Asianet Suvarna News Asianet Suvarna News

'ತುಂಬಾ ನೀರು ಇಟ್ಕೊಂಡಿರಿ, ಜೂನ್‌ 4ಕ್ಕೆ ಬೇಕಾಗುತ್ತೆ..' ಟೀಕೆ ಮಾಡುವವರ ಕಾಲೆಳೆದ ಪ್ರಶಾಂತ್‌ ಕಿಶೋರ್‌!

ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ 2019 ರ ಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟು ಸ್ಥಾನ ಪಡೆಯುತ್ತದೆ ಅಥವಾ ಅದಕ್ಕಿಂತ ಕೊಂಚ್ ಹೆಚ್ಚಿನ ಸ್ಥಾನ ಪಡೆಯುತ್ತದೆ ಎನ್ನುವ ತಮ್ಮ ಭವಿಷ್ಯವನ್ನು ಪ್ರಶಾಂತ್ ಕಿಶೋರ್ ಸಮರ್ಥಿಸಿಕೊಂಡಿದ್ದಾರೆ.

Prashant Kishor says Keep plenty of water handy on June 4 to critics san
Author
First Published May 23, 2024, 3:55 PM IST | Last Updated May 23, 2024, 7:42 PM IST

ನವದೆಹಲಿ (ಮೇ.23): ಮುಂಬರುವ ಲೋಕಸಭೆ ಚುನಾವಣೆಯ ಫಲಿತಾಂಶಗಳ ಮೌಲ್ಯಮಾಪನವನ್ನು ಟೀಕೆ ಮಾಡಿದ್ದಕ್ಕೆ ಚುನಾವಣಾ ತಂತ್ರಗಾರ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಕಿಶೋರ್‌ ಗುರುವಾರ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಜೂನ್‌ 4 ರಂದು ಚುನಾವಣೆಯ ಫಲಿತಾಂಶದ ದಿನ. ಆ ದಿನ ನೀವುಗಳು ನಿಮ್ಮ ಪಕ್ಕದಲ್ಲಿ ಸಾಕಷ್ಟು ನೀರುಗಳನ್ನು ಇರಿಸಿಕೊಂಡರೆ ಒಳ್ಳೆಯದು ಎಂದು ಹೇಳಿದ್ದಾರೆ. “ನೀರು ಕುಡಿಯುವುದು ಒಳ್ಳೆಯದು ಏಕೆಂದರೆ ಅದು ಮನಸ್ಸು ಮತ್ತು ದೇಹ ಎರಡನ್ನೂ ನಿಜರ್ಲೀಕರಣದಿಂದ ಕಾಪಾಡುತ್ತದೆ. ಈ ಚುನಾವಣೆಯ ಫಲಿತಾಂಶದ ಬಗ್ಗೆ ನನ್ನ ಮೌಲ್ಯಮಾಪನದಿಂದ ಗೊಂದಲಕ್ಕೊಳಗಾದವರು ಜೂನ್ 4 ರಂದು ಸಾಕಷ್ಟು ನೀರನ್ನು ಕೈಯಲ್ಲಿಟ್ಟುಕೊಂಡಿರಬೇಕು' ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ದಿ ವೈರ್‌ ವೆಬ್‌ಸೈಟ್‌ನ ಕರಣ್‌ ಥಾಪರ್‌ ಅವರ ಜೊತೆಗಿನ ಸಂದರ್ಶನದ ಕ್ಲಿಪ್‌ಅನ್ನು ವ್ಯಾಪಕವಾಗಿ ಹಂಚಿಕೊಂಡ ನಂತರ ಅವರು ಈ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ. 

'2021 ಮೇ 2 ಮತ್ತು ಪಶ್ಚಿಮ ಬಂಗಾಳ..' ಎಂದು ಅವರು ಟ್ವೀಟ್‌ ಮಾಡಿದ್ದಾರೆ. ಅಂದು ಅವರು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವನ್ನು ಅಂದಾಜು ಮಾಡಿ ಟ್ವೀಟ್‌ ಮಾಡಿದ್ದನ್ನು ಎಲ್ಲರಿಗೂ ನನಪಿಸಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಪ್ರಶಾಂತ್ ಕಿಶೋರ್ ಅವರು ಕರಣ್ ಥಾಪರ್ ಅವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿರುವುದನ್ನು ಕಾಣಬಹುದು, ಮಾಜಿ ರಾಜಕೀಯ ಸಲಹೆಗಾರರಿಗೆ ಅವರ ಚುನಾವಣಾ ಮೌಲ್ಯಮಾಪನದ ಬಗ್ಗೆ ಎಷ್ಟು ಖಚಿತತೆ ಇದೆ ಎಂದು ಪ್ರಶ್ನೆ ಮಾಡಲಾಗಿತ್ತು. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷವು ಸೋಲು ಕಾಣಲಿದೆ ಎನ್ನುವ ಅವರ ಭವಿಷ್ಯವನ್ನು ಉಲ್ಲೇಖಿಸಿ ಕರಣ್‌ ಥಾಪರ್‌ ಈ ಪ್ರಶ್ನೆ ಮಾಡಿದ್ದರು.

2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಷ್ಟೇ ಅಥವಾ ಅದಕ್ಕಿಂತ ಕೊಂಚ ಹೆಚ್ಚಿನ ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದು ತಾವು ಹೇಳಿರುವ ಭವಿಷ್ಯವನ್ನು ಪ್ರಶಾಂತ್‌ ಕಿಶೋರ್‌ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದಾರೆ. ಬಿಜೆಪಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನೀವು ನಿರೀಕ್ಷಿಸುತ್ತೀರಿ ಎಂದು ಕೇಳಿದಾಗ, "ಈ ಡೊಮೇನ್‌ನಲ್ಲಿ ನನಗೆ ಯಾವುದೇ ಅವಲೋಕನ ಮತ್ತು ಅನುಭವವಿದೆ, ಬಿಜೆಪಿಯ ಸಂಖ್ಯೆ 2019 ರಲ್ಲಿ ಇದ್ದ ಸ್ಥಳದಿಂದ ಭೌತಿಕವಾಗಿ ಇಳಿಯುವುದನ್ನು ನಾನು ನೋಡುತ್ತಿಲ್ಲ." ಎಂದು ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ಮೋದಿ ಘೋಷಿಸಿದ 400.. ಟಾರ್ಗೆಟ್ ಅಲ್ಲ, ಸ್ಟ್ರಾಟರ್ಜಿ ? ಲೋಕ ರಣಾಂಗಣದಲ್ಲಿ ಸಿದ್ಧವಾಗಿದೆ ವಿಚಿತ್ರ ಲೆಕ್ಕಾಚಾರ!

2019ರಲ್ಲಿ ಗೆದ್ದಷ್ಟೇ ಸ್ಥಾನವನ್ನು ಬಿಜೆಪಿ ಈ ಬಾರಿಯೂ ಗೆಲ್ಲಲಿದೆ. ಅಥವಾ ಅದಕ್ಕಿಂತ ಕೊಂಚ ಹಚ್ಚಿನ ಸ್ಥಾನವನ್ನು ಈ ಬಾರಿ ಗೆಲ್ಲಬಹುದು ಎಂದು ಪ್ರಶಾಂತ್‌ ಕಿಶೋರ್‌ ಭವಿಷ್ಯ ನುಡಿಸಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಮೂರು ಅಂಕಿಗಳನ್ನು ತಲುಪಲು ಸಾಧ್ಯವಿಲ್ಲ ಎಂದು ಕಿಶೋರ್ ಹೇಳಿದ್ದಾರೆ.  'ಸದ್ಯದ ಮಟ್ಟಿಗೆ ಕಾಂಗ್ರೆಸ್‌ ಎಲ್ಲಿದೆ ಎನ್ನುವುದು ನನಗೆ ಗೊತ್ತಲ್ಲ. ನನ್ನ ಪ್ರಕಾರ ಅವರು ಈ ಬಾರಿ 100 ಸ್ಥಾನಗಳನ್ನೂ ಕೂಡ ಮುಟ್ಟೋದು ಕಷ್ಟ. ಏಕೆಂದರೆ, ಹಾಗೇನಾದರೂ ಕಾಂಗ್ರೆಸ್‌ ಪಕ್ಷ 100 ಸ್ಥಾನಗಳನ್ನು ಗೆದ್ದಲ್ಲಿ ಬಿಜಿಪಿ 300 ಸ್ಥಾನಗಳನ್ನು ಗೆಲ್ಲೋದಿಲ್ಲ. ಲೆಕ್ಕಾಚಾರ ಇಷ್ಟು ಸರಳವಾಗಿದೆ' ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಬಹುದೇ ಎಂದು ಕೇಳಿದಾಗ, ಕಿಶೋರ್ ವ್ಯಂಗ್ಯವಾಡಿದರು, “ನನಗೆ ಗೊತ್ತಿಲ್ಲ. ಹಳ್ಳಕ್ಕೆ ತಳವಿಲ್ಲ' ಎಂದು ಹೇಳಿದ್ದಾರೆ.

ಬಿಜೆಪಿಗೆ 300 ಸೀಟ್‌ಗಳು ಸಿಗೋದು ಖಚಿತ ಎಂದ ಚುನಾವಣಾ ತಜ್ಞ ಪ್ರಶಾಂತ್‌ ಕಿಶೋರ್‌

Latest Videos
Follow Us:
Download App:
  • android
  • ios