Asianet Suvarna News Asianet Suvarna News

ಪ್ರಣಬ್ ದಾದಾನ ನೆನೆದ ಗಣ್ಯರು, ಸಾಮಾನ್ಯರಿಗೆ ರಾಷ್ಟ್ರಪತಿ ಭವನ ತೆರೆದಿರಿಸಿದ್ದ ನಾಯಕ

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನ/ ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಂಬನಿ/ ಪ್ರಣಬ್  ಕೊಡುಗೆ ಕೊಂಡಾಡಿದ ನಾಯಕರು/ ಪ್ರಣಬ್ ಜೀವನವೇ ಒಂದು ಮಾದರಿ

Pranab Mukherjee Dies at 84 PM Modi and celebs remember the Leader
Author
Bengaluru, First Published Aug 31, 2020, 7:05 PM IST

ನವದೆಹಲಿ(ಆ.31): ಮೆದುಳಿನ ಶಸ್ತ್ರ ಚಿಕಿತ್ಸೆ ಬಳಿಕ ಕೋಮಾಗೆ ಜಾರಿದ್ದ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನರಾಗಿದ್ದಾರೆ. ಆರ್ಮಿ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ಪ್ರಣಬ್ ಮುಖರ್ಜಿ ನಮ್ಮಿಂದ ದೂರವಾಗಿದ್ದು  ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.

"

ಶಿಕ್ಷಕ, ಪತ್ರಕರ್ತ, ರಾಜಕಾರಣಿ; ಪ್ರಣಬ್ ಜೀವನವೇ ಕುತೂಹಲಕಾರಿ

ಪ್ರಣಬ್ ಅವರನ್ನು ಸ್ಮರಿಸಿದ ನಾಯಕರು ಅವರು ದೇಶಕ್ಕೆ ನೀಡಿದ ಕೊಡುಗೆ ಸ್ಮರಿಸಿದ್ದಾರೆ . ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಪ್ರಣಬ್ ಮುಖರ್ಜಿಯನ್ನು ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಶಸ್ತ್ರಿ ಚಿಕಿತ್ಸೆ ಬಳಿಕ ಪ್ರಣಬ್ ಆರೋಗ್ಯ ತೀವ್ರ ಹದಗೆಟ್ಟಿತ್ತು. ಹಿರಿಯ ಮುತ್ಸದ್ಧಿ ಒಬ್ಬರು ದೇಶವನ್ನು ಅಗಲಿದ್ದಾರೆ.

ಭಾರತ ರತ್ನ ಪ್ರಣಬ್ ಮುಖರ್ಜಿ

ರಾಮನಾಥ್ ಕೋವಿಂದ ರಾಷ್ಟ್ರಪತಿ; ದೇಶದ ಮೊದಲ  ಪ್ರಜೆಯಾಗಿ  ರಾಷ್ಟ್ರಪತಿ ಭವನವನ್ನು ಸಾಮಾನ್ಯರಿಗೆ ತೆರೆದಿಟ್ಟಿದ್ದರು. ಎಲ್ಲರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದರು.

ಅಮಿತ್ ಶಾ:  ತಾಯಿ ನಾಡಿಗೆ ಪ್ರಣಬ್ ನೀಡಿದ ಸೇವೆಯನ್ನು ಯಾರೂ ಮರೆಯುವ ಹಾಗೆ ಇಲ್ಲ.  ಮೌಲ್ಯಗಳನ್ನು ಬಿಟ್ಟು ಪ್ರಣಬ್ ನಮ್ಮಿಂದ ದೂರ ಆಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ:  2014 ರಲ್ಲಿ ನಾನು ದೆಹಲಿಗೆ ಬಂದ ಮೊದಲ ದಿನದಿಂದ ಪ್ರಣಬ್ ಅವರ ಆಶೀರ್ವಾದ ಮಾರ್ಗದರ್ಶಸನ ನನ್ನ ಮೇಲೆ ಇತ್ತು. ಅವರೊಂದಿಗೆ ಮಾತನಾಡುವುದೇ ಒಂದು ಖುಷಿಯ ಸಂಗತಿಯಾಗಿತ್ತು.  ಓಂ ಶಾಂತಿ.

ಎಚ್‌ಡಿ ದೇವೇಗೌಡ; ಪ್ರಣಬ್ ಅಗಲಿಗೆ ತುಂಬಾ ನೋವು ತಂದಿದೆ. ನಮ್ಮಿಮ್ಮಬರ ನಡುವೆ ದಶಕಗಳ ಬಾಂಧವ್ಯ ಇತ್ತು. ಅವರ ಗಟ್ಟಿತನವನ್ನು ನಾನು ಯಾವಾಗಲೂ ಮೆಚ್ಚಿಕೊಂಡಿದ್ದೆ.

ವೆಂಕಯ್ಯ ನಾಯ್ಡು; ಹಳ್ಳಿಯೊಂದರಲ್ಲಿ ಜನಸಿ ತಮ್ಮ ಪರಿಶ್ರಮದಿಂದಲೇ ಮೇಲೆ ಬಂದ ಪ್ರಣಬ್ ಅಗಲಿಕೆ ನೋವು ತಂದಿದೆ. ತಮ್ಮ ಪರಿಶ್ರಮದಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿದ್ದರು.

 

Follow Us:
Download App:
  • android
  • ios