- Home
- Special
- Ayodhya Dharma Dhwaja: ಅಯೋಧ್ಯೆಯಲ್ಲಿ Narendra Modi ಭಯದಿಂದ ಕೈಮುಗಿದಿಲ್ಲ, ಅದು ನಾಗ ಹಸ್ತ ಕಂಪನ ಕ್ರಿಯೆ!
Ayodhya Dharma Dhwaja: ಅಯೋಧ್ಯೆಯಲ್ಲಿ Narendra Modi ಭಯದಿಂದ ಕೈಮುಗಿದಿಲ್ಲ, ಅದು ನಾಗ ಹಸ್ತ ಕಂಪನ ಕ್ರಿಯೆ!
Dharma Dhwaja Ayodhya: ಕೋಟಿ ಭಾರತೀಯರ ಕನಸಿನಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಯ್ತು. ಆ ಬಳಿಕ ಇಲ್ಲಿ ನಿರಂತರವಾಗಿ ಒಂದಿಲ್ಲೊಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಿರುತ್ತಾರೆ. ರಾಮಧ್ವಜ ಸ್ಥಾಪನೆ ಆಗಿದೆ.

ಧರ್ಮಧ್ವಜ ಸ್ಥಾಪನೆ
ಇತ್ತೀಚೆಗೆ, ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆ ಮಾಡಲಾಗಿದೆ. ಇದು ನಿಜಕ್ಕೂ ರಾಮ ಭಕ್ತರಿಗೆ ಸಿಕ್ಕಾಪಟ್ಟೆ ಸಂತೋಷ ನೀಡಿದ್ದು, ಮತ್ತೊಮ್ಮೆ ಭಕ್ತಿಯ ವಾತಾವರಣವನ್ನು ನೀಡಿದೆ. ಈ ಧ್ವಜ ಸ್ಥಾಪನೆಯು ಕೇವಲ ಒಂದು ಧಾರ್ಮಿಕ ವಿಧಿಯಾಗಿಲ್ಲ, ಬದಲಿಗೆ ಶತಮಾನಗಳ ಕನಸಾಗಿದೆ, ಎಷ್ಟೋ ಜನರ ಹೋರಾಟದ ಸಂಕೇತವಾಗಿದೆ.
ಸನಾತನ ಸಂಸ್ಕೃತಿಯ ಪ್ರತೀಕ
ರಾಮಧ್ವಜ ಹಿಂದೂ ಧರ್ಮ, ಸನಾತನ ಸಂಸ್ಕೃತಿಯ ಪ್ರತೀಕವಾಗಿದೆ. ಕೇಸರಿ ಬಣ್ಣವು ತ್ಯಾಗ, ಧೈರ್ಯ, ಜ್ಞಾನದ ಸಂಕೇತವಾಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ಈ ಧ್ವಜವು ಹಾರಾಡುತ್ತದೆ. ಈ ಮೂಲಕ ಇಡೀ ಪ್ರದೇಶಕ್ಕೆ ಧಾರ್ಮಿಕ, ಆಧ್ಯಾತ್ಮಿಕ ಶಕ್ತಿಯು ಸಿಕ್ಕಿದೆ ಎಂದು ಭಕ್ತರು ಭಾವಿಸುವುದುಂಟು.
ಶ್ರೀರಾಮನ ನೆಲೆ
ರಾಮ ಮಂದಿರದ ಆವರಣದಲ್ಲಿ ಅಥವಾ ಪ್ರಮುಖ ಸ್ಥಳದಲ್ಲಿ ಈ ಧ್ವಜವನ್ನು ಹಾಕಲಾಗಿದ್ದು, ಈ ಮೂಲಕ ಶಾಶ್ವತವಾಗಿ ಅಯೋಧ್ಯೆ ಇನ್ನು ಮುಂದೆ ಶ್ರೀರಾಮನ ನೆಲೆ ಅಥವಾ ಸ್ಥಳ ಎಂಬ ಸಂದೇಶವನ್ನು ಸಾರಲಾಗಿದೆ.
ಧಾರ್ಮಿಕ ಪುನರುಜ್ಜೀವನಕ್ಕೆ ಮತ್ತೊಂದು ಹೆಜ್ಜೆ
ನಿಜಕ್ಕೂ ಅಯೋಧ್ಯೆಯ ಧಾರ್ಮಿಕ ಪುನರುಜ್ಜೀವನಕ್ಕೆ ಮತ್ತೊಂದು ಹೆಜ್ಜೆ ಎನ್ನಬಹುದು. ಇದರಿಂದ ಲಕ್ಷಾಂತರ ಭಕ್ತರಿಗೆ ಸ್ಫೂರ್ತಿ ಸಿಗುವುದು. ಇದು ಭಾರತದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣವಾಗಿದೆ.
ನಾಗ ಹಸ್ತ ಕಂಪನ ಎಂದರೇನು?
ಭಾರತೀಯ ಯೋಗ ಪರಂಪರೆಯ ಜ್ಞಾನ ಮಹಾಸಾಗರದಲ್ಲಿ “ನಾಗ ಹಸ್ತ ಕಂಪನ” ಎನ್ನುವ ಹೆಸರಿನ ಅತಿ ಸೂಕ್ಷ್ಮ ತಂತ್ರವಿದೆ. ಬೆರಳುಗಳ ನಾಜೂಕಾದ ಕಂಪನದಂತೆ, ನಾಗರಾಜನ ಚಲನೆಯಂತಹ ಕಂಪನವನ್ನು ಸೃಷ್ಟಿಸಿದಾಗ ಸ್ಥಿತಪ್ರಜ್ಞ ನಿಶ್ಚಲತೆಯಿಂದಿರುವ, ಸುಪ್ತವಾಗಿರುವ ಕುಂಡಲಿನಿ ಮತ್ತು ಅನಾಹತ ಚಕ್ರಗಳನ್ನು ಜಾಗೃತಗೊಳಿಸುವ, ಸುಪ್ತಚೇತನಗಳನ್ನು ಅವಾಹನಗೊಳಿಸುವ ಕ್ರಿಯೆ ಇದು.
ಸರ್ಪವನ್ನು ಭಯದಿಂದ ನೋಡುವುದಿಲ್ಲ
ಉಪನಿಷತ್ತಿನ ದೃಷ್ಟಿಯಲ್ಲಿ ಸರ್ಪವನ್ನು ಭಯದಿಂದ ನೋಡುವುದಿಲ್ಲ—ಅದರಲ್ಲಿರುವ ಜ್ಞಾನವನ್ನು ಗೌರವಿಸುತ್ತದೆ. ನಾಗರಾಜನು ಜಾಗೃತಿಯ ಪ್ರತೀಕ, ಶರೀರದ ಮಧ್ಯವಾಹಿನಿಯಲ್ಲಿ ಮಲಗಿರುವ ಪ್ರಾಣಶಕ್ತಿಯ ರೂಪಕ. ಮೂಲಾಧಾರದಲ್ಲಿ ನಿದ್ರಿತವಾಗಿರುವ ಕುಂಡಲಿನಿ ಶಕ್ತಿಯ ಅವತಾರ ಹಾಗಾಗಿ ಈ ಹಸ್ತಮುದ್ರೆಗೆ ನಾಗ ಎನ್ನುವ ಶೀರ್ಷಿಕೆ ಸೇರಿಕೊಂಡಿದೆ.

