ಭಕ್ತರ ಅನುಕೂಲಕ್ಕಾಗಿ ಅಯೋಧ್ಯೆ ರಾಮ ಮಂದಿರಕ್ಕೆ 3 ಲಿಫ್ಟ್ ಅಳವಡಿಕೆ
ರಾಮ ಮಂದಿರಕ್ಕೆ ಭಕ್ತರ ಅನುಕೂಲಕ್ಕಾಗಿ ಮಂದಿರದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಾಗುವುದು. ಅಂಗವಿಕಲರು ಮತ್ತು ವಿಐಪಿಗಳಿಗೆ ಪ್ರತ್ಯೇಕ ಲಿಫ್ಟ್‌ಗಳ ವ್ಯವಸ್ಥೆ ಇರಲಿದೆ.
ಅಯೋಧ್ಯೆ: ರಾಮ ಮಂದಿರಕ್ಕೆ ಬರುವ ಭಕ್ತರ ಅನುಕೂಲಕ್ಕಾಗಿ ಮಂದಿರದ ಟ್ರಸ್ಟ್ ದೇವಳದ ಮೊದಲನೇ ಅಂತಸ್ಥಿಗೆ 3 ಲಿಫ್ಟ್‌ಗಳನ್ನು ಅಳವಡಿಸಲಿದೆ. ದೇಗುಲ ಮೂರು ಅಂತಸ್ತಿನದ್ದಾಗಿದ್ದು, ನೆಲಮಹಡಿಯಲ್ಲಿ ರಾಮನ ಗರ್ಭಗುಡಿಯಿದೆ. 1ನೇ ಮಹಡಿಯಲ್ಲಿ ರಾಮನ ದರ್ಬಾರ್ ಹಾಲ್ ಇದ್ದು, ಪ್ರಸ್ತುತ ಜನರು ಮೆಟ್ಟಿಲು ಹತ್ತಿಕೊಂಡು ದರ್ಬಾರ್ ಹಾಲ್‌ಗೆ ಹೋಗಬೇಕಾಗಿದೆ. ಇದು ಅಂಗವಿಕಲರಿಗೆ ಕಷ್ಟವಾಗಿರುವ ಕಾರಣ ಲಿಫ್ಟ್ ಅಳವಡಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಅಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, 2 ಲಿಫ್ಟ್‌ಗಳನ್ನು ವಿಕಲ ಚೇತನರಿಗೆ ಮತ್ತೊಂದು ಲಿಫ್ಟ್ ಅನ್ನು ವಿಐಪಿಗಳು, ಸಾಧು ಸಂತರಿಗಾಗಿ ಅಳವಡಿಸಲಾಗುತ್ತಿದೆ ಎಂದರು.
ರಾಮ್ ಚರಣ್ 256 ಅಡಿ ‘ಗೇಮ್‌ಚೇಂಜರ್’ ಕಟೌಟ್
ವಿಜಯವಾಡ: ಖ್ಯಾತ ನಟ ರಾಮ್ ಚರಣ್ ಅವರ ಬಹುನಿರೀಕ್ಷಿತ ಗೇಮ್ ಚೇಂಜರ್ ಚಲನಚಿತ್ರ ಜ.10ಕ್ಕೆ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಅವರ 256 ಅಡಿ ಎತ್ತರದ ಬೃಹತ್ ಕಟೌಟ್ ಹಾಕಲಾಗಿದೆ. ಚಿತ್ರನಟನೊಬ್ಬನ ಅಭಿಮಾನದಿಂದ ಹಾಕಲಾಗಿರುವ ಈವರೆಗಿನ ಅತಿದೊಡ್ಡ ಕಟೌಟ್ ಇದು ಎಂದು ಹೇಳಲಾಗುತ್ತಿದೆ.ಆರ್‌ಆರ್‌ಆರ್ ಸಿನಿಮಾದ ಯಶಸ್ಸಿನ ನಂತರ ರಾಮ್ ಚರಣ್ ಅವರ ಬಹುನಿರೀಕ್ಷೆಯ ಚಿತ್ರ ಗೇಮ್ ಚೇಂಜರ್. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶಿಸುತ್ತಿದ್ದಾರೆ. ಜ.10ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಸಾಮಾಜಿಕ ಜಾಲತಾಣದಲ್ಲಿ ಕಟೌಟ್‌ನ ಫೋಟೋಗಳು ಹರಿದಾಡುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗೇಮ್ ಚೇಂಜರ್‌ನಲ್ಲಿ ರಾಮ್ ಚರಣ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಈ ಚಿತ್ರದ ಹಿರೋಯಿನ್.
ವಿಮಾನ ದುರಂತಕ್ಕೆ ರಷ್ಯಾ ಕಾರಣ: ಅಜರ್ಬೈಜಾನ್ ಅಧ್ಯಕ್ಷ ಆರೋಪ
ಬಾಕು: 38 ಮಂದಿಯನ್ನು ಬಲಿ ಪಡೆದಿದ್ದ ಅಜರ್ಬೈಜಾನ್ ವಿಮಾನ ದುರಂತದ ಹಿಂದೆ ರಷ್ಯಾ ಕೈವಾಡ ಇದೆ ಎಂದು ಅಜರ್ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆಮ್ ಆರೋಪಿಸಿದ್ದಾರೆ. ‘ರಷ್ಯಾದ ಕ್ಷಿಪಣಿ ದಾಳಿಯಿಂದಲೇ ದುರಂತ ಸಂಭವಿಸಿದೆ. ಇದು ಉದ್ದೇಶಪೂರ್ವಕ ಅಲ್ಲದೇ ಇರಬಹುದು. ಆದರೂ ಅಪರಾಧವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ’ ಎಂದಿದ್ದಾರೆ. ಶನಿವಾರವಷ್ಟೇ ರಷ್ಯಾ ಅಧ್ಯಕ್ಷ ಪುಟಿನ್ ದುರಂತಕ್ಕೆ ಕ್ಷಮೆಯಾಚಿಸಿದ್ದರು. ಈ ಬೆನ್ನಲ್ಲೇ ಅಜರ್ಬೈಜಾನ್ ಅಧ್ಯಕ್ಷ ರಷ್ಯಾ ವಿರುದ್ಧ ಆರೋಪಿಸಿದ್ದಾರೆ..