ಪ್ರಧಾನಿ ಸಿಂಗ್‌ಗೆ ಅಗೌರವ ತೋರಿದ ರಾಹುಲ್ ಗಾಂಧಿ ವಜಾ ಆಗಿಲ್ಲ, ಪ್ರಣಬ್ ಪುತ್ರಿ ಆಕ್ರೋಶ!

ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ನಿಧನದಲ್ಲಿ ಬಿಜೆಪಿ ರಾಜಕೀಯ ಮಾಡಿದೆ ಎಂದು  ಕಾಂಗ್ರೆಸ್ ಆರೋಪಿಸಿದೆ. ಇದರ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ದಿ.ಪ್ರಣಬ್ ಮುಖರ್ಜಿ ಪುತ್ರಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಪ್ರತಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದೆ. ಮನ್‌ಮೋಹನ್ ಸಿಂಗ್ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದ ರಾಹುಲ್ ಗಾಂಧಿಗೆ ಯಾವತ್ತಾದರೂ ವಜಾ ಆಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

Pranab Mukherjee daughter slams congress over manmohan singh memorial politics ckm

ನವದೆಹಲಿ(ಡಿ.29) ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅಂತ್ಯಸಂಸ್ಕಾರ ಹಾಗೂ ಮೆಮೋರಿಯಲ್ ಕುರಿತು ಕಾಂಗ್ರೆಸ್ ಬಿಜೆಪಿ ನಡುವೆ ಬಡಿದಾಟ ಆರಂಭಗೊಂಡಿದೆ. ಮನ್‌ಮೋಹನ್ ಸಿಂಗ್ ಅಂತ್ಯಸಂಸ್ಕಾರವನ್ನು ಕೇಂದ್ರ ಬಿಜೆಪಿ ಸರ್ಕಾರ ಸರಿಯಾಗಿ ನಡೆಸಿಲ್ಲ ಅನ್ನೋ ಆರೋಪ ಒಂದಾದರೆ, ಸಿಂಗ್ ಪ್ರತ್ಯೇಕ ಮೆಮೋರಿಯಲ್ ಕುರಿತು ಮತ್ತೊಂದು ರಾಜಕೀಯ ನಡೆಯುತ್ತಿದೆ. ಆರೋಪ-ಪ್ರತ್ಯಾರೋಪಗಳು ಜೋರಾಗುತ್ತಿದೆ. ಇದರ ನಡುವೆ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ದಿವಂಗತ ಪ್ರಣಬ್ ಮುಖರ್ಜಿ ಪುತ್ರಿ ಶರ್ಮಿಷ್ಠ ಮುಖರ್ಜಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.  ಕಾಂಗ್ರೆಸ್ ಇದೀಗ ಸಿಖ್ ಸಮುದಾಯಕ್ಕೆ ಅವಮಾನ ಎಂದು ಆರೋಪಿಸುತ್ತಿದೆ. ಇದೇ ರಾಹುಲ್ ಗಾಂಧಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಅವಮಾನ ಮಾಡಿದ್ದರು. ಆದರೆ ರಾಹುಲ್ ಗಾಂಧಿ ವಜಾ ಆಗಲಿಲ್ಲ ಎಂದು ಶರ್ಮಿಷ್ಠ ಮುಖರ್ಜಿ ಹೇಳಿದ್ದಾರೆ.

2013ರಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ಬಹಿರಂಗವಾಗಿ ಹರಿದು ಹಾಕಿದ್ದರು. ಇದು ಪ್ರಧಾನಿಗೆ ಮಾಡಿದ ಅಪಮಾನವಾಗಿದೆ. ಅಹಂಕಾರ ಹಾಗೂ ದರ್ಪದ ನಡೆಯಾಗಿದೆ. ಅಂದು ಪ್ರಧಾನಿ ಸಿಂಗ್ ವಿದೇಶ ಪ್ರವಾಸದಲ್ಲಿದ್ದರು. ಇತ್ತ ರಾಹುಲ್ ಗಾಂಧಿಗೆ ಪಕ್ಷದಿಂದ ಯಾವ ಶಿಕ್ಷೆಯೂ ಅಗಲಿಲ್ಲ. ಬೇರೆ ಯಾರೇ ಆಗಿದ್ದರೂ ಪಕ್ಷದಿಂದ ವಜಾಗೊಳ್ಳುತ್ತಿದ್ದರು. ಇಲ್ಲಿ ಹಾಗೇ ಆಗಲಿಲ್ಲ ಕಾರಣ ರಾಜೀವ್ ಗಾಂಧಿ ಎಂದು ನ್ಯೂಸ್ 18 ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮನಮೋಹನ್ ಸಿಂಗ್ ಅಂತ್ಯಸಂಸ್ಕಾರದ ಸ್ಥಳ ಮತ್ತು ಸ್ಮಾರಕ ನಿರ್ಮಾಣ ವಿಷಯ: ಕಾಂಗ್ರೆಸ್‌-ಬಿಜೆಪಿ ಜಟಾಪಟಿ

ಮೆಮೋರಿಯಲ್ ಕುರಿತು ಕಾಂಗ್ರೆಸ್ ಮಾಡಿದ ಆಗ್ರಹವನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಇದೀಗ ಇದೇ ವಿಚಾರ ಹಿಡಿದು ವಿವಾದ ಎಬ್ಬಿಸುವ ಅನಿವಾರ್ಯತೆ ಏನಿತ್ತು ಎಂದು ಶರ್ಮಿಷ್ಠಾ ಮುಖರ್ಜಿ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಬಿಜೆಪಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಉತ್ತಮ ನಾಯಕತ್ವದಲ್ಲಿ ಮುನ್ನಡೆಯುತ್ತಿದೆ ಎಂದು ಶರ್ಮಿಷ್ಠಾ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಯಾಕೆ ರೀತಿ ಮಾಡುತ್ತಿದೆ ಅನ್ನೋದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ನಾಯಕರನ್ನು ಬಿಜೆಪಿ ಉತ್ತಮವಾಗಿ ಗೌರವಿಸಿದೆ. ಗುಲಾಮ್ ನಬಿ ಆಜಾದ್, ತರುಣ್ ಗೋಗೋಯ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಆದರೆ ನಡೆಯನ್ನು ಕಾಂಗ್ರೆಸ್ ಅನುಸರಿಸಿದೆಯಾ? ಎಂದು ಶರ್ಮಿಷ್ಠಾ ಮುಖರ್ಜಿ ಪ್ರಶ್ನಿಸಿದ್ದಾರೆ. ಪಿವಿ ನರಸಿಂಹ ರಾವ್ ಇದೀಗ ಮನ್‌ಮೋಹನ್ ಸಿಂಗ್ ಎಲ್ಲರ ವಿಚಾರದಲ್ಲೂ ಕಾಂಗ್ರೆಸ್ ಅತ್ಯಂತ ಕೆಟ್ಟ ರಾಜಕೀಯ ಮಾಡುತ್ತಿದೆ ಎಂದು ಶರ್ಮಿಷ್ಠಾ ಮುಖರ್ಜಿ ಆರೋಪಿಸಿದ್ದಾರೆ. ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಇದಕ್ಕೆ ನನ್ನ ತಂದೆ ನಿಧನದ ಬಳಿಕ ಕಾಂಗ್ರೆಸ್ ನಡೆದುಕೊಂಡ ರೀತಿಯೇ ಸಾಕ್ಷಿ ಎಂದು ಹಲವು ಘಟನೆ ಬಿಚ್ಚಿಟ್ಟಿದ್ದಾರೆ. 

ಬಿಜೆಪಿ ಸಿಖ್ ಸಮುದಾಯಕ್ಕೆ ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದರ ಬೆನ್ನಲ್ಲೇ ಶರ್ಮಿಷ್ಠ ಮುಖರ್ಜಿ ಮಾತುಗಳು, ಟ್ವೀಟ್ ಕಾಂಗ್ರೆಸ್‌ಗೆ ನುಂಗಲಾರದ ತುತ್ತಾಗಿ ಪರಿಣಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಶರ್ಮಿಷ್ಠಾ, ಕಾಂಗ್ರೆಸ್ ನಾಯಕರು ನಿಧನರಾದಾಗ ಕಾಂಗ್ರೆಸ್ ರಾಜಕೀಯ ಮಾಡುತ್ತೆ ಎಂದು ಪರೋಕ್ಷವಾಗಿ ಪ್ರಣಬ್ ಘಟನೆ ಮೂಲಕ ವಿವರಿಸಿದ್ದಾರೆ.  

ತಂದೆ(ಪ್ರಣಬ್ ಮುಖರ್ಜಿ ನಿಧನರಾದಾಗ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಬೇಸರ ತರಿಸಿದೆ. ಕಾಂಗ್ರೆಸ್ ಕಾರ್ಯಕಾರಣಿ ಸಭೆ ಕರೆದು ಕನಿಷ್ಠ ಶ್ರದ್ಧಾಂಜಲಿ ಸಲ್ಲಿಸಿಲ್ಲ. ಈ ಕುರಿತು ವಿಚಾರಿಸಿದಾಗ, ರಾಷ್ಟ್ರಪತಿಗಳಿಗೆ ಈ ರೀತಿ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ ಕರೆದು ಶ್ರದ್ಧಾಂಜಲಿ ಸಲ್ಲಿಸವುದಿಲ್ಲ ಎಂದಿದ್ದರು. ಆದರೆ ಪ್ರಣಬ್ ಮುಖರ್ಜಿ ಡೈರಿಯಲ್ಲಿ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ಕೆ ನಾರಾಯಣ್ ನಿಧನರಾದಾಗ ನನ್ನ ತಂದೆ ಶ್ರದ್ಧಾಂಜಲಿ ಮಾತುಗಳನ್ನು ಬರೆದಿದ್ದರು ಎಂದು ಶರ್ಮಿಷ್ಠಾ ಮುಖರ್ಜಿ ಹೇಳಿದ್ದಾರೆ.

News Hour: ಮನಮೋಹನ್ ಸಿಂಗ್ ಅಜರಾಮರ, ಶುರುವಾಯ್ತು ಸ್ಮಾರಕ ಸಮರ!
 

Latest Videos
Follow Us:
Download App:
  • android
  • ios