ಮೌನಿ ಅಮಾವಾಸ್ಯೆಯಂದು ಪ್ರಯಾಗ್‌ರಾಜ್ ಕುಂಭಮೇಳದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಬರ್ತಾರೆ ಅಂತ ನಿರೀಕ್ಷೆ ಇದೆ. ಜನಸಂದಣಿ ತಪ್ಪಿಸಲು, ಸ್ಥಳೀಯ ಭಕ್ತರು 15 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಅಂತ ಸಂಪತ್ ರಾಯ್ ಮನವಿ ಮಾಡಿದ್ದಾರೆ.
ಅಯೋಧ್ಯೆ: ಈ ವರ್ಷ ಮೌನಿ ಅಮಾವಾಸ್ಯೆಯಂದು ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ 10 ಕೋಟಿಗೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಗಳಿವೆ. ಗಂಗೆಯಲ್ಲಿ ಸ್ನಾನ ಮಾಡಲು ಬರುವ ಭಕ್ತರ ದೊಡ್ಡ ಸಂಖ್ಯೆಯಿಂದಾಗಿ ತ್ರಿವೇಣಿ ಸಂಗಮದಲ್ಲಿ ಜನಸಂದಣಿ ಉಂಟಾಗಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್, ಸ್ಥಳೀಯ ಭಕ್ತರು 15 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಅಂತ ಮನವಿ ಮಾಡಿದ್ದಾರೆ. ಜನವರಿ 29 ಮೌನಿ ಅಮಾವಾಸ್ಯೆಯಂದು, ಲಕ್ಷಾಂತರ ಭಕ್ತರು ಕುಂಭಮೇಳದಲ್ಲಿ ಗಂಗೆಯಲ್ಲಿ ಸ್ನಾನ ಮಾಡಲು ಸಂಗಮದಲ್ಲಿ ಸೇರುತ್ತಾರೆ. ಈ ದಿನ 10 ಕೋಟಿ ಭಕ್ತರು ಆಗಮಿಸುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ. ಕುಂಭಮೇಳಕ್ಕೆ ಆಗಮಿಸಿದ ಭಕ್ತರು ಅಯೋಧ್ಯೆಯ ರಾಮಲಲ್ಲಾನ ದರ್ಶನ ಪಡೆಯಲು ಆಗಮಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ.
ಕಳೆದ ಕೆಲವು ದಿನಗಳಿಂದ ಕುಂಭಮೇಳದಿಂದಾಗಿ ಆಯೋಧ್ಯೆಗೆ ಆಗಮಿಸುವ ಭಕ್ತರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ರಾಮನಗರಿಯಲ್ಲೂ ಜನಸಂದಣಿ ಹಚ್ಚಾಗಿದೆ. ಜನವರಿ 29ರಂದು ಮೌನಿ ಅಮವಾಸ್ಯೆಯಾಗಿರುವ ಕಾರಣ ಸ್ಥಳೀಯರು ಸಹ ರಾಮ ಮಂದಿರಕ್ಕೆ ಆಗಮಿಸಿದ್ರೆ ಜನಸಂದಣಿ ಹೆಚ್ಚಾಗುವ ಸಾಧ್ಯತೆಗಳಿವೆ. ಏಕಕಾಲದಲ್ಲಿ ಕೋಟ್ಯಂತರ ಜನರು ಬಂದ್ರೆ ಭಕ್ತರಿಗೆ ರಾಮ ಲಲ್ಲಾ ದರ್ಶನ ಮಾಡಿಸುವುದು ಕಷ್ಟಕರವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸಂಪತ್ ರಾಯ್ ಹೇಳಿದ್ದಾರೆ.
ಅಮವಾಸ್ಯೆಯ ದಿನ ಸುಮಾರು 10 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಈ ದೊಡ್ಡ ಸಂಖ್ಯೆಯ ಜನರು ಅಯೋಧ್ಯೆಗೂ ಬರುತ್ತಿದ್ದಾರೆ, ಇದರಿಂದಾಗಿ ರಾಮ ನಗರಿಯಲ್ಲೂ ಜನಸಂದಣಿ ಹೆಚ್ಚಾಗಿದೆ. ಆದ್ದರಿಂದ ಸ್ಥಳೀಯ ಭಕ್ತಾದಿಗಳಿಗೆ ಮುಂದಿನ 15 ದಿನ ರಾಮ ಮಂದಿರಕ್ಕೆ ಬರಬೇಡಿ ಎಂದು ಸಂಪತ್ ರಾಯ್ ಮನವಿ ಮಾಡಿಕೊಂಡಿದ್ದಾರೆ. ಜನಸಂದಣಿ ಕಡಿಮೆಯಾದ ಬಳಿಕ ರಾಮಲಲ್ಲಾ ದರ್ಶನ ಪಡೆಯಬಹುದು ಎಂದು ಸಲಹೆಯನ್ನು ಸಹ ನೀಡಿದ್ದಾರೆ.
ಇದನ್ನೂ ಓದಿ: ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆ ರಾಮ ಮಂದಿರಕ್ಕೆ 3 ಲಿಫ್ಟ್ ಅಳವಡಿಕೆ
ಸಂಪತ್ ರಾಯ್ ಅವರ ಮನವಿ
ದೂರದಿಂದ ಬರುವ ಭಕ್ತರಿಗೆ ಸುಲಭವಾಗಿ ದರ್ಶನ ಪಡೆಯಲು, ಸ್ಥಳೀಯ ಭಕ್ತರು 15 ರಿಂದ 20 ದಿನಗಳ ನಂತರ ಅಯೋಧ್ಯೆಗೆ ಬರಬೇಕು ಎಂದು ಸಂಪತ್ ರಾಯ್ ಕೇಳಿಕೊಂಡರು. ಬಸಂತ್ ಪಂಚಮಿಯ ನಂತರ ಫೆಬ್ರವರಿಯಲ್ಲಿ ಹವಾಮಾನವು ಅನುಕೂಲಕರವಾಗಿರುತ್ತದೆ. ಇದರಿಂದ ಭಕ್ತರಿಗೆ ಪ್ರಯಾಣ ಸುಲಭವಾಗುತ್ತದೆ.
ಪ್ರಯಾಗ್‌ರಾಜ್ ನದಿ ತೀರಗಳಲ್ಲಿ ವ್ಯವಸ್ಥೆಗಳು
ಮೌನಿ ಅಮಾವಾಸ್ಯೆಯಂದು ಬರುವ ಕೋಟ್ಯಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಪ್ರಯಾಗ್‌ರಾಜ್‌ನಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ. 12 ಕಿ.ಮೀ. ವಿಸ್ತೀರ್ಣದಲ್ಲಿ ನಿರ್ಮಿಸಲಾಗಿರುವ 44 ನದಿ ತೀರಗಳಲ್ಲಿ ಸ್ನಾನದ ವ್ಯವಸ್ಥೆ ಪೂರ್ಣಗೊಂಡಿದೆ. ಇಲ್ಲಿ ಎಸ್‌ಡಿಎಂ, ತಹಶೀಲ್ದಾರ್, ನಾಯಬ್ ತಹಶೀಲ್ದಾರ್ ಮತ್ತು ಪಿಸಿಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ, ಮತ್ತು ಸಂಗಮದಲ್ಲಿ ಐಎಎಸ್-ಐಪಿಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇದನ್ನೂ ಓದಿ: Mysuru: ರಾಮಲಲ್ಲಾನ ಮೂರ್ತಿಗೆ ಬಳಸಿದ್ದ ಕೃಷ್ಣಶಿಲೆ ಸಿಕ್ಕ ಸ್ಥಳವಾದ ಆರೋಹಳ್ಳಿಯಲ್ಲಿ ನಿರ್ಮಾಣವಾಗಲಿದೆ ದೇವಸ್ಥಾನ
