Asianet Suvarna News Asianet Suvarna News

ಸ್ವಂತ ಮನೆ ಕನಸು ನನಸಾಗಬೇಕಾ? ಪಿಎಂ ಆವಾಸ್ ಯೋಜನೆಗೆ ಹೀಗೆ ಅರ್ಜಿ ಸಲ್ಲಿಸಿ!

3ನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಪಿಎಂ ಆವಾಸ್ ಯೋಜನೆಯಡಿ ಹೆಚ್ಚುವರಿಯಾಗಿ 3 ಕೋಟಿ ಮನೆ ನಿರ್ಮಾಣಕ್ಕೆ ಅಂಕಿತ ಹಾಕಿದ್ದಾರೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ಪಡೆಯುವುದು ಹೇಗೆ, ಅರ್ಜಿ ಸಲ್ಲಿಕೆ, ಅರ್ಹತೆ ಏನು? ಇಲ್ಲಿದೆ ವಿವರ.

Pradhan Mantri Awas Yojana How to Apply PMAY House eligibility criteria ckm
Author
First Published Jun 14, 2024, 4:29 PM IST

ನವದೆಹಲಿ(ಜೂ.14) ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಈ ದೇಶದ ಪ್ರತಿಯೊಬ್ಬರಿಗೆ ನೆಮ್ಮದಿಯ ಮನೆ ಸಿಗುವಂತಾಗಬೇಕು ಅನ್ನೋದು ಪ್ರಧಾನಿ ನರೇಂದ್ರ ಮೋದಿ ಕನಸು. ಬಡವರು, ಆರ್ಥಿಕವಾಗಿ ಸಬಲೀಕರಣವಲ್ಲದ ಕುಟುಂಬಗಳಿಗೆ ಮನೆ ಒದಗಿಸಲು ಮೋದಿ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಇದೀಗ 3ನೇ ಬಾರಿಗೆ ಪ್ರಧಾನಿಯಾಗಿ ಮೊದಲ ಕ್ಯಾಬಿನೆಟ್ ಸಭೆ ನಡೆಸಿದ ಮೋದಿ, ಹೆಚ್ಚುವರಿಯಾಗಿ 3 ಕೋಟಿ ಮನೆ ನಿರ್ಮಾಣಕ್ಕೆ ಅಂಕಿತ ಹಾಕಿದ್ದಾರೆ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಈ ಮನೆ ನಿರ್ಮಾಣಕ್ಕೆ ಮೋದಿ ಸರ್ಕಾರ ಮುಂದಾಗಿದೆ. 

ಕಳೆದ 10 ವರ್ಷದಲ್ಲಿ ಮೋದಿ ಸರ್ಕಾರ 4.21 ಕೋಟಿ ಮನೆ ನಿರ್ಮಾಣ ಮಾಡಿದೆ. 2015ರಲ್ಲಿ ಆರಂಭಗೊಂಡ ಈ ಯೋಜನೆ ಬಡವರ ಪಾಲಿನ ಅತ್ಯವಶ್ಯಕ ಹಾಗೂ ಮೂಲಭೂತ ಯೋಜನೆಯಾಗಿ ಹೊರಹೊಮ್ಮಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ಪಡೆಯಲು ಇರಬೇಕಾದ ಅರ್ಹತೆ, ಅರ್ಜಿ ಸಲ್ಲಿಕೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

ಪಿಎಂ ಅವಾಸ್ ಯೋಜನೆಯಡಿ ಮನೆ ಪಡೆಯಲು ಇರಬೇಕಾದ ಮೊದಲ ಹಾಗೂ ಪ್ರಮುಖ ಅರ್ಹತೆ ಎಂದರೆ ಕುಟುಂಬದ ಆದಾಯ 18 ಲಕ್ಷ ರೂಪಾಯಿಗಿಂತ ಮೇಲಿರಬಾರದು. ಪಿಎಂ ಅವಾಸ್ ಯೋಜನೆಯಡಿ ಅರ್ಜಿ ಸಲ್ಲಿಸುವ ಕುಟುಂಬ ದೇಶದ ಯಾವುದೇ ಮೂಲೆಯಲ್ಲಿ ಸ್ವಂತ ಮನೆ ಹೊಂದಿರಬಾರದು.  ಇವರೆಡು ಅತ್ಯಂತ ಪ್ರಮುಖ ಅರ್ಹತೆಗಳಾಗಿವೆ.

ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಈ ಯೋಜನೆ ರೂಪಿಸಲಾಗಿದೆ.  ಆರ್ಥಿಕವಾಗಿ ಹಿಂದುಳಿದ ವರ್ಗ(EWS) ಹಾಗೂ ಕಡಿಮೆ ಆದಾಯದ ವರ್ಗ(LIG)ಕ್ಕೆ 6.50 ಬಡ್ಡಿ ದರದಲ್ಲಿ ಗರಿಷ್ಠ 6 ಲಕ್ಷ ರೂಪಾಯಿ ಸಬ್ಸಿಡಿ ಸಾಲ ದೊರೆಯಲಿದೆ. ಇನ್ನು ಮಧ್ಯಮ ಆದಾಯ ವರ್ಗ 1ರ ಅಡಿಯಲ್ಲಿ ಶೇಕಡಾ 4 ರಷ್ಟು ಬಡ್ಡಿದರದಲ್ಲಿ ಗರಿಷ್ಠ 9 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಲೋನ್ ಸಿಗಲಿದೆ. ಇನ್ನು ಮಧ್ಯಮ ಆಗಾಯ ವರ್ಗ 2ರ ಅಡಿಯಲ್ಲಿ ಶೇಕಡ 3ರ ಬಡ್ಡಿದರದಲ್ಲಿ ಗರಿಷ್ಠ 12 ಲಕ್ಷ ರೂಪಾಯಿ ಸಬ್ಸಿಡಿ ಸಾಲ ಸೌಲಭ್ಯ ಸಿಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಹಾಗೂ ಲಿಖಿತ ಅರ್ಜಿ ಎರಡೂ ಅವಕಾಶವಿದೆ. ಲಿಖಿತ ಅರ್ಜಿಗಳನ್ನು ಹತ್ತಿರದ ಸರ್ಕಾರಿ ಕೇಂದ್ರಗಳಲ್ಲಿ ನೀಡಿ ಖಾತ್ರಿ ಪಡಿಸಿಕೊಳ್ಳಬೇಕು.

ಪ್ರಧಾನಿ ಮೋದಿಯಿಂದ ಪಿಎಂ ಅವಾಸ್ ಯೋಜನೆಯಡಿ ನಿರ್ಮಿಸಿದ 19,000 ಮನೆ ಗೃಹಪ್ರವೇಶ!

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್‌ಸೈಟ್ (pmaymis.gov.in/) ಕ್ಲಿಕ್ ಮಾಡಬೇಕು
ವೆಬ್‌ಸೈಟ್‌ನ ಮೆನು ಬಟನ್‌ನಲ್ಲಿ Citizen Assessment ಕ್ಲಿಕ್ ಮಾಡಬೇಕು
ಹೊಸ ಪೇಜ್ ತೆರೆದುಕೊಳ್ಳಲಿದೆ. ಬಳಿಕ ಆಧಾರ್ ಕಾರ್ಡ್ ಸಂಖ್ಯೆ ನಮೂದಿಸಬೇಕು
ಆಧಾರ್ ಕಾರ್ಡ್ ಸಂಖ್ಯೆ ವೆರಿಫಿಕೇಶನ್ ಬಳಿಕ ಅಪ್ಲಿಕೇಶನ್ ಪೇಜ್ ತೆರೆದುಕೊಳ್ಳಲಿದೆ
ಹೆಸರು , ವಿಳಾಸ, ಆದಾಯ, ಬ್ಯಾಂಕ್ ಖಾತೆ ಸೇರಿದಂತೆ ಕೆಲ ಮಾಹಿತಿಗಳನ್ನೊಳಗೊಂಡ ಅಪ್ಲಿಕೇಶನ್ ಭರ್ತಿ ಮಾಡಬೇಕು
ನೀವು ನಮೂದಿಸಿದ ಮಾಹಿತಿಗಳು ಸರಿಯಾಗಿದೆಯಾ ಎಂದು ಪರಿಶೀಲಿಸಿಕೊಳ್ಳಬೇಕು, ಬಳಿಕ ಸೇವ್ ಆಯ್ಕೆ ಕ್ಲಿಕ್ ಮಾಡಬೇಕು
 

Latest Videos
Follow Us:
Download App:
  • android
  • ios