Asianet Suvarna News Asianet Suvarna News

ವಿಜಯನಗರ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣ..!

*  ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ದರೂ ತಪ್ಪದ ಬವಣೆ
*  ಖಾಸಗಿ ಬೋರ್‌ವೆಲ್‌ನಿಂದ ನೀರು ಒದಗಿಸಲು ಸೂಚನೆ
*  ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ 

Drinking Water Problem in Vijayanagara District grg
Author
Bengaluru, First Published Apr 9, 2022, 10:27 AM IST

ಹೊಸಪೇಟೆ(ಏ.09):  ವಿಜಯನಗರ(Vijayanagara) ಜಿಲ್ಲೆಯಲ್ಲಿ ಬಿಸಿಲಿನ ಆರ್ಭಟ ಜೋರಾಗಿದ್ದು, ಕುಡಿಯುವ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ. ಹಾಗಾಗಿ ಜಿಲ್ಲಾಡಳಿತ ಖಾಸಗಿ ಬೋರ್‌ವೆಲ್‌ನಿಂದ ನೀರು ಒದಗಿಸಲು ಈಗಾಗಲೇ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ರವಾನಿಸಿದೆ.

ತುಂಗಭದ್ರಾ ಜಲಾಶಯ(TB Dam) ಪಕ್ಕದಲ್ಲೇ ಇದ್ದರೂ ಹೊಸಪೇಟೆ(Hosapete) ನಗರ ಸೇರಿ ತಾಲೂಕಿನಲ್ಲಿ ಕುಡಿವ ನೀರಿಗಾಗಿ ಪರದಾಟ ಇನ್ನೂ ಹಾಗೇ ಮುಂದುವರೆದಿದೆ. ಹೊಸಪೇಟೆ ನಗರಸಭೆ, ಕಮಲಾಪುರ ಹಾಗೂ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ, 14 ಗ್ರಾಮ ಪಂಚಾಯಿತಿಗಳ ಪೈಕಿ ಕೆಲ ಕಡೆ ಬಿಟ್ಟರೆ ನಗರ, ಪಟ್ಟಣ ಸೇರಿ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ನೀರಿನ ಅಭಾವ ಇದೆ. ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ, ರಾಜಪುರ ಗ್ರಾಮಕ್ಕೆ ಖಾಸಗಿ ಕೊಳವೆ ಬಾವಿ ಮೂಲಕ ಸಮರ್ಪಕವಾಗಿ ನೀರಿನ ಸರಬರಾಜ ಮಾಡುತ್ತಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯದ್ದು ಈ ಸಮಸ್ಯೆಯಾದರೆ, ಉಳಿದ ತಾಲೂಕುಗಳಾದ ಹರಪನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿಯಲ್ಲೂ ನೀರಿನ ಸಮಸ್ಯೆ ಇದೆ.

Hosapete: ಎಸಿ ವಿಷಾನಿಲ ಸೋರಿಕೆಯಿಂದ ಮನೆಗೆ ಬೆಂಕಿ: ದಟ್ಟ ಹೊಗೆಯಿಂದ ಹೊರಬರಲಾರದೇ ನಾಲ್ವರ ಸಾವು

699 ಶುದ್ಧ ನೀರಿನ ಘಟಕ

ವಿಜಯನಗರ ಜಿಲ್ಲೆಯಲ್ಲಿ 699 ಶುದ್ಧ ನೀರಿನ ಘಟಕಗಳಿವೆ. ಈ ಪೈಕಿ 31 ದುರಸ್ತಿಯಲ್ಲಿವೆ. ಈ ಘಟಕಗಳನ್ನು ದುರಸ್ತಿಗೊಳಿಸಲು ಈಗಾಗಲೇ ಜಿಪಂ ಸೂಚಿಸಿದೆ. ಹೊಸಪೇಟೆಯ ಪಾಪಿನಾಯಕನಹಳ್ಳಿ, ಡಣಾಪುರ ಗ್ರಾಮಗಳು ಸೇರಿ ವಿವಿಧ ಗ್ರಾಮಗಳ 8 ಘಟಕಗಳು ಸ್ಥಗಿತವಾಗಿದೆ. ಇನ್ನು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಆರು ವರ್ಷಗಳು ಆದರೂ ಕುಡಿವ ನೀರಿನ ಸಮಸ್ಯೆಯಿಂದ ಪಾರಾಗಿಲ್ಲ. ಪಾವಗಡ ಕುಡಿಯುವ ನೀರಿನ ಯೋಜನೆ ಆರಂಭವಾಗಿದ್ದರೂ, ನೀರು ಮಾತ್ರ ಪೂರೈಕೆ ಆಗುತ್ತಿಲ್ಲ. ಈ ಭಾಗದ 15 ಗ್ರಾಮಗಳಲ್ಲಿ ಫೆä್ಲೕರೈಡ್‌ ನೀರೆ ಗತಿಯಾಗಿದೆ. ಹೊಸಪೇಟೆ ನಗರ ಹಾಗೂ ಕಮಲಾಪುರ ಪಟ್ಟಣದಲ್ಲೂ ಕುಡಿವ ನೀರಿನ ಸಮಸ್ಯೆ ಇದೆ. ಹೊಸಪೇಟೆ ನಗರದಲ್ಲಿ 24/7 ಯೋಜನೆ ಜಾರಿಯಾದರೂ ಅನುಷ್ಠಾನಕ್ಕೆ ಬಂದಿಲ್ಲ.

ಹೂವಿನಹಗಡಲಿಯ(Huvinahhadagali) ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಇದೆ. ಹರಪನಹಳ್ಳಿಯ ಬಾಗಳಿ, ಮತ್ತಿಹಳ್ಳಿ, ಎನ್‌. ಸಿರನಹಳ್ಳಿ, ಅರಸಿಕೆರೆ, ಉಚ್ಚಂಗಿದುರ್ಗ ಗ್ರಾಮಗಳಲ್ಲೂ ಕುಡಿವ ನೀರಿನ ಬವಣೆ ಇದೆ.
ಹಗರಿಬೊಮ್ಮನಹಳ್ಳಿಯ ಪಿಲೋಬನಹಳ್ಳಿ, ಮಾದೂರು ಸೇರಿದಂತೆ ಕೆಲ ಹಳ್ಳಿಗಳಲ್ಲಿ ಸಮಸ್ಯೆ ಇದೆ. ಕೂಡ್ಲಿಗಿಯ ಕಾನಾಮಡಗು, ಹುಲಿಕೆರೆ, ಕಾತಕೇಯ್ಯನಹಟ್ಟಿಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಕೊಟ್ಟೂರು ತಾಲೂಕಿನ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ(Drinking Water) ಸಮಸ್ಯೆ ಕಾಣಿಸಿದೆ.

ವಿಜಯನಗರ ಜಿಲ್ಲೆಯಲ್ಲಿ ಜಲ ಜೀವನ್‌ ಮಿಷನ್‌ ಯೋಜನೆ(Jala Jeevan Mission Project) ಜಾರಿಯಲ್ಲಿದ್ದರೂ ಹಳ್ಳಿ, ತಾಂಡಾ, ಕ್ಯಾಂಪ್‌, ಕಾಲೋನಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಹಾಗೇ ಉಳಿದಿದೆ.

ವಿಜಯನಗರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಲಾಗಿದೆ. ಸಮಸ್ಯೆ ಇರುವ ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ 15ನೇ ಹಣಕಾಸಿನ ಅನುದಾನ ಬಳಕೆಗೆ ಪಿಡಿಒಗಳಿಗೆ ಸೂಚಿಸಲಾಗಿದೆ ಅಂತ ವಿಜಯನಗರ ಜಿಪಂ ಸಿಇಒ ಹರ್ಷಲ್‌ ಬೋಯರ್‌ ನಾರಾಯಣರಾವ್‌ ತಿಳಿಸಿದ್ದಾರೆ. 

ಗೋರೂಚ ಸೇರಿದಂತೆ ಮೂವರಿಗೆ ನಾಡೋಜ ಗೌರವ

ಬೇಸಿಗೆಯಲ್ಲಿ ಹೊಸಪೇಟೆಯ ಮರಿಯಮ್ಮಹಳ್ಳಿ ಭಾಗಕ್ಕೆ ಸ್ವಲ್ಪ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಉಳಿದ ಎಲ್ಲಾ ಗ್ರಾಮಗಳಿಗೆ ಸಮರ್ಪಕವಾಗಿ ನೀರಿನ ಸರಬರಾಜ ಮಾಡಲಾಗುತ್ತದೆ ಅಂತ ಹೊಸಪೇಟೆ ಗ್ರಾಮೀಣ ಕುಡಿವ ನೀರಿನ ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಎಇಇ ಜೆ.ಆರ್‌. ಪಂಪಾಪತಿ ಹೇಳಿದ್ದಾರೆ. 

ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇದ್ದರೂ ಹೊಸಪೇಟೆ, ಕಮಲಾಪುರದಲ್ಲೇ ಕುಡಿವ ನೀರಿನ ಸಮಸ್ಯೆ ಇದೆ. ಇನ್ನೂ ಉಳಿದ ಕಡೆ ಸಮಸ್ಯೆ ಹೇಳತೀರದಾಗಿದೆ ಅಂತ ಹೊಸಪೇಟೆ, ಕಮಲಾಪುರ ನಿವಾಸಿಗಳಾದ ಮಣಿಕಂಠ್‌, ನರೇಂದ್ರ, ಕಿರಣ್‌, ಸಚಿನ್‌, ಯುವರಾಜ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios