ರಾಹುಲ್ ಗಾಂಧಿ ಪ್ರತಿಭಟನಾ ರ‍್ಯಾಲಿ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ವಿಪಕ್ಷಗಳ ಒಗ್ಗೂಡಿಸಿದ ರಾಹುಲ್ ಗಾಂಧಿ, ವಿರೋಧ ಪಕ್ಷದ ನಾಯಕನ ಹೋರಾಟಕ್ಕೆ ಬೆದರಿದ ಬಿಜೆಪಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ಪ್ರತಿಭಟನಾ ರ‍್ಯಾಲಿ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಕೋಲಾಹಲ ಶುರುವಾಗಿದೆ.

ನವದೆಹಲಿ (ನ.05) ರಾಹುಲ್ ಗಾಂಧಿ ನವೆಂಬರ್ 1ರಂದು ಸಂಘಟಿಸಿದ ವೋಟ್ ಚೋರಿ ಪ್ರತಿಭಟನಾ ರ‍್ಯಾಲಿ ಬಳಿಕ ಕಾಂಗ್ರೆಸ್ ಹಿರಿ ಹಿರಿ ಹಿಗ್ಗಿದೆ. ಹರಿದು ಹಂಚಿಹೋಗಿದ್ದ ವಿಪಕ್ಷಗಳನ್ನು ರಾಹುಲ್ ಗಾಂಧಿ ಒಗ್ಗೂಡಿಸಿದ್ದಾರೆ, ವೋಟ್ ಚೋರಿ ಪ್ರತಿಭಟನೆಗೆ ಜನಸಾಗರವೇ ಹರಿದು ಬಂದಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಪ್ರತಿಭಟನಾ ರ್ಯಾಲಿಯಿಂದ ಬಿಜೆಪಿ ಹಾಗೂ ಮೋದಿ ಸರ್ಕಾರ ಬೆಚ್ಚಿ ಬಿದ್ದಿದೆ ಎಂದಿತ್ತು. ಆದರೆ ಈ ಪ್ರತಿಭಟನಾ ರ‍್ಯಾಲಿ ಬಳಿಕ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ರಾಹುಲ್ ಗಾಂಧಿ ಪ್ರತಿಭಟನಾ ರ‍್ಯಾಲಿ ಬಳಿಕ ಕಾಂಗ್ರೆಸ್ ಪಾರ್ಟಿಯಿಂದ ಹಲವು ಮುಖಂಡರು, ಜಿಲ್ಲಾಧಿಕಾರಿಗಳು, ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಂದಿಯನ್ನು ಅಮಾನತು ಮಾಡಲಾಗಿದೆ.

ರಾಮ್‌ಲೀಲಾ ಮೈದಾನದಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' (INDIA) ಮೈತ್ರಿಕೂಟ ಬೃಹತ್ ರ‍್ಯಾಲಿ ಹಾಗೂ ಪ್ರತಿಭಟನೆ ಆಯೋಜಿಸಿತ್ತು. ಆದರೆ ಈ ಪ್ರತಿಭಟನಾ ರ‍್ಯಾಲಿಗೆ ಗೈರಾದ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳನ್ನು ಅಮಾನತು ಮಾಡಿದೆ. 8 ರಾಜ್ಯಗಳ ಒಟ್ಟು 215 ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ತಕ್ಷಣದಿಂ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.

2014ರಿಂದ ಇಲ್ಲೀವೆಗೆ ಕಾಂಗ್ರೆಸ್ ಹಾಗೂ ವಿಪಕ್ಷಗಳು ಹಮ್ಮಿಕೊಂಡ ಬೃಹತ್ ಪ್ರತಿಭಟನಾ ರ‍್ಯಾಲಿಯಲ್ಲಿ ನವೆಂಬರ್ 1ರಂದು ಹಮ್ಮಿಕೊಂಡ ಪ್ರತಿಭಟನಾ ರ‍್ಯಾಲಿ ಕೂಡ ಒಂದಾಗಿದೆ. ಈ ಪ್ರತಿಭಟನಾ ರ‍್ಯಾಲಿಗೆ ಪ್ರತಿ ಜಿಲ್ಲಾವಾರು, ತಾಲೂಕುವಾರುಗಳಿಂದ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಕಡ್ಡಾಯವಾಗಿ ಪಾಲ್ಗೊಳ್ಳಲು ಸೂಚಿಸಲಾಗಿತ್ತು. ರ‍್ಯಾಲಿಯಲ್ಲಿ ಕಾರ್ಯಕರ್ತರ ಹಾಜರಾತಿಯನ್ನು ನಿಖರವಾಗಿ ಪತ್ತೆಹಚ್ಚಲು ಯೂತ್ ಕಾಂಗ್ರೆಸ್ ನೂತನ ತಂತ್ರಜ್ಞಾನವನ್ನು ಬಳಸಿತ್ತು. ಕಾರ್ಯಕ್ರಮ ಆಯೋಜನೆಗೊಂಡಿದ್ದ ದೆಹಲಿಯ ಮಿಂಟೋ ರಸ್ತೆಯ ಅಸೆಂಬ್ಲಿ ಪಾಯಿಂಟ್‌ನಲ್ಲಿ ಬಾರ್‌ಕೋಡ್ ಸ್ಕ್ಯಾನರ್‌ಗಳನ್ನು ಹಾಗೂ ಕಾರ್ಯಕರ್ತರ ಲೊಕೇಶನ್, ಸಮಯ ಟ್ರ್ಯಾಕ್ ಮಾಡಲು ವಿಶೇಷ ಮೊಬೈಲ್ ಆಪ್ ಬಳಸಲಾಗಿತ್ತು. ಈ ಆ್ಯಪ್ ಮೂಲಕ ಲೊಕೇಶನ್ ಹಂಚಿಕೊಳ್ಳದ ಹಾಗೂ ನಿಯಮ ಪಾಲಿಸದ ಪದಾಧಿಕಾರಿಗಳನ್ನು ಗುರುತಿಸಿ ಅಮಾನತುಗೊಳಿಸಲಾಗಿದೆ.

ಮುಂದೆ ಸೂಚನೆವರಗೆ ಅಮಾನತು

ಯೂತ್ ಕಾಂಗ್ರೆಸ್ ಈ ಅಮಾನಕು ಆದೇಶ ಹೊರಡಿಸಿದೆ. ಹಲವು ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೇರಿದಂತೆ ಪದಾಧಿಕಾರಿಗಳು ಅಮಾನತುಗೊಂಡಿದ್ದಾರೆ. ಮುಂದಿನ ಸೂಚನೆ ಬರುವವರೆಗೂ ಈ ಆದೇಶ ಜಾರಿಯಲ್ಲಿರಲಿದೆ ಎಂದು ಸ್ಪಷ್ಟಪಡಿಸಲಾಗಿದೆ. ಶಿಸ್ತುಬದ್ಧ ಸಂಘಟನೆಯ ಜವಾಬ್ದಾರಿ ಮರೆತು ರ‍್ಯಾಲಿಗೆ ಗೈರಾದ ಕ್ರಮವನ್ನು ಪಕ್ಷ ವಿರೋಧಿ ನಡವಳಿಕೆ ಹಾಗೂ ಶಿಸ್ತು ಉಲ್ಲಂಘನೆ ಎಂದು ಗಂಭೀರವಾಗಿ ಪರಿಗಣಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಅತೀ ಹೆಚ್ಚು

ಅತಿ ಹೆಚ್ಚು ಅಮಾನತು ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಯೂತ್ ಕಾಂಗ್ರೆಸ್‌ನ 60 ನಾಯಕರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ. ಗುಜರಾತ್‌ನಲ್ಲಿ 49 ನಾಯಕರು (ಅಹಮದಾಬಾದ್, ಅಂಬ್ರೇಲಿ, ಆನಂದ್, ಗಾಂಧಿನಗರ ಸೇರಿದಂತೆ ಹಲವು ಜಿಲ್ಲಾಧ್ಯಕ್ಷರು), ಜಾರ್ಖಂಡ್‌ನಲ್ಲಿ 32, ಪಶ್ಚಿಮ ಬಂಗಾಳದಲ್ಲಿ 26, ತೆಲಂಗಾಣದಲ್ಲಿ 14, ಹಿಮಾಚಲ ಪ್ರದೇಶದಲ್ಲಿ 13, ಉತ್ತರ ಪ್ರದೇಶದಲ್ಲಿ (ಸೆಂಟ್ರಲ್) 11 ಹಾಗೂ ಹರಿಯಾಣದಲ್ಲಿ 10 ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಪ್ರತಿಭಟನಾ ರ‍್ಯಾಲಿಯ ನಂತರ ರಾಹುಲ್ ಗಾಂಧಿ ಪ್ರತಿಭಟನೆ ಕುರಿತು ಹೆಮ್ಮೆಯಿಂದ ಬರೆದುಕೊಂಡಿದ್ದರು. ದೇಶದ ಜನರ ಧ್ವನಿ ದೆಹಲಿಯಲ್ಲಿ ಪ್ರಜ್ವಲಿಸಿತ್ತು. ದೆಹಲಿಯ ಬೀದಿಗಳಲ್ಲಿ ಬೃಹತ್ ಜನಸಾಗರ ಹರಿದುಬಂದಿತ್ತು. ಪ್ರಜಾಪ್ರಭುತ್ವ ಹಾಗೂ ಸತ್ಯವೇ ಗೆಲ್ಲುತ್ತದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಪ್ರಧಾನಿ ಮೋದಿ, ಅಮಿತ್ ಶಾ, ಗ್ಯಾನೇಶ್ ಕುಮಾರ್ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗ್ಯಾನೇಶ್ ಕುಮಾರ್ ಜೈಲಿಗೆ ಹೋಗುವುದು ಖಚಿತ ಎಂದಿದ್ದರು.