಾರ್ಯವನ್ನು ಶ್ಲಾಘಿಸಿದ್ದಾರೆ.

 

ಸವಿತಾ ಕೋವಿಂದ್ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಪ್ರತಿಕ್ರಿಯೆಗಳು ಇಲ್ಲಿವೆ.